ಇತಿಹಾಸ ಅರಿವಿಲ್ಲದಿದ್ದರೆ ಇತಿಹಾಸ ಉಳಿವು ಅಸಾಧ್ಯ

ಕೋಲಾರ,ಡಿ,೩:ನಮ್ಮ ಮುಂದಿನ ಪೀಳಿಗೆಗೆ ಸ್ವಾತಂತ್ರ್ಯದ ಅರಿವು ಮೋಡಿಸದಿದ್ದಲ್ಲಿ ಭವಿಷ್ಯದಲ್ಲಿ ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವವನ್ನು ಉಳಿಸಿ ಕೊಳ್ಳಲು ಸಾಧ್ಯವಿಲ್ಲ. ಇತಿಹಾಸದ ಅರಿವು ಇಲ್ಲದಿದ್ದರೆ ಇತಿಹಾಸವನ್ನು ಉಳಿಸಿ ಕೊಳ್ಳಲು ಸಾಧ್ಯವಿಲ್ಲ ಎಂದು ಉಚ್ಚನ್ಯಾಯಾಲಯದ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅಭಿಪ್ರಾಯ ಪಟ್ಟರು,
ನಗರದ ಕೋಲಾರದ ಬಳಗದ ವತಿಯಿಂದ ಕನ್ನಡ ಭವನದಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯ ಹೋರಾಟಗಾರ ಹೆಬ್ಬಣಿ ನಾಗಪ್ಪ ಅವರ ಕೃತಿ ಬಿಡುಗಡೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಅಂದು ನಮ್ಮ ಹಿರಿಯರು ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನದ ಹೋರಾಟ ಮಾಡದಿದ್ದರೆ ನಾವು ಇಂದು ಸ್ವಾತಂತ್ರ್ಯವಾಗಿರಲು ಇಂದಿಗೂ ಸಾಧ್ಯವಾಗುತ್ತಿರಲಿಲ್ಲ ಎಂದರು,
ಇಂದಿನ ತಲೆಮಾರಿನವರಿಗೆ ಸ್ವಾತಂತ್ರ್ಯ ಹೋರಾಟಗಾರರ ಪರಿಚಯವಿಲ್ಲ. ಅವರು ಹೋರಾಟಗಳು ಸ್ವಾತಂತ್ರ್ಯಕ್ಕಾಗಿ ಮಾತ್ರವಲ್ಲ ಸಾಮಾಜಿಕವಾಗಿಯೂ ೪-೫ ತಲೆಮಾರಿನ ಹೋರಾಟಗಳು ಮಾಡಿದ್ದರು. ಅಂದು ನಗುನಗುತಾ ನೇಣಿಗೆ ಕೊರಳೂಡ್ಡಿದ್ದರು, ನಗುನಗುತಾ ಬ್ರಿಟಿಷರ್ ಬಂದೂಕಿಗೆ ಎದೆಯುಡ್ಡಿದ್ದರು. ಯುವಕರು, ಶಿಕ್ಷಣ ಬಿಟ್ಟರು. ಕುಟುಂಬ ಬಿಟ್ಟರು, ಆಸ್ತಿಪಾಸ್ತಿಗಳನ್ನು ತೊರೆದು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿ ತ್ಯಾಗ ಬಲಿದಾನ ಮಾಡದಿದ್ದರೆ ನಾವಿಂದು ಶಾಂತಿ ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತಿರಲಿಲ್ಲ ಎಂದ ಅವರು ರಷ್ಯ ದೇಶವನ್ನು ಉದಾಹರಿಸಿದರು,
ಹೆಬ್ಬಣಿ ನಾಗಪ್ಪ ಅವರಂಥ ಸಾವಿರಾರು ಮಂದಿ ಇದ್ದಾರೆ ಅಂಥಹ ಸ್ವಾತಂತ್ರ್ಯ ಹೋರಾಟದ ಮಹಾನ್ ಪುರುಷರು ಪ್ರತಿ ತಾಲ್ಲೂಕಿನಲ್ಲೂ, ಪ್ರತಿ ಜಾತಿಯಲ್ಲೂ ಇದ್ದಾರೆ, ಸ್ವಾತಂತ್ರ್ಯ ಹೋರಾಟದ ಕ್ರಾಂತಿಯಲ್ಲಿ ಯಾವೂದೇ ಜಾತಿ,ಸಮುದಾಯಕ್ಕೆ ಮೀಸಲು ಅಗದೆ ಎಲ್ಲಾ ಜಾತಿಯವರು ಜಾತ್ಯಾತಿತವಾಗಿ ಸಂಘಟಿತರಾಗಿ ಹೋರಾಟ ಮಾಡಿದಂತವರು ಎಲೆಯ ಮರೆಯ ಕಾಯಿಯಂತೆ ಇರುವವರನ್ನು ಬೆಳಕಿಗೆ ತರುವ ಕೆಲಸವನ್ನು ಮಾಡಲು ಕೃತಿ ರಚಿಸಲು ಮುಂದಾಗಿರುವುದ ಅತ್ಯುತ್ತಮ ಕೆಲಸವಾಗಿದೆ ಎಂದು ತಿಳಿಸಿದರು,
ಭಾರತದ ಹೋರಾಟದ ಗುರಿಯು ಸಮಸಮಾಜ ನಿರ್ಮಾಣವಾಗಿತ್ತು. ಅದರೆ ಇದಕ್ಕೆ ಜಾತಿ ಧರ್ಮಗಳು ಅಡ್ಡಿ ಬಂದಾಗ ಸಂವಿಧಾನ ರಚನೆಯಲ್ಲಿ ಸಾಮಾಜಿಕ ನ್ಯಾಯದಿಂದ ಸಾಧ್ಯವಾಯಿತು. ಎಂದ ಅವರು ದೇಶದ ಮುಗ್ದರನ್ನು ಹೋರಾಟದಲ್ಲಿ ತೊಡಗಿಸಿ ಕೊಳ್ಳುವಂತೆ ಪ್ರೇರೇಪಿಸುವಂತ ಶಕ್ತಿ ನಾಗಪ್ಪ ಅವರಲ್ಲಿ ಇತ್ತು, ಗಾಂಧಿಜೀಯವರ ಅನುಯಾಯಿಗಳಾಗಿದ್ದ ನಮ್ಮ ತಂದೆ ಮತ್ತು ತಾತನವರು ಗಾಂಧಿಜೀಯವರ ಭಾಷಣ ಕೇಳುವುದಕ್ಕೆ ಚೆನ್ನೈಗೆ ಹೋದ ಸಂದರ್ಭವನ್ನು ನೆನಪಿಸಿ ಕೊಂಡರು,