ಜೇವರ್ಗಿ :ಜೂ.27: ತಾಲೂಕಿನ ಜನರು ಶ್ರಮ ಪಟ್ಟು 3 ಬಾರಿ ಶಾಸಕರನ್ನಾಗಿ ಆಯ್ಕೆಮಾಡಿದ್ದಿರ ನಿಮಗೆ ಅಭಿನಂದನೆಗಳು. ಇದು ನನ್ನ ಗೆಲುವಲ್ಲ ಕಾರ್ಯಕರ್ತರ ಗೆಲುವು ಎಂದು ಶಾಸಕ ಡಾ. ಅಜಯಸಿಂಗ್ ಅಭಿಮತಪಟ್ಟರು.
ಪಟ್ಟಣದ ದರ್ಮಸಿಂಗ್ ಕಲ್ಯಾಣ ಮಂಟಪದಲ್ಲಿ ಮತದಾರರು, ಮುಖಂಡರು ಹಾಗೂ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುವ ಸಮಾರಂಭ ನಡೆಯಿತು.
ಸಭೆಯನ್ನುದ್ದೆಶಿಸಿ ಶಾಸಕ ಡಾ. ಅಜಯಸಿಂಗ್ ಮಾತನಾಡಿ ಚುನಾವಣೆಯಲ್ಲಿ ವಿರೋಧ ಪಕ್ಷದವರು ಅನೇಕ ಸುಳ್ಳುಗಳು ಹಾಗೂ ಟಿಕೆಗಳನ್ನ ಮಾಡಿದರು ಕೂಡ ನಾವು ಅವರಿಗೆ ಉತ್ತರ ನೀಡಿಲ್ಲ. ನಮ್ಮ ಕಾರ್ಯಕರ್ತರು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ ವಿರೋಧ ಪಕ್ಷದವರಿಗೆ ಸರಿಯಾದ ಉತ್ತರ ನಿಡಿದ್ದಾರೆ. ತಾಲೂಕಿನ ಅಭೀವೃದ್ದಿಗೆ ನಾನು ಸದಾ ಸಿದ್ದನಿದ್ದೆನೆ.
ನಮ್ಮ ಪಕ್ಷವನ್ನು ಬಿಟ್ಟು ಹೊದವರು ಇಂದು ನಮ್ಮ ಪಕ್ಷದ ಕುರಿತು ಟಿಕೆಗಳನ್ನ ಮಾಡುತ್ತಿದ್ದಾರೆ. ಮಡಿದರೆ ಮಾಡಲಿ ಅವರಿಗೆ ನಮ್ಮ ಅಭೀವೃದ್ದಿಯೆ ಉತ್ತರ ನೀಡುತ್ತದೆ. ಮುಂಬರುವ ಜಿಲ್ಲಾ ಪಂಚಾಯತ್, ತಾಲೂಕ ಪಂಚಾಯತ್ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ದುಡಿಯೋಣ. ಈ ಬಾರಿ ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರೋಣ. ತಾಲೂಕಿನ ಜನರು ಶ್ರಮ ಪಟ್ಟು 3 ಬಾರಿ ಶಾಸಕರನ್ನಾಗಿ ಆಯ್ಕೆ ಮಾಡಿದ್ದಿರ. ನಮ್ಮ ತಂದೆಯವರಿಂದ ನಮ್ಮ ಕುಟುಂಬದ ಜೋತೆ ತಾಲೂಕಿನ ಜನರು ಸದಾ ಇರುತ್ತಿದ್ದಾರೆ. ನಿಮ್ಮ ಪ್ರೀತಿ ವಿಶ್ವಾಸ ನಮ್ಮ ಮೇಲೆ ಹೀಗೆ ಇರಲಿ.
ಪಕ್ಷದ ವಿರೋದಿ ಚಟುವಟಿಕೆಗಳನ್ನ ಯಾರೆ ಮಾಡಿದರು ಕೂಡ ಅವರ ವಿರುದ್ದ ಸೂಕ್ತ ಕ್ರಮವನ್ನು ಕೈಗೋಳ್ಳುತ್ತೆನೆ. ಸ್ವಾಭಿಮಾನದಿಂದ ದುಡಿದ ಅನೇಕ ಕಾರ್ಯಕರ್ತರು ಹಳ್ಳಿಗಳಲ್ಲಿದ್ದಾರೆ. ಅವರಿಗೆ ನನ್ನ ಕಡೆಯಿಂದ ಅಭಿನಂದನೆಗಳು. ನಿಸ್ವಾರ್ಥ ಸೇವಯನ್ನು ಮಾಡಿದ ನಮ್ಮ ಪಕ್ಷದ ಸರ್ವರಿಗು ಕೂಡ ಅಭಿನಂದನೆಗಳು ತಿಳಿಸಿದರು.
ಈ ಸಂದರ್ಭದಲ್ಲಿ ಕೇದಾರಲಿಂಗಯ ಹಿರೇಮಠ, ರುಕುಂ ಪಟೇಲ್ ಇಜೇರಿ, ಎಸ್ ಎಸ್ ಹುಲ್ಲೂರ, ಚಂದ್ರಶೇಖರ ಹರನಾಳ, ರಾಜಶೇಖರ ಸೀರಿ, ಷಣ್ಮುಖಪ್ಪ ಹಿರೇಗೌಡ, ಶಿವಶರಣಪ್ಪ ಕೊಬಾಳ್ಕರ್, ಸಿದ್ರಾಮಪ್ಪಗೌಡ ಕಲ್ಲೂರ, ಭಿಮರಾಯ ಮುಲಗೆ, ಶರಣಪ್ಪ ಸಾಲದಪೂರ, ಚನ್ನಮಲ್ಲಯ್ಯ ಹಿರೇಮಠ, ಶಾಂತಪ್ಪ ಕುಡಲಗಿ, ಚಂದ್ರಶೇಖರ ಪುರಾಣಿಕ, ಅಪ್ಪಸಾಬಗೌಡ ಹರವಾಳ, ನೀಲಕಂಠರಾವ ಮುಲಗೆ, ರೆಮಾನ ಪಟೇಲ್, ತಿಪ್ಪಣ್ಣ ಬಳಬಟ್ಟಿ, ಶರಣು ಗುತ್ತೆದಾರ, ಭೀಮರಾಯ ನಗನೂರ, ಸಕ್ರಪ್ಪಗೌಡ ಹರನೂರ, ರವಿಕುಮಾರ ಕೊಳಕೂರ, ಗುರಣ್ಣ ಕಾಚಾಪೂರ, ಚಂದ್ರಶೇಖರ ನೇರಡಗಿ, ಅಯ್ಯಣ್ಣಗೌಡ ಜಮಖಂಡಿ, ರವಿಚಂದ್ರ ಗುತ್ತೆದಾರ, ಮರೆಪ್ಪ ಸರಡಗಿ, ಭೀಮಾಶಂಕರ ವಿಭೂತೆ ಸೇರಿದಂತೆ ಇತರರಿದ್ದರು.