
ಸಂಜೆವಾಣಿ ವಾರ್ತೆಸಿರುಗುಪ್ಪ, ಅ.20: ಇತಿಹಾಸ ದಾಖಲೀಕರಣಕ್ಕೆ ಛಾಯಾಚಿತ್ರ ಮಾಧ್ಯಮ ಅತ್ಯಗತ್ಯ ಹಾಗೂ ಫೋಟೋಗ್ರಫಿ ಯಿಂದಾಗಿ ಸಿನಿಮಾಟೋಗ್ರಫಿ ಹುಟ್ಟಿದ್ದು, ಆಸ್ಪತ್ರೆಯ ಎಕ್ಸ್‌ರೇ ಮುಂತಾದಕ್ಕೂ ಫೋಟೋಗ್ರಫಿ ತಂತ್ರಜ್ಞಾನ ಸಹಾಯಕವಾಗಿದೆ, ಪತ್ರಿಕಾ ಮುದ್ರಣ ರಂಗದಲ್ಲೂ ಫೋಟೋಗ್ರಫಿ ತಂತ್ರಜ್ಞಾನದ ಪಾತ್ರವಿದೆ. ಬಾಹ್ಯಾಕಾಶ ಉಪಗ್ರಹಗಳಲ್ಲೂ ಕ್ಯಾಮರಾಗಳ ಪಾತ್ರ ಮಹತ್ವದ್ದಾಗಿದೆ. ವಿಶ್ವ ಛಾಯಾಗ್ರಹಣ ದಿನಾಚರಣೆ ಕೇವಲ ಛಾಯಾಗ್ರಹಕರಿಗಷ್ಟೇ ಅಲ್ಲ, ಪ್ರಪಂಚದ ಎಲ್ಲಾ ಕ್ಷೇತ್ರಗಳವರೂ ಆಚರಿಸಬೇಕಾದದ್ದು ಎಂದು ವೃತ್ತಿ ನಿರತ ಛಾಯಾಗ್ರಾಹಕ ಸಂಘದ ಜಿಲ್ಲಾ ಅಧ್ಯಕ್ಷ ನಾಡಗೌಡ ಚಂದ್ರ ಮೋಹನ ಹೇಳಿದರು.ನಗರದ ನೀಲಕಂಠೇಶ್ವರ ದೇವಸ್ಥಾನದ ಆವರಣದಲ್ಲಿ ತಾಲೂಕು ಫೋಟೊ ಮತ್ತು ವಿಡೀಯೋ ವೃತ್ತಿಪರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ 184ನೇ ವಿಶ್ವ ಛಾಯಾಗ್ರಹಣ ದಿನಾಚರಣೆಯನ್ನು ದೀಪ ಹಚ್ಚುವುದರ ಮೂಲಕ ಆಚರಿಸಲಾಯಿತು.ಛಾಯಾಗ್ರಹಣವು ಇಂದಿನ ಯುವಜನೆತೆಯ ನೆಚ್ಚಿ ಕ್ಷೇತ್ರವಾಗಿದೆ. ಇತ್ತೀಚಿನ ದಿನಗಳಲ್ಲಿ ಯುವಜನತೆ ತಮ್ಮ ತಮ್ಮ ಸ್ಮಾರ್ಟ್ ಫೋನ್‌ಗಳಲ್ಲಿ ಫೋಟೋಗಳನ್ನು ತೆಗೆದುಕೊಳ್ಳುತಿದ್ದರೆ. ಹೆಚ್ಚಿನ ಜನರ ಫ್ಯಾಷನ್ ಆಗಿ ಫೋಟೋಗ್ರಫಿ ಮಾರ್ಪಟ್ಟಿದೆ. ಪ್ರತಿ ವರ್ಷ ಆಗಸ್ಟ್ 19 ರಂದು ವಿಶ್ವ ಛಾಯಾಗ್ರಹಣ ದಿನವನ್ನು ಆಚರಿಸಲಾಗುತ್ತದೆ. “ಒಂದು ಚಿತ್ರ ಸಾವಿರ ಪದಗಳಿಗೆ ಸಮ” ಇದು ಛಾಯಾಗ್ರಹಣಕ್ಕೆ ಇರುವ ಸಾಮರ್ಥ್ಯವೇ ಆಗಿದೆ, ಪದಗಳಲ್ಲಿ ವರ್ಣಿಸಲು ಸಾಧ್ಯವಾಗದ ಅದೇಷ್ಟೋ ಮಾತುಗಳನ್ನು ಕೇವಲ ಒಂದು ಚಿತ್ರ ಬಿಡಿಸುತ್ತದೆ ಎಂಬಂಥ ಮಾತುಗಳನ್ನು ಈ ಛಾಯಾಗ್ರಹಣ ತಿಳಿಸುತ್ತದೆ ಎಂದು ಎಸ್.ಪಿ.ಎ ಸಂಘದ ತಾಲೂಕು ಅಧ್ಯಕ್ಷ ನಾಗರಾಜ ತಿಳಿಸಿದರು.ಇಂದು ಫೋಟೋಗ್ರಫಿ ಎನ್ನುವುದು ಒಂದು ದೊಡ್ಡ ಉದ್ಯಮವಾಗಿದೆ. ಫೋಟೋಗ್ರಫಿ ಉದ್ಯಮವು ಈಗ ಎಲ್ಲಾ ಕ್ಷೇತ್ರಗಳಲ್ಲಿ ತನ್ನ ಛಾಪನ್ನ ಮೂಡಿಸಿದೆ. ಲಕ್ಷಾಂತರ ಯುವ ಜನರು ಫೋಟೋಗ್ರಫಿಯಿಂದಲೇ ತಮ್ಮ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಇಂದಿನ ಯುಗದಲ್ಲಿ ಫೋಟೋಗ್ರಫಿ ಎಂದರೆ, ಅದು ಕೇವಲ ಫೋಟೋ ತೆಗೆಯುವುದು ಮಾತ್ರವಲ್ಲ, ಮದುವೆ, ಸಭೆ, ಸಮಾರಂಭಗಳಲ್ಲಿ ವಿಡಿಯೋಗಳನ್ನು ಸೆರೆ ಹಿಡಿದು ಅದನ್ನು ಸುಂದರವಾಗಿ ಕಟ್ಟಿಕೊಡುವ ಒಂದು ಕಲೆಯೂ ಆಗಿದೆ. ಇಂದು ವೆಡ್ಡಿಂಗ್ ಫೋಟೋಗ್ರಫಿ, ಸಿನಿಮಾ ಫೋಟೋಗ್ರಫಿ ಎಂಬ ಹೆಸರಿನಲ್ಲಿ ದೊಡ್ಡ ಉದ್ದಿಮೆಯಾಗಿ ಬೆಳೆದು ನಿಂತಿದೆ ಎಂದು ಹಳೆಕೋಟೆ ಶ್ರೀ ಮರಿ ಶಿವಯೋಗಿ ಮಠಟದ ಶ್ರೀ ಸಿದ್ದಬಸವ ಮಹಾಸ್ವಾಮಿ ತಿಳಿಸಿದರು.ಶಾಸಕ ಬಿ.ಎಂ ನಾಗರಾಜ, ಕರ್ನಾಟಕ ಛಾಯಾಗ್ರಾಹಕ ಸಂಘದ ನಿರ್ದೇಶಕ ವೀರೇಶ್.ಕೆ, ಉಪಾಧ್ಯಕ್ಷ ರವಿಕುಮಾರ್ ಕಾರ್ಯದರ್ಶಿಗಳು ಮತ್ತು ಸಹಾ ಕಾರ್ಯದರ್ಶಿ ಗಳಾದ ರಾಜಶೇಕರ, ಮಹೇಶ್, ಯಲ್ಲಪ್ಪ, ಶರಣ, ಸುರೇಶ್, ವಿಶ್ವ, ಶಿವಕುಮಾರ್, ಹುಲುಗಪ್ಪ, ನೂರ್ ಮಹಮ್ಮದ್, ಮಹಾಂತೇಶ್, ನಾಗರಾಜ ಹಾಗೂ ಸದಸ್ಯರು ಇದ್ದರು.