
ಮಾನ್ಯರೇ,
ಈಗ ಹೇಳಿ ಕೇಳಿ ಪರೀಕ್ಷಾ ಸಮಯ ಇಂತಹ ಸಂದರ್ಭದಲ್ಲಿ ಬಸ್ ಗಳನ್ನು ಒಪ್ಪಂದ ಮೇರೆಗೆ ಅವೇಶಗಳಿಗೆ ಕಳುಹಿಸುತ್ತಿರುವುದರಿಂದ ವಿವಿಧ ಸರ್ಕಾರಿ ಹಾಗೂ ಖಾಸಗಿ ನೌಕರರು ತಮ್ಮ ಕಛೇರಿಗಳಿಗೆ, ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ತೆರಳಲು ಹರಸಹಾಸ ಪಡಬೇಕಾಗಿದೆ, ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ತೆರಳುವುದು ತುಂಬಾ ಕಷ್ಷವಾಗುತ್ತಿದೆ, ಸಮಯ ಮೀರಿ ಪರೀಕ್ಷಾ ಕೇಂದ್ರಕ್ಕೆ ತೆರಳುವುದು ಅಲ್ಲಿನ ಸಿಬ್ಬಂದಿ ತಡವಾಗಿ ಬಂದಿದ್ದಕ್ಕೆ ಪರೀಕ್ಷಾ ಕೇಂದ್ರದ ಒಳಗಡೆ ಬಿಡದೇ ಕಟ್ಟುನಿಟ್ಟಿನ ಕ್ರಮಜರುಗಿಸಿ ವಿದ್ಯಾರ್ಥಿಗಳ ಭವಿಷ್ಯವನ್ನು ಸರ್ಕಾರವೇ ಹಾಳು ಮಾಡುತ್ತಿದೆ ಎಂದು ಹಲವಾರು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿ ಸರ್ಕಾರಕ್ಕೆ ಶಾಪಹಾಕಿದರು.
ಕಾಮೇಶ್ ಕುಡುತಿನಿ