ಇದು ಅಭಿವೃದ್ಧಿ ಪರ ಮತ ಹಾಕೋ ಚುನಾವಣೆ:ಶ್ರೀರಾಮುಲು

ಬಳ್ಳಾರಿ, ಏ.27: ಇಂದು ನಡೆಯುತ್ತಿರುವ ಮಹಾನಗರ ಪಾಲಿಕೆಯ ಚುನಾವಣೆ ಅಭಿವೃದ್ಧಿ ಪರ ಮತ ಹಾಕೋ ಚುನಾವಣೆಯಾಗಿದೆಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.
ಅವರು ಇಂದು ನಗರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಕಲ್ಯಾಣ ಇಲಾಖೆ ಕಚೇರಿ ಮತಗಟ್ಟೆಯಲ್ಲಿ ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು ನಗರದ ಅಭಿವೃದ್ದಿ ಯಾವ ಪಕ್ಷ ಅಧಿಕಾರಕ್ಕೆ ಬಂದರೆ ಆಗುತ್ತೆ ಎಂಬುದನ್ನು ಮನಗಂಡು, ಮತದಾರರು ತಮ್ಮ ಮತ ಚಲಾಯಿಸುತ್ತಿದ್ದಾರೆಂದು ಭಾವಿಸಿದ್ದು. ಈ ಚುನಾವಣೆಯಲ್ಲಿ ನಮ್ಮ ಬಿಜೆಪಿ ಪಕ್ಷಕ್ಕೆ ಈ ಮೊದಲೇ ಹೇಳಿದಂತೆ 27 ಕ್ಕೂ ಹೆಚ್ಚು ಸ್ಥಾನಗಳು ಲಭಿಸಲಿವೆ ಎಂದು ಪುನರುಚ್ಚರಿಸಿದರು.
ವಿರೋಧ ಪಕ್ಷದವರಿಗೆ ಟೀಕೆ ಮಾಡಲು ವಿಷಯವೇ ಇಲ್ಲ. ಹೀಗಾಗಿ ಅನಾವಶ್ಯಕ ಆರೋಪ ಮಾಡ್ತಿದ್ದಾರೆ.
ಕೊರೋನಾ ಸಂಕಷ್ಟದ ಈ ವೇಳೆ ಸರ್ಕಾರ ದಿಟ್ಟ ಹೆಜ್ಹೆ ಇಡುತ್ತಿದೆ. ಪ್ರತಿಯೊಬ್ಬರು ಇದಕ್ಕೆ ಸಹಕಾರ ನೀಡಬೇಕಿದೆ.. ಜನತಾ ಕಫ್ರ್ಯೂ ಜನರ ಕಟ್ಟು ನಿಟ್ಟಾಗಿ ಪಾಲನೆ ಮಾಡಿ ಕೊರೊನಾ ವಿರುದ್ಧದ ಹೋರಾಟಕ್ಕೆ ಎಲ್ಲರೂ ಜೈ ಜೋಡಿಸಬೇಕಿದೆಂದರು.
ಚುನಾವಣೆ ಪ್ರಚಾರದ ವೇಳೆ ನನ್ನ ಮೇಲೆಯೂ ಕೊರೋನಾ ನಿಯಮ ಉಲ್ಲಂಘನೆ ಮಾಡಿದ ಆರೋಪವಿದೆ..
ಕೊರೋನಾ ವಿಚಾರದಲ್ಲಿ ಪ್ರತಿಯೊಬ್ಬರು ಎಚ್ಚರಿಕೆಯಿಂದ ಇರಬೇಕು. ಜನತಾ ಕಫ್ರ್ಯೂ ಮುಗಿದ ಬಳಿಕ ಬಳ್ಳಾರಿ ಉಸ್ತುವಾರಿ ವಹಿಸೋ ವಿಚಾರದ ಬಗ್ಗೆ ಚರ್ಚಿಸೋಣ. ಉಸ್ತುವಾರಿ ವಿಚಾರ ಮಾತನಾಡೋ ಸಂದರ್ಭ ಇದಲ್ಲ. ಈ ಬಗ್ಗೆ ಮುಂದೆ ನೋಡೋಣ ಎಂದರು.