(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.08: ನಗರದಲ್ಲಿ ಅನೇಕ ರಸ್ತೆಗಳ ಅಭಿವೃದ್ದಿ ನಡೆಯುತ್ತಿದೆ. ಇನ್ನೂ ಅನೇಕ ರಸ್ತೆಗಳು ದುಸ್ಥಿತಿಯಿಂದ ಕೂಡಿವೆ. ಈ ಮಧ್ಯೆ ನಗರದ ಆರಾಧ್ಯ ದೇವ ಕೋಟೆ ಮಲ್ಲೆಶ್ವರ ಸ್ವಾಮಿ ದೇವಸ್ಥಾನಕ್ಕೆ ತೆರಳುವ ರಸ್ತೆಯನ್ನು ಪಾಲಿಕೆ ಮತ್ತು ಲೋಕೋಪಯೋಗಿ ಇಲಾಖೆಯಿಂದ ಈ ರೀತಿ ಅಭಿವೃದ್ಧಿ ಪಡೆಸಲಾಗಿದೆ.
ಈ ಮೊದಲು ಮಲ್ಲೇಶ್ವರ ದೇವಸ್ಥಾನಕ್ಕೆ ತೆರಳಲು ಸರಿಯಾದ ರಸ್ತೆ ಇರಲಿಲ್ಲ. ಒತ್ತುವರಿಯಾಗಿತ್ತು. ಅದನ್ನು ಪಾಲಿಕೆ ತೆರವುಗೊಳಿಸಿ ರಸ್ತೆಯನ್ನು ಸಂತಜಾನ್ ಶಾಲೆಯ ಮುಂಭಾಗದಿಂದ ದೇವಸ್ಥಾನದವರೆಗೆ ಅಭಿವೃದ್ಧಿಪಡಿಸಲಾಗಿದೆ.
ಜೊತೆಗೆ ಫುಟ್ ಪಾಥ್, ಅಲಂಕಾರಿಕವಾದ ಬೀದಿ ದೀಪದ ವ್ಯವಸ್ಥೆಯನ್ನು ಸಹ ಮಾಡಲಾಗಿದೆ.
ಒಟ್ಟಾರೆ ಭಕ್ತರು ದೇವಸ್ಥಾನಕ್ಕೆ ತೆರಳಲು ಈಗ ಉತ್ತಮ ವ್ಯವಸ್ಥೆ ಆಗಿದೆ. ಇದಕ್ಕೆ ಕಾರಣ ಈ ಹಿಂದಿನ ಸಚಿವ ಬಿ.ಶ್ರೀರಾಮುಲು ಅವರು ತೆಗೆದುಕೊಂಡ ಆಸಕ್ತಿ ಎಂದು ಹೇಳಬಹುದು.