ಇತಿಹಾಸ ಸಂಸ್ಕ್ರತಿಯನ್ನು ಪೋಷಕರು ಮಕ್ಕಳಿಗೆ ತಿಳಿಸಿ

ಎಮ್ಮಿಗನೂರು ಏ 18 : ಗುರುವಿನ ಮಹತ್ವ ಅರಿತು ಭಕ್ತರು ಗುರುತರ ಜವಾಬ್ದಾರಿಗಳೊಂದಿಗೆ ಮಾನವೀಯ ನೆಲೆಗಟ್ಟಿನಲ್ಲಿ ಧರ್ಮಪಾಲನೆ ಮಾಡುತ್ತಾ ಸಾಗಿದಾಗ ಬದುಕು ಹಸನಾಗುತ್ತದೆ
ಎಂದು ಸ್ಥಳೀಯ ಹಂಪಿ ಸಾವಿರ ದೇವರ ಮಠದ ಶ್ರೀ ವಾಮದೇವಾ ಶಿವಾಚಾರ್ಯರು ಹೇಳಿದರು ಅವರು ಮಠದಲ್ಲಿ ತಮ್ಮ 49 ವರ್ಷದ ಹುಟ್ಟು ಹಬ್ಬದ ಸರಳ ಆಚರಣೆ ಪ್ರಯುಕ್ತವಾಗಿ ಮತನಾಡಿ, ಧರ್ಮದ ಪರಂಪರೆ, ಇತಿಹಾಸ ಸಂಸ್ಕ್ರತಿಯನ್ನು ಪೋಶಕರು ಮಕ್ಕಳಿಗೆ ತಿಳಿಸಿ ಪಾಲಿಸುವಂತೆ ಕರೆ ನೀಡಿದರು
ಈವೇಳೆ ಹೊಸಪೇಟೆ ವಾಣಿಜ್ಯ ತೆರಿಗೆ ಆಧೀಕಾರಿ ಭಿಮಾನಗೌಡ, ವಿರೇಂದ್ರರೆಡ್ಡಿ, ಬಿ ಮಹೇಶಗೌಡ,ಬಿ, ಸಾದಶಿವಪ್ಪ, ವೈರಾಘವೇಂದ್ರರೆಡ್ಡಿ, ಘನಮಠೇಶ, ಪಿಗ್ನಿ ಶರಣಬಸವನಗೌಡ, ಬಾಜರು ಬಸವನಗೌಡ, ಸೇರಿದಂತೆ ಮಠದ ಭಕ್ತರು ಇದ್ದರು