ಇದು ಕಾರ್ಯಕರ್ತರ ಗೆಲುವು: ಜಿಗಜಿಣಗಿ

ವಿಜಯಪುರ,ಜೂ.5:ನನಗೆ ಚುನಾವಣೆಯಲ್ಲಿ ಗೆಲುವು ತಂದು ಕೊಡುವಲ್ಲಿ ಕಾರ್ಯಕರ್ತರ ಶ್ರಮ ದೊಡ್ಡದಿದೆ. ಇದು ನನ್ನ ಗೆಲುವು ಅಲ್ಲ. ಕಾರ್ಯಕರ್ತರ ಗೆಲವು. ಅವರಿಗೆ ಮೊಟ್ಟ ಮೊದಲಿಗೆ ನನ್ನ ಅಭಿನಂದನೆ ಹೇಳುತ್ತೇನೆ. ಈ ಗೆಲವು ನನಗೆ ಖುಷಿ ತಂದಿದೆ ಎಂದು ಲೋಕಸಭೆ ಚುನಾವಣೆಯಲ್ಲಿ ಗೆಲವು ಸಾಧಿಸಿದ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ತಿಳಿಸಿದರು.
ಸುದ್ದಿಗಾರರ ಜೊತೆಗೆ ಮಾತನಾಡಿ, ನನಗೆ ಮಂತ್ರಿ ಆಗಬೇಕೆಂಬ ಆಸೆ ಇಲ್ಲ. ಜನರ ಸೇವೆ ಮಾಡುತ್ತೇನೆ. ಪಕ್ಷದ ವರಿಷ್ಠರು ಮಂತ್ರಿ ಜವಾಬ್ದಾರಿ ವಹಿಸಿದರೆ ನಿಭಾಯಿಸುತ್ತೇನೆ. ನನ್ನದೇ ಆದಂತಹ ಅಜೆಂಡಾ ನನ್ನ ಮುಂದಿಲ್ಲ. ಜನರು ಹೇಳಿದ ಕೆಲಸ ಮಾಡುತ್ತೇನೆ ಎಂದರು.
ದೇಶದಲ್ಲಿ ಬಿಜೆಪಿಗೆ ನಿರೀಕ್ಷಿತ ಬಹುಮತ ದೊರೆಯದಿರುವುದು ನನಗೆ ಸಮಾಧಾನ ತಂದಿಲ್ಲ ಎಂದೂ ಅವರು ಹೇಳಿದರು.