ಇದು ನಿಮ್ಮವಾಣಿ
ಬನ್ನಿ ಭೂಗಳ್ಳರೇ ನಿಮ್ಮಲ್ಲಿ ದಾಖಲೆ ಇದ್ದರೆ! ನಗರಸಭೆಗೆ ಸಲ್ಲಿಸಿ


ಮಾನ್ಯರೇ,
ಹೊಸಪೇಟೆ ನಗರದ 7ನೇ ವಾರ್ಡ್ ಅನಂತಶಯನ ಗುಡಿ ಬಳಿಯ ಎಂ.ಪಿ. ಪ್ರಕಾಶ್ ನಗರದಲ್ಲಿ ರೈಲ್ವೆ ಬಫರ್ ಜೋನ್ 6 ಮೀ. ಹಾಗೂ 24 ಮೀಟರ್ ಮಹಾಯೋಜನೆಯ ರಸ್ತೆಗಾಗಿ ಮೀಸಲಿಟ್ಟ ಜಾಗದಲ್ಲಿ ಯಾರೋ ಭೂಗಳ್ಳರು ಅಕ್ರಮ ಕಟ್ಟಡ ನಿರ್ಮಿಸಿದ್ದು ಈ ಬಗ್ಗೆ ದೂರು ಬಂದ ಕೂಡಲೇ ನಗರಸಭೆ ಹಾಗೂ ಹುಡಾ ಕಚೇರಿಯ ಅಧಿಕಾರಿಗಳು ಸ್ಥಳವನ್ನು ಪರಿಶೀಲಿಸಲಾಗಿ ಇದು ಸಾರ್ವಜನಿಕ ರಸ್ತೆಯ ಜಾಗ. ಇಲ್ಲಿ ಅಕ್ರಮ ಕಟ್ಟಡ ನಿರ್ಮಿಸಿರುವುದು ಬೆಳಕಿಗೆ ಬಂದಿದೆ. ಆ ಹಿನ್ನೆಲೆಯಲ್ಲಿ ನಗರ ಸಭೆಯು ಪತ್ರಿಕೆಯಲ್ಲಿ ಜಾಹೀರಾತು ನೀಡುವ ಮೂಲಕ ಕಟ್ಟಡಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಸಲ್ಲಿಸಲು ಕೇಳಲಾಗಿ ಇಲ್ಲಿಯವರೆಗೂ ಯಾವ ವ್ಯಕ್ತಿ ಅಥವಾ ಸಂಬಂಧಿಸಿದ ಸಂಸ್ಥೆಗಳಾಗಲಿ ದಾಖಲೆ ಸಲ್ಲಿಸಿಲ್ಲ.
ಹಾಗಾಗಿ ಇದು ಭೂಗಳ್ಳರು ಸಾರ್ವಜನಿಕ ರಸ್ತೆಯನ್ನು ಕಬಳಿಸಿ ಅಕ್ರಮ ಕಟ್ಟಡ ನಿರ್ಮಿಸಿರುವುದು ಸಾಬೀತಾದಂತಾಗಿದೆ
ಎಚ್ಚರ ಹೊಸಪೇಟೆಯ ನಾಗರಿಕರೆ ಇಂತಹ ಭೂಗಳ್ಳರಿಂದ ಎಚ್ಚರ…. ಎಚ್ಚರ.
ಸಂದೀಪ್ ಸಿಂಗ್ ಹೊಸಪೇಟೆ