ಇದು ನಿಮ್ಮವಾಣಿರಾಜಕುಮಾರ ರಸ್ತೆಅಗಲೀಕರಣ ಸರಿಯಾಗಿ ಆಗಲಿ


ಮಾನ್ಯರೇ,
ಬಳ್ಳಾರಿಯ ಡಾ. ರಾಜಕುಮಾರ್ ರಸ್ತೆ ಅಗಲೀಕರಣ ಬಳ್ಳಾರಿಯಲ್ಲಿ ನಡೆಯುತ್ತಿದ್ದು  ರಾಯಲ್ ವೃತ್ತದಿಂದ ನೇರವಾಗಿ ನಿರ್ಮಾಣವಾಗಿರುವ ಚರಂಡಿಯನ್ನು ರಾಘವ ಕಲಾಮಂದಿರದ ಮುಂದೆ ಮಾತ್ರ 12 ಅಡಿ  ತಿರುಗಿಸಿರುವುದು ಅನುಮಾನಕ್ಕೆಡೆಮಾಡಿದೆ.
ಪಕ್ಕದಲ್ಲಿರುವ ನಾರಾಯಣರಾವ್ ಉದ್ಯಾನವನ ಮಹಾನಗರ ಪಾಲಿಕೆಗೆ ಸೇರಿದ್ದು ಅದರ ಕಾಂಪೌಂಡ್ ಗೋಡೆಯನ್ನು ಹೋದ ವರ್ಷ ರಸ್ತೆ ಅಗಲೀಕರಣದ ಮಾರ್ಕಿಂಗ್ ಅನುಸಾರ ಕೆಡವಿ 12 ಅಡಿ ಹಿಂದಕ್ಕೆ ನಿರ್ಮಿಸಿರುತ್ತಾರೆ. ಆದರೆ ರಾಘವ ಕಲಾಮಂದಿರಕ್ಕೆ ಸೇರಿದ ಅನುಗ್ರಹ ಹೋಟೆಲ್ ಒಳಗೆ ಕಳೆದ ವರ್ಷ ಕೆಂಪು ಗುರುತು ಮಾಡಿದ್ದು ಅದರಂತೆ ರಸ್ತೆ  ಅಗಲೀಕರಣ ಮಾಡಬೇಕಿತ್ತು. ರಾಘವ ಕಲಾಮಂದಿರದ ಕಾಂಪೌಂಡ್ ಸರಿ ಎನ್ನುವುದಾದರೆ ಕಳೆದ ವರ್ಷ ಮಹಾನಗರ ಪಾಲಿಕೆಯ ಉದ್ಯಾನವನದ ಕಾಂಪೌಂಡ್ ಗೋಡೆಯನ್ನು ಬೀಳಿಸಿ ಹಿಂದಕ್ಕೆ ಕಟ್ಟಿದೇಕೆ? ರಾಘವ ಕಲಾಮಂದಿರದ ಕಾಂಪೌಂಡ್ ಮಾತ್ರ ಹಾಗೆಯೇ ಬಿಟ್ಟಿರುವುದೇಕೆ?
ವಿಡಿಯೋ ನೋಡಿದರೆ ಇಂಜಿನಿಯರುಗಳ ಗೊಂದಲ ಅರ್ಥವಾಗುತ್ತದೆ. ನಾರಾಯಣರಾವ್ ಪಾರ್ಕ್ ಮುಂದುಗಡೆ ತೋಡಿರುವ ಚರಂಡಿ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿ ಬೇರೊಂದು ಪಾಯಿಂಟ್ನಿಂದ ಅನುಗ್ರಹ ಹೋಟೆಲ್ ಸುತ್ತು ಬಳಸಿ ತೋಡಿರುವ ಚರಂಡಿಯನ್ನು ಗಮನಿಸಿರಿ . ಇದು ರಾಷ್ಟ್ರೀಯ ಹೆದ್ದಾರಿಯಾಗಿದ್ದು ನೇರವಾಗಿರಬೇಕು. ಸಂಗಂ ಸರ್ಕಲ್ ಹತ್ತಿರ ಮಾತ್ರ 12 ಅಡಿ ತಿರುವು ಮಾಡಿದರೆ ಸಂಚಾರಕ್ಕೆ ತೊಂದರೆಯಾಗುತ್ತದೆ. ಇಲ್ಲೇ ಆಟೋ ನಿಲ್ದಾಣವಿದ್ದು ರಸ್ತೆಯಲ್ಲಿ ನಿಲ್ಲುತ್ತಿವೆ. ಈ ಕಾಮಗಾರಿಯ ಬ್ಲೂಪ್ರಿಂಟ್ ಪ್ರತಿಯನ್ನು ಬಹಿರಂಗಗೊಳಿಸಿ ಆದರ ಪ್ರಕಾರವೇ ಕಾಮಗಾರಿ ಮಾಡಬೇಕೆಂದು ಮಹಾನಗರ ಪಾಲಿಕೆಗೆ  ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಒತ್ತಾಯ ಮಾಡುತ್ತೇವೆ.

ಅಲ್ಲಿಪುರ ಶ್ರೀನಿವಾಸರೆಡ್ಡಿ, ಬಳ್ಳಾರ
.