ಇದು ದಾರಿಯೋ, ಮೋರಿಯೋಸಿಎಂಸಿ ನಿರ್ಲಕ್ಷ ಜನತೆಗೆ ಸಂಕಷ್ಟ

ರಾಯಚೂರು, ಜ. ೨೯- ನಗರದ ತಹಶೀಲ್ದಾರ್ ಕಚೇರಿ ಪಕ್ಕದ ರಸ್ತೆಯ ಎರಡು ಬದಿಗಳಲ್ಲಿ ಜೀವನಾಧಾರಕ್ಕೆ ಜಾಬ್ ವರ್ಕ್ ಮೇಲೆ ಅವಲಂಬಿತರಾಗಿರುವ ನೂರಾರು ಕಂಪ್ಯೂಟರ್ ಶಾಪ್‌ಗಳನ್ನು ರಸ್ತೆ ಮೇಲೆ ಹರಿಯುತ್ತಿರುವ ಮೋರಿ ನೀರಿನ ಸಮಸ್ಯೆಯಿಂದ ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕಂಪ್ಯೂಟರ್ ರಸ್ತೆಯೆಂದೇ ನಗರದಲ್ಲಿ ಪ್ರಸಿದ್ಧಿಯಾಗಿರುವ ಈ ರಸ್ತೆಯ ಬದಿಯಲ್ಲಿ ಅವೈಜ್ಞಾನಿಕವಾಗಿ ಒಳಚರಂಡಿ ನಿರ್ಮಾಣ ಮಾಡಿರುವುದರಿಂದ ಕೊಳಚೆನೀರು ಚರಂಡಿ ತುಂಬಿ ರಸ್ತೆಯ ಮೇಲೆ ಹರಿಯುತ್ತಿದೆ.
ರಸ್ತೆಯ ಮೇಲೆ ನೀರು ಹರಿಯುತ್ತಿರುವುದರಿಂದ ಜಾಬ್ ವರ್ಕ್‌ನ ಕಂಪ್ಯೂಟರ್ ಶಾಪ್ ಗಳನ್ನು ತೆರೆಯಲಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಜಾಬ್ ವರ್ಕ್‌ಗಳಿಂದ ನೂರಾರು ಅಂಗಡಿ ಮಾಲೀಕರು ಜೀವನೋಪಾಯ ಕಂಡುಕೊಂಡಿದ್ದಾರೆ. ಆದರೆ ಅವೈಜ್ಞಾನಿಕ ಚರಂಡಿ ನಿರ್ಮಾಣ ಈ ಜಾಬ್ ವರ್ಕ್ ಶಾಪ್‌ಗಳ ಮಾಲೀಕರ ಜೀವನೋಪಾಯಕ್ಕೆ ಕುತ್ತು ತಂದಿದೆ.
ಈ ಸಂಬಂಧ ಅಜಾದ್ ನಗರದ ಅಂಬಾಜಿ ಅವರು ೨೦೨೩ರ ಸೆ. ೫ ರಂದು ಯೋಜನಾ ನಿರ್ದೇಶಕರಿಗೆ ದೂರು ಸಲ್ಲಿಸಿದ್ದರು. ಈ ದೂರನ್ನಾಧರಿಸಿ ೨೦೨೩ರ ಅಕ್ಟೋಬರ್‌ನಲ್ಲೇ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ನಗರ ಪೌರಾಯುಕ್ತರು ಪತ್ರ ಬರೆದು ಅವೈಜ್ಞಾನಿಕ ಒಳಚರಂಡಿಯನ್ನು ಸರಿಪಡಿಸಿ ರಸ್ತೆಯಲ್ಲಿ ಸಂಚಾರ ಹಾಗೂ ಕಂಪ್ಯೂಟರ್ ಶಾಪ್ ಗಳಿಗೆ ಅನುಕೂಲ ಮಾಡಿಕೊಡಬೇಕೆಂದು ೬ ತಿಂಗಳು ಕಳೆದಿದ್ದರು. ಇದುವರೆಗೂ ನಗರಸಭೆ ಮಾತ್ರ ಒಳಚರಂಡಿ ದುರಸ್ತಿಗೆ ಕ್ರಮ ಕೈಗೊಂಡಿರುವುದು. ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.