ಇತಿಹಾಸ ಸ್ಮರಣೆ ಇಂದಿನ ಅವಶ್ಯಕತೆ

ಚಿತ್ರದುರ್ಗ ನ. 24 – ನಗರದ ಎಸ್.ಜೆ.ಎಂ. ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ನಡೆದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ಅಧ್ಯಕ್ಷರು ಮತ್ತು ಕಾಲೇಜಿನ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಲ್. ಈಶ್ವರಪ್ಪ, 2008 ರಿಂದ ಸರ್ಕಾರವು ಕನಕದಾಸ ಜಯಂತಿಯ ಆಚರಣೆ ಕಾರ್ಯಕ್ರಮವನ್ನು ಜಾರಿಗೆ ತಂದು ಅಲ್ಲಿಂದ ಆಚರಣೆ ಮಾಡುತ್ತಿದ್ದೇವೆ. ದಾಸರು, ಸಂಗೀತಕಾರರು, ಕೀರ್ತನಕಾರರು ಹಾಗೂ ಚಿಂತಕರು ಆಗಿ ಸಮಾಜದಲ್ಲಿ ತಮ್ಮದೇ ಆದ ಶ್ರೇಷ್ಠ ಚಿಂತನೆಯನ್ನು ನೀಡಿದ್ದಾರೆ. ಕನಕದಾಸರ ಇತಿಹಾಸವನ್ನು ತಿಳಿದುಕೊಳ್ಳಲು ಈ ಆಚರಣೆ ಉಪಯುಕ್ತವಾಗಿದೆ ಎಂದು ತಿಳಿಸಿದರು.  ತೃತೀಯ ಬಿ.ಎ. ವಿದ್ಯಾರ್ಥಿನಿಯರಾದ ಕು. ಸಾಧನ ಜಿ.ಬಿ. ಶಿಲ್ಪ ಜೆ. ಹಾಗೂ ರೇಷ್ಮಾ ಎ. ಇವರುಗಳು ಕನಕದಾಸರ ಬಗ್ಗೆ ತಮ್ಮ ಅನಿಸಿಕೆಗಳನ್ನು ತಿಳಿಸಿದರು. ಎನ್. ಚಲುವರಾಜು, ಮಾತನಾಡಿ ಕನಕದಾಸರು ದಾಸ ಶ್ರೇಷ್ಠರಲ್ಲಿ ಒಬ್ಬರಾಗಿದ್ದಾರೆ. ಇವರು ಒಂದು ಜಾತಿಗೆ ಮಾತ್ರ ಮೀಸಲಾಗದೆ ಎಲ್ಲಾ ಜಾತಿ ಜನಾಂಗಗಳಲ್ಲಿ ಸಮಾನತೆಯನ್ನು ಮೂಡುವಂತೆ ಮಾಡಿದವರಲ್ಲಿ ಒಬ್ಬೊಬ್ಬರಾಗಿ ಶ್ರೇಷ್ಠ ದಾಸರಾಗಿದ್ದಾರೆ. ಸಮಾಜದಲ್ಲಿ ಅವರು ಮಾಡಿದ ಸಾಧನೆಗಳನ್ನು ತಿಳಿಸಿದರು.  ಸಿ. ಬಸವರಾಜಪ್ಪ ಇವರು ಮಾತನಾಡಿ, ಶ್ರೇಷ್ಠ ದಾಸ ಶ್ರೇಷ್ಠರಲ್ಲಿ ಒಬ್ಬೊಬ್ಬರಾಗಿದ್ದಾರೆ. ಇವರ ಚಿಂತನೆಗಳನ್ನು ಕಾಲೇಜಿನಲ್ಲಿ ಆಚರಿಸುವ ಮೂಲಕ ಶರಣರ ದಾಸರ ಜೀವನ ಚರಿತ್ರೆಗಳನ್ನು ತಿಳಿದುಕೊಳ್ಳುವ ಮೂಲಕ ನಮ್ಮ ಸಮಾಜಕ್ಕೆ ಏನು ಕೊಡುಗೆ ನೀಡಿದ್ದಾರೆಂದು ತಿಳಿಯುವುದು ಅತಿ ಅಗತ್ಯ ಎಂದು ತಿಳಿಸಿದರು. “ಕನಕ ಓದು” ಎಂಬ ಕಾರ್ಯಕ್ರಮವನ್ನು ಮಾಡಿ ಯಶಸ್ಸನ್ನು ಸಾಧಿಸಲಾಯಿತು ಎಂಬುದನ್ನು ತಿಳಿಸಿದರು. ಕಾಲೇಜಿನ ಪ್ರಾಧ್ಯಾಪಕರಾದ ಎಂ.ಎಸ್. ಪರಮೇಶ್ವರ, ಎಲ್. ರಾಜಾನಾಯ್ಕ್, ಗಿರೀಶ್, ಶಿವಕುಮಾರ್, ಮಹಮ್ಮದ್ ತಾಜ್‌ಪೀರ್ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಹಾಜರಿದ್ದರು ನಂತರ ಶ್ರೀಮತಿ ರಹಮತ್ ಉನ್ನೀಸಾ ಇವರು ವಂದನಾರ್ಪಣೆ ಮಾಡಿದರು.