ಕವಿತಾಳ,ಮಾ.೩೦- ಸುತ್ತಮುತ್ತಲಿನ ಗ್ರಾಮದ ಆರಾಧ್ಯದೈವ ಕವಿತಾಳದ ತ್ರಯಂಭಕೇಶ್ವರ ದೇವರ ಜಾತ್ರೆಯು ರಾಮನವಮಿಯ ದಿನದಂದು ಅದ್ದೂರಿಯಾಗಿ ನಡೆಯಲಿದೆ.
ಕವಿತಾಳದ ತ್ರಯಂಭಕೇಶ್ವರ ದೇವಸ್ಥಾನವು ತನ್ನದೆ ಇತಿಹಾಸವನ್ನು ಹೊಂದಿದೆ. ಅಮೋಘ ಶಿಲ್ಪಕಲೆ ಹೊಂದಿರುವಂತ ಸ್ಥಳವಾಗಿದೆ. ಪ್ರಚಾರದ ಕೊರತೆಯಿಂದ ಪ್ರಾಚ್ಯವಸ್ತು ಇಲಾಖೆಯವರ ನಿರ್ಲಕ್ಷದಿಂದ ದೇವಸ್ಥಾನವು ಅಬಿವೃದ್ದಿ ಕಾಣದಂತಾಗಿದೆ. ಇಲ್ಲಿನ ಅದ್ಬುತ ಕಲಾ ಸಂಪತ್ತು ನಾಡಿಗೆ ತಿಳಿಯದಿರುವದು ಸರ್ಕಾರ ಕಲ್ಯಾಣ ಕರ್ನಾಟಕದಲ್ಲಿ ಇರುವ ಕಲಾಸಂಪತ್ತನ್ನು ನಿರ್ಲಕ್ಷಿಸುತ್ತಿರುವದು ಕಾಣಲಾಗುತ್ತಿದೆ.
ಇಲ್ಲಿನ ತ್ರಯಂಭಕೇಶ್ವರ ಮೂರ್ತಿಯು ಮೂರುಲಿಂಗಗಳಿಂದ ಕೂಡಿದ್ದು ಬ್ರಹ್ಮ.ವಿಷ್ಣು. ಮಹೇಶ್ವರಲಿಂಗಗಳು ಎಂದು ಹೇಳಲಾಗುತ್ತಿದೆ. ಅದಕ್ಕಾಗಿ ಈ ದೇವಸ್ಥಾನಕ್ಕೆ ತ್ರಯಂಭಕೇಶ್ವರ ಎಂದು ಕರೆಯಲಾಗುತ್ತದೆ. ಭಕ್ತರ ಇಷ್ಟಾರ್ಥಗಳನ್ನು ಪೊರೈಸುವ ತ್ರಯಂಭಕೇಶ್ವರ ದೇವರ ಮೇಲೆ ಭಕ್ತರಿಗೆ ಅನನ್ಯ ನಂಬಿಕೆ. ಆದ್ದರಿಂದ ಇಲ್ಲಿ ಭಕ್ತರು ಅತ್ಯಧಿಕ ಸಂಖ್ಯೆಯಲ್ಲಿ ಜಾತ್ರೆಗೆ ಬರುತ್ತಾರೆ.
ಶ್ರೀ ತ್ರಯಂಭಕೇಶ್ವರ ದೇವ ಸ್ಥಾನವು ಐತಿಹಾಸಿಕವಾಗಿ ಪ್ರಸಿದ್ದಿಯನ್ನು ಪಡೆದಿದೆ. ಕೆಲ ವರ್ಷಗಳ ಹಿಂದೆ ಪ್ರಾಚ್ಯವಸ್ತು ಇಲಾಖೆಯ ಅಧಿಕಾರಿಗಳು ಬಂದು ಹೋದರು ದೇವಸ್ಥಾನ ಹಾಗು ಶಿಲ್ಪಕಲೆಯ ಬಗ್ಗೆ ಜಿರ್ಣೋದ್ದಾರದ ಬೇಳಕನ್ನು ಚಲ್ಲಲಾಗಿಲ್ಲ. ಕೆಲವು ಇತಿಹಾಸಕಾರರ ಪ್ರಕಾರ ಇದು ಬದಾಮಿಯ ಚಾಲುಕ್ಯರ ವಾಸ್ತು ಶಿಲ್ಪ ಮಾದರಿಯಲ್ಲಿ ನಿರ್ಮಾಣ ಗೊಂಡಿದೆ ಎಂದು ಹೆಳಲಾಗುತ್ತದೆ. ಇನ್ನು ಕೆಲವರು ರಾಷ್ಟ್ರಕೂಟ, ಹೋಯ್ಸಳ ಅರಸರಲ್ಲಿ ನಿರ್ಮಾಣವಾಗಿದೆ ಎಂದು ಹೆಳಲಾಗುತ್ತಿದ್ದು ಯಾವಾದಕ್ಕು ನಿಖರತೆಯಿಲ್ಲ.
ತ್ರಯಂಭಕೇಶ್ವರ ದೇವಾಲಯದ ಗೊಪೂರವು ಕಾಶಿ ಸೋಮನಾಥ ದೇವಾಲಯವನ್ನು ಹೋಲುತ್ತದೆ. ಕ್ರಿ.ಶ.೧೧೪೦ರಲ್ಲಿ ಈ ದೇವಾಲವು ನಿರ್ಮಾಣ ಗೊಂಡಿದೆ ಎಂಬುದಕ್ಕೆ ಇಲ್ಲಿ ಇರುವ ದ್ರಾವಿಡ ಬಾಷೆಯ ಎರಡು ಶಿಲಾಶಾಸನಗಳು ಮಾಹಿತಿಯನ್ನು ನೀಡುತ್ತವೆ. ಉತ್ತರ ದಷ್ಕಿಣಾಮುಖವಾಗಿ ಹಾಗೂ ಪೂರ್ವಾಭಿಮುಖವಾಗಿ ಪ್ರತ್ಯೆಕ ಲಿಂಗಗಳು ಇದ್ದು. ಒಂದೇ ಗುಡಿಯೊಳಗೆ ಇರುವದು ದೇಶದಲ್ಲಿಯೆ ಇದು ಎರಡನೇಯದು (ಇನ್ನೊಂದು ಮಹಾ ರಾಷ್ಟ್ರದ ನಾಸಿಕ ನಲ್ಲಿದೆ) ಗರ್ಭಗುಡಿಯ ಬಾಗೀಲ ಮೇಲೆ ವಿವಿಧ ವಿನ್ಯಾಸದ ಚಿತ್ತಾರಗಳು. ಲಕ್ಷ್ಮೀ ಮುಂತಾದ ದೇವತೆಗಳನ್ನು ಕೆತ್ತಲಾಗಿದೆ. ಅಲ್ಲದೆ ಸಪ್ತ ಮಾತೃಕೆಯರ ಭಗ್ನ ಮೂರ್ತಿಗಳು ಗಮನಿಸಿದರೆ ಇಲ್ಲೊಂದು ದೇವಸ್ಥಾನದ ಸಮಚ್ಚಯವೇ ಇತ್ತೆಂದು ತಿಳಿದು ಬರುತ್ತದೆ. ಗುಡಿಯೋಳಗೆ ವಿವಿಧ ವಿನ್ಯಾಸದಿಂದ ಕೆತ್ತಲ್ಪಟ್ಟ ನಾಲ್ಕು ಕಂಬಗಳು ಇವೆ ಅವುಗಳ ನಡುವೆ ಕಲ್ಯಾಣಿಯು ಇದ್ದು ಈಗ ಅದು ಹೂತು ಹೋಗಿದೆ. ಕಂಬಗಳ ವಾಸ್ತುಶಿಲ್ಪವು ಅತ್ಯಂತ ಸೂಕ್ಷ್ಮವಾಗಿದ್ದು ಒಂದೆ ಮಾದರಿಯಲ್ಲಿ ದೇವಾಲಯದ ಮೂರು ಗೋಪುರಗಳು ತುಂಬ ಆಕರ್ಷಣಿಯವಾಗಿವೆ. ಪ್ರತಿಷ್ಠಾನದ ಕೆಳಗಿನ ಪಟ್ಟಿಯಲ್ಲಿ ಆನೆಗಳ ಸಾಲು ಇದ್ದು. ಇಡೀ ದೇವಾಲಯವನ್ನು ಆನೆಗಳೇ ಹೊತ್ತು ನಿಂತಿರುವಂತೆ ಗೋಚರಿಸುತ್ತದೆ.
ತ್ರೇತಾಯುಗದಲ್ಲಿ ರಾವಣನು ತನ್ನ ತಾಯಿಗಾಗಿ ಪೂಜಿಸಲು ಶಿವನ ಆತ್ಮಲಿಂಗವನ್ನು ಗೋಕರ್ಣಕ್ಕೆ ಹೋಗುವ ಮಾರ್ಗದಲ್ಲಿ ಇಲ್ಲಿ ಮಿಶ್ರಮಿಸುವಾಗ ಲಿಂಗವನ್ನು ಇಲ್ಲಿ ಇಟ್ಟಿದ್ದನು ಎನ್ನುವ ಪ್ರತೀತಿ ಇದೆ. ಅದೇ ರೀತಿಯಾಗಿ ಶ್ರೀರಾಮಚಂದ್ರನು ರಾವಣನನ್ನು ಸಂಹಾರ ಮಾಡಿದ ಮೇಲೆ ಅಯೋದ್ಯೆಗೆ ತೆರಳುವ ಮಾರ್ಗಮದ್ಯದಲ್ಲಿ ಶ್ರೀತ್ರಯಂಬಕೇಶ್ವರ ದೇವ ಸ್ಥಾನಕ್ಕೆ ಬಂದು ಸಹೋದರ ಲಕ್ಷ್ಮಣ ಹಾಗು ಮಡದಿ ಸೀತೆಯೋಡನೆ ದರ್ಶನ ಪಡೆದ ನಂತರ ಶ್ರೀರಾಮಚಂದ್ರನು ಮರಳಿನಿಂದ ಪಾಣಿವಾಟವಿಲ್ಲದ ಎರಡು ಅಡಿಯಷ್ಟು ಎತ್ತರದ ಲಿಂಗವನ್ನು ನಿರ್ಮಿಸಿ. ಬ್ರಹ್ಮ. ವಿಷ್ಣು.ಮಹೇಶ್ವರ.ಲಿಂಗದ ಹಿಂದುಗಡೆ ಸ್ಥಾಪಿಸಿದ ಎಂದು ಸ್ಥಳಿಯ ಪುರಾಣಗಳಿಂದ ತಿಳಿದು ಬರುತ್ತದೆ .ಇಂದಿಗೂ ಕೂಡ ತ್ರಯಂಬಕೇಶ್ವರ ಲಿಂಗದ ಹಿಂದೆ ಮತ್ತೊಂದು ಎತ್ತರದ ಲಿಂಗವನ್ನು ಕಾಣಬಹುದಾಗಿದೆ. ಆದ್ದರಿಂದ ಇಲ್ಲಿ ಶ್ರೀರಾಮನವಮಿಯ ದಿನವನ್ನು ವಿಶೇಷವಾಗಿ ಆಚಾರಿಸುವ ಮುಖಾಂತರ ತ್ರಯಂಭಕೇಶ್ವರ ಜಾತ್ರೆಯನ್ನು ಇದೆ ದಿನದಂದು ನಡೆಸಲಾಗುತ್ತದೆ.
ಇಂತಹ ಮಹಾನ್ ಇತಿಹಾಸ ಪುರಾಣ ಹಿನ್ನೆಲೆ ಹೊಂದಿರುವ ಶ್ರೀ ತ್ರಯಂಭಕೇಶ್ವರ ದೇವಸ್ತಾನವು ವಿಜಯನಗರ ಅರಸರ ಕಾಲಕ್ಕಿಂತ ಮುಂಚೆ ಅತಿ ಹೆಚ್ಚು ವೈಭವದಿಂದ ಮೆರೆ ಯುತ್ತಿತ್ತು ವಿಜಯನಗರ ಅರಸ ಶ್ರೀಕೃಷ್ಣದೇವರಾಯನ ಕಾಲದಲ್ಲಿ ಇದು ತನ್ನದೆ ಆದ ಪ್ರಾಮುಖ್ಯತೆಯನ್ನು ಪಡೆದಿತ್ತು. ಯಾವಾಗ ವಿಜಯ ನಗರ ಸಾಮ್ರಾಜ್ಯ ಪತನವಾಯಿತು ಆಗ ವಿಜಪೂರದ ಆದಿಲ್‌ಶಾಹಿಗಳ ಆಡಳಿತಕ್ಕೆ ಒಳಗಾಗಿ ಆಪತ್ತಿಗೆ ಸಿಲುಕಿತು. ಇಲ್ಲಿನ ಭಕ್ತರು ದೇವಸ್ಥಾನವನ್ನು ರಕ್ಷಿಸಲು ದೇವಸ್ಥಾನವಿದ್ದ ಜಾಗದಲ್ಲಿ ಗಿಡಮರಗಳನ್ನು ಬೆಳೆಸಿ .ಮೇಲೆ ಮಣ್ಣಿನ ಗುಡ್ಡವನ್ನು ನಿರ್ಮಾಣ ಮಾಡಿ ದೇವಾಲಯವು ಕಾಣದಂತೆ ಮುಚ್ಚಿ ಗ್ರಾಮಸ್ಥರು ಊರು ತೊರೆದು ಬೇರೆಡೆ ಸ್ಥಳಾಂತರ ಗೊಂಡರು. ಊರೆಲ್ಲ ಆಳು ಸುರಿಯುವಂತಾಗಿತ್ತು. ಈ ರೀತಿಯಾಗಿ ದೇವಸ್ಥಾನವನ್ನು ಭಕ್ತರು ರಕ್ಷಣೆ ಮಾಡಿದರು ಎಂದು ಹೇಳಲಾಗುತ್ತದೆ.
ಕ್ರಿ.ಶ.೧೬೬೫ ರಿಂದ ೧೯೪೮ರ ವರೆಗೆ ಅಂದರೆ ೩೦೦ ವರ್ಷಕ್ಕು ಹೆಚ್ಚಿನ ಅವಧಿಯವರೆಗೆ ದೇವಸ್ಥಾನವು ಸಂಪೂರ್ಣವಾಗಿ ಮಣ್ಣಿನಲ್ಲಿ ಹೂತು ಹೋಗಿತ್ತು. ದೇಶಕ್ಕೆ ಸ್ವಾತಂತ್ರ್ಯ ಬಂದು ಹೈದ್ರಬಾದ ನಿಜಾಮನಿಂದ ಈ ಬಾಗ ಮುಕ್ತಿಯನ್ನು ಹೊಂದಿದ ನಂತರ ಶ್ರೀತ್ರಯಂಭಕೇಶ್ವರ ಮುಕ್ಕಣ್ಣನಿಗು ಮುಕ್ತಿ ದೊರೆಯಿತು ಎಂದು ಹೆಳಲಾಗುತ್ತಿದೆ.
ಮುಕ್ತಿ ದೇವಸ್ಥಾನವು ಮಣ್ಣಿನಲ್ಲಿ ಹೂತಿರುವ ಮಾಹಿತಿಯು ಗ್ರಾಮಸ್ಥರಿಂದ ದೊರೆಯಿತು. ಕವಿತಾಳ ಸುತ್ತಮುತ್ತಲಿನ ಗ್ರಾಮಗಳಾದ ಸೈದಪೂರು. ಹುಸೇನ ಪೂರು. ತೊಪ್ಪಲದೊಡ್ಡಿ ಕವಿತಾಳದ ಗ್ರಾಮಸ್ಥರು ಸೇರಿ ದೇವಸ್ಥಾನವನ್ನು ಮಣ್ಣಿನಿಂದ ಹೊರತೆಗೆಯ ತೋಡಗಿದರು.ಸುಮಾರು ಎಳು ತಿಂಗಳವರೆಗೆ ಮಣ್ಣನ್ನು ಅಗೆದು ದೇವಸ್ಥಾನವನ್ನು ಸ್ವಚ್ಛಗೊಳಿಸಿದರು. ಇವರ ಪರಿಶ್ರಮದ ಪಲವಾಗಿ ದೇವಸ್ಥಾನವು ಬಯಲಾಯಿತು. ಅಂದಿನ ಹಿರಿಯರಾದ ಡಾ ನಿಜಗುಣಯ್ಯ. ಚನ್ನಪ್ಪ ಸಹುಕಾರ. ಯಂಕೋಬಶೆಟ್ಟಿ. ದೊಡ್ಡನಗೌಡ ಅಮೀನಗಡ. ಬಸಣ್ಣ ಸಹುಕಾರ ಅವರ ಮುಂದಾಳತ್ವದಲ್ಲಿ ಈ ಪುಣ್ಯ ಕಾರ್ಯವನ್ನು ನೆರವೇರಿತು. ಎಂದು ಸ್ಥಳಿಯ ಹಿರಿಯರು ಹೇಳುತ್ತಾರೆ. ಸುಮಾರು ಮೂರು ಶತಮಾನಗಳಿಂದ ಮಣ್ಣಲ್ಲಿ ಹೂತು ಹೋಗಿದ್ದ ದೇವಸ್ಥಾನಕ್ಕೆ ೧೯೫೦ರಿಂದ ಜಾತ್ರೆಯನ್ನು ಪ್ರಾರಂಬಮಾಡಲಾಯಿತು.ಅಂದಿನಿಂದ ಇಂದಿನ ವರೆಗೆ ಜಾತ್ರೆಯನ್ನು ಅದ್ದೂರಿಯಾಗಿ ನಡೆಸಿಕೊಂಡು ಬಂದಿದ್ದು. ಯುಗಾದಿಯ ನಂತರದ ಶ್ರೀರಾಮನವಮಿಯ ದಿನದಂದು ಕವಿತಾಳ ಮತ್ತು ಸುತ್ತ ಮುತ್ತಲಿನ ಗ್ರಾಮದ ಭಕ್ತರು ಮಠಾಧೀಶರು.ರಾಜಕಾರಣಿಯವರ ಸಮ್ಮುಖದಲ್ಲಿ ಸಡಗರದಿಂದ ಜಾತ್ರೆಯನ್ನು ಜರುಗುವದು.
ಪ್ರತಿವರ್ಷದಂತೆ ಈ ವರ್ಷವು ಶ್ರೀ ತ್ರಯಂಭಕೇಶ್ವರ ದೆವಸ್ಥಾನದ ಮಂಡಳಿಯು ಜಾತ್ರೆಯನ್ನು ಅದ್ದೂರಿ ಯಾಗಿ ನಡೆಸಲು ನಿರ್ಧರಿಸಿದ್ದು ಜಾತ್ರೆಯ ನಿಮಿತ್ಯವಾಗಿ ಹಲವಾರು ದಾರ್ಮಿಕ ಕಾರ್ಯಕ್ರಮ ಗಳು ನೆರವೇರಲಿದೆ. ಜಾತ್ರೆಯ ದಿನದಂದು ದಿನಾಂಕ ೩೦.೦೩.೨೦೨೩ ಗುರುವಾರ ಬೆಳಗ್ಗೆ ೬ಗಂಟೆಗೆ ಶ್ರೀಯಂಭಕೇಶ್ವರ ದೇವರಿಗೆ ಅಭೀಷೆಕ ನಂತರ ದೇವರಿಗೆ ಭಕ್ತರಿಂದ ಆಭರಣ ಸಮರ್ಪಣೆ. ೧೨ಗಂಟೆಗೆ ತ್ರಯಂಭಕೇಶ್ವರನಿಗೆ ಬಂಗಾರದ ಕೀರಿಟಧಾರಣೆ. ಸಂಜೆ ೫ಗಂಟೆಗೆ ಕಲ್ಮಠಕ್ಕೆ ಬಾಜ ಬಜಂತ್ರಿ ಡೊಳ್ಳು ಕುಣಿತ ಕಳಸ ಕನ್ನಡಿ ಯೊಂದಿಗೆ ಮೆರವಣಿಗೆ ಮುಖಾಂತರ ತೆರಳಿ ಕಾಮದೇನು ಕಲ್ಪತರು ಐರಾವತವನ್ನು ತಂದು ರಥಕ್ಕೆ ಪೂಜೆಯನ್ನು ನೆರವೇರಸಿದ ನಂತರ ಹರಗುರು ಚರ ಮೂರ್ತಿಗಳ ಸಮ್ಮುಖದಲ್ಲಿ ಸಂಜೆ ೬.೩೦ಕ್ಕೆ ಸಡಗರದಿಂದ ರಥೋತ್ಸವವನ್ನು ಕಲ್ಮಠದ ಅಭಿನವ ಸಿದ್ದಲಿಂಗಸ್ವಾಮಿಗಳು, ದೇವದುರ್ಗದ ಸಿದ್ದರಾಮೇಶ್ವರ ಸ್ವಾಮಿಗಳು, ಚನ್ನಯ್ಯಸ್ವಾಮಿಗಳು ಅಳವಳ್ಳಿಮಠ, ಸಿದ್ದಯ್ಯಸ್ವಾಮಿ ಅಳವಳ್ಳಿಮಠ ಸಮ್ಮುಖದಲ್ಲಿ ನೂರಾರು ಭಕ್ತರ ನೇತೃತ್ವದಲ್ಲಿ ಜಾತ್ರೆಯನ್ನು ಅದ್ದೂರಿಯಾಗಿ ಜರುಗಿಸಲಾಗುವದು ಸುತ್ತಮುತ್ತಲಿನ ಗ್ರಾಮದ ಭಕ್ತರು ಜಾತ್ರೆಯಲ್ಲಿ ಬಾಗವಹಿಸಿ ತ್ರಯಂಭಕೇಶ್ವರ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ದೇವಸ್ಥಾನ ಮಂಡಳಿಯ ಅಧ್ಯಕ್ಷ ರಾಮಣ್ಣ ಬಿಎಡ್, ಕಾರ್ಯದರ್ಶಿ ವಿಶ್ವನಾಥ ಕಾಮರಡ್ಡಿ ಯವರು ಮನವಿಮಾಡಿದ್ದಾರೆ.
ಕೊಟ್,ಕವಿತಾಳದ ತ್ರಯಂಭಕೇಶ್ವರ ದೇವರುಗಳುಗಳನ್ನು ಮೂರುನೂರು ವರ್ಷದ ವರೆಗೆ ಮಣ್ಣಿನಲ್ಲಿ ಮುಚ್ಚಿ ರಕ್ಷಿಸಿದ ಕಾರ್ಯವು ಮೆಚ್ಚುವಂತದ್ದು. ನಮ್ಮ ಹಿರಿಯರು ಮಣ್ಣಿನ ಗುಡ್ಡದಲ್ಲಿ ದೇವಸ್ಥಾನವಿದೆ ಎಂದು ಹೆಳುತ್ತಿದ್ದರು ಅಗೆದು ನೋಡಿದಾಗ ತಯಂಭಕೇಶ್ವರ ದೇವಸ್ಥಾನವು ಹೊರಬಿತ್ತು. ಇಂತಹ ಘಟನೆಯು ಬೇರೆ ಎಲ್ಲಿ ನಡೆದಿರುವದು ಕಾಣಲಾಗುತ್ತದೆ. ನಮ್ಮ ಸಮಾಜದ ಮುಖಂಡರಾದ ದಿವಂಗತ ಭೀಮನಗೌಡ ವಂದ್ಲಿಯವರು ದೇವಸ್ಥಾನದ ಅಭಿವೃದ್ದಿಗಾಗಿ ಬದ್ದವಾಗಿದ್ದರು.ರಾಜ್ಯದಲ್ಲಿಯೇ ಇಲ್ಲಿ ದನಗಳ ಜಾತ್ರೆ ನಡೆಸಲು ಪ್ರಸಿದ್ದಿಯನ್ನು ಪಡೆದಿದೆ-ವೀರಶೈವ ಸಮಾಜದ ಮುಖಂಡ ಶಿವನಗೌಡ ವಂದ್ಲಿ ಕವಿತಾಳ.