
ಚನ್ನಮ್ಮನ ಕಿತ್ತೂರ,ಮೇ20: ಇವತ್ತಿನ ದಿನಮಾನದಲ್ಲಿ ಶಾಸ್ತ್ರಗಳ ಅಭ್ಯಾಸ ಮಾಡುವವರ ಸಂಖ್ಯೆ ಕುಸಿಯುತ್ತಿದೆ. ಮತ್ತು ಇತಿಹಾಸ ತಿಳಿದುಕೊಳ್ಳಬೇಕೆಂಬುವ ಹಂಬಲ ಇಂದಿನ ಮನುಕುಲಕ್ಕೆ ಕಡಿಮೆಯಾಗಿದೆಯೆಂದು ಕ್ಷೇತ್ರ ಶಿಕ್ಷಣಾಧಿಕಾರಿ ರವೀಂದ್ರ ಬಳಿಗಾರ ಹೇಳಿದರು.
ಪುರಾತತ್ವ ಸಂಗ್ರಹಾಲಯಗಳ ಮತ್ತು ಪರಂಪರೆ ಇಲಾಖೆ, ಕೆ ಆÀರ್ ಸಿ ಎಂ ಸರ್ಕಾರಿ ವಸ್ತು ಸಂಗ್ರಹಾಲಯ ಕಿತ್ತೂರ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಕೋಟೆ ಆವರಣದಲ್ಲಿ ಅಂತರಾಷ್ಟ್ರೀಯ ವಸ್ತು ಸಂಗ್ರಹಾಲಯ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅಧ್ಯಕ್ಷ ಸ್ಥಾನ ವಹಿಸಿಕೊಂಡು ಮಾತನಾಡಿದರು. ಹಿಂದಿನ ಕಾಲದ ಶಾಸನಗಳ ಅರಿವು ಪ್ರತಿಯೊಬ್ಬರಿಗೂ ಇರಬೇಕು. ಅವುಗಳನ್ನು ಅಭ್ಯಸಿಸಿ ಬೇರೆಯವರಿಗೂ ಸಹ ತಿಳಿಹೇಳಬೇಕು. ಇಂದಿನ ಮಕ್ಕಳಿಗೆ ಇದು ಬಹಳ ಅವಶ್ಯಕತೆಯಿದೆ ಎಂದು ಹೇಳಿದರು.
ಪ್ರಸ್ತಾವಿಕವಾಗಿ ಕಿತ್ತೂರ ಕೋಟೆ ವಸ್ತು ಸಂಗ್ರಹಾಲಯದ ಕ್ಯೂರೇಟರ್ ರಾಘವೇಂದ್ರ ಮಾತನಾಡಿ ರಾಣಿ ಚನ್ನಮ್ಮಾಜೀ ಐತಿಹಾಸಿಕ ಸ್ಥಳದಲ್ಲಿ ಇತಿಹಾಸ ಸಾರುವ ಬೇಕಾದಷ್ಟು ಸ್ಮಾರಕಗಳನ್ನು ಹೊಂದಿದ್ದು ಅವು ನೈಜ ಇತಿಹಾಸವನ್ನು ತಿಳಿಸುವ ಪಳಿಯುಳಿಕೆಗಳಿವೆ. ಅವುಗಳನ್ನು ಇಂದಿನ ಯುವಪೀಳಿಗೆ ಅಭ್ಯಸಿಸಿ ಅಧ್ಯಯನ ಮಾಡಿ ಸಂರಕ್ಷಣೆ ಮಾಡುವ ಕೆಲಸವಾಗಬೇಕೆಂದರು.
ಹಂಪಿ ವಿಶ್ವವಿದ್ಯಾಲಯದ ಡಾ|| ಚಂದ್ರಶೇಖರ ತಾಗೋಜಿ ಉಪನ್ಯಾಸ ನೀಡಿ ಮಾತನಾಡಿ ಶಾಸನಗಳ ಹಿನ್ನೆಲೆ ಇಂದಿನ ಇತಿಹಾಸದ ಮಹತ್ವವಿದೆ. ಅವುಗಳನ್ನು ಅವಲೋಕನ ಮಾಡಿ ಅಭ್ಯಸಿಸಿ ತಿಳಿಯಬೇಕಾಗಿದೆ. ಸಂಸ್ಕøತಿ ಬಿಂಬಿಸುವ ವಸ್ತು ಸಂಗ್ರಹಾಲಯಗಳ ಪಾತ್ರ ಹಿರಿಯದ್ದಾಗಿದ್ದು ಮತ್ತು ಅವುಗಳ ರಕ್ಷಣೆ ಬಹಳ ಮುಖ್ಯ. ಹಳೆಯ ವಸ್ತುಗಳಿಂದ ಇಂದಿನ ಶಾಸನಗಳ ಕಂಡು ಹಿಡಿದು ಅಧ್ಯಯನ ಮಾಡಬಹುದೆಂದರು.
ಪುರಾತತ್ವ ಇಲಾಖೆಯ ಅಭಿಯಂತರ ಜಗದೀಶ ಮಾತನಾಡಿದರು. ಸರ್ಕಾರ ಪಧವಿ ಪೂರ್ವ ಕಾಲೇಜ ಪ್ರಚಾರ್ಯ ಜಿ.ಎಂ ಗಣಾಚಾರಿ ಸಸಿಗೆ ನೀರುಣಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಪ್ರಾಚಾರ್ಯರು. ಉಪನ್ಯಾಸಕರು ಪಾಲ್ಗೊಂಡಿದ್ದರು. ಒಂದಿಷ್ಟು ರಸಭರಿತ ಪ್ರಶ್ನೆಗಳ ಸಂವಾದ ಏರ್ಪಟ್ಟಿತು. ಕಾರ್ಯಕ್ರಮದಲ್ಲಿ ವಸ್ತು ಸಂಗ್ರಹಾಲಯದ ಚಿತ್ರಣದ ಪ್ರದರ್ಶನ ಏರ್ಪಡಿಸಲಾಗಿತ್ತು.
ಶಿಕ್ಷಕ ಸಂಘದ ಅಧ್ಯಕ್ಷ ಸಿದ್ದಪ್ಪ ಹುಲಮನಿ, ಕಸಾಪ ಅಧ್ಯಕ್ಷ ಸಿದ್ದಣ್ಣ ಹುಲಮನಿ, ಕಬೇರ ಜಾಯಕ್ಕನವರ, ಬಸವರಾಜ ಬಿದರಿ, ವಿಠ್ಠಲ ಮಿರಜಕರ, ಹೊಂಗಲ, ಮಂಜುನಾಥ ಕಳಸನ್ನವರ ಕಾರ್ಯಕ್ರಮ ನಿರೂಪಿಸಿದರು, ಆರ್ ಕೆ ರಗಟ್ಟಿ ವಂದಿಸಿದರು, ವಸ್ತು ಸಂಗ್ರಹಾಲಯದ ಸಿಬ್ಬಂದಿ ಸೇರಿದಂತೆ ಅನೇಕರಿದ್ದರು.