ಇದು ನಿಮ್ಮವಾಣಿ
ನರಕಯಾತನೆಯಿಂದ ಪಾರು‌ಮಾಡಿ


ಮಾನ್ಯರೇ,
ಬಳ್ಳಾರಿ ನಗರದ ವೆಂಕಟೇಶ್ವರ ಕೆವಿಟಿ ನಗರ, ಪಟೇಲ್ ನಗರ್, ವಾರ್ಡ್ ನಂಬರ್ 19, ಇಲ್ಲಿ ನೀರು ಸಂಗ್ರಹವಾಗಿದೆ. ಇದು ಮಳೆ ನೀರು ಅಲ್ಲ,  ಯುಜಿಡಿ ಡ್ರೈನೇಜ್ ಮ್ಯಾನಹೋಲ್ ನಿಂದ ಉಕ್ಕಿ ಹೊರಗೆ ಬಂದ ನೀರಾಗಿದೆ.
ಈ ಕಾಲೋನಿಯ ಜನರುಗಳಾದ ನಾವು ದುರ್ವಾಸನೆಯಿ ಜೀವನ ನಡೆಸಬೇಕಿದೆ. ಈ ಗಲೀಜು ನೀರಲ್ಲಿ ಓಡಾಡುವ ನರಕ ಪರಿಸ್ಥಿತಿ ನಿರ್ಮಾಣವಾಗಿದೆ,
ಈ ಪ್ರದೇಶಕ್ಕೆ ಪಾಲಿಕೆ ಅಧಿಕಾರಿ ಐಶ್ವರ್ಯ  ಬಂದು ಪರಿಶೀಲನೆ ಮಾಡಿದ್ದಾರೆ ಆದರೆ  ಇದುವರೆಗೂ, ಈ ಕೊಳುಕು ನೀರುನ್ನು ತೊಲಗಿಸುವ ಕಾರ್ಯ ಆಗಿಲ್ಲ.
ದಯವಿಟ್ಟು   ಮಹಾನಗರ ಪಾಲಿಕೆ ಆಯುಕ್ತರೇ  ತಕ್ಷಣವೇ ಈ ಗಲಿಜು ನೀರಿನಿಂದ ನಮಗೆ ಮುಕ್ತಿ ಕೊಡಿಸುವ ಕಾರ್ಯಮಾಡಿ  ನರಕ ಯಾತನೆಯಿಂದ ಪಾರು ಮಾಡಿ ಎಂದು ಮನವಿ,
 ಪಿ. ಜೈ ಪ್ರಕಾಶ್,
ಸಾಮಾಜಿಕ ಕಾರ್ಯಕರ್ತರು, ಬಳ್ಳಾರಿ.