ಇತಿಹಾಸ ಅರಿಯದವರು ಇತಿಹಾಸ ಸೃಷ್ಟಿಸಲಾರರು

ಬೀದರ:ಸೆ.17: ನಗರದ ಸರಸ್ವತಿ ಶಿಕ್ಷಣ ವಿಕಾಸ ಸಮಿತಿ ಸಂಚಾಲಿತ ಸರಸ್ವತಿ ಶಿಶು ಮಂದಿರ, ಹಿರಿಯ ಪ್ರಾಥಮಿಕ ಶಾಲೆ, ಶ್ರೀ ವಿದ್ಯಾರಣ್ಯ ಪ್ರೌಢ ಶಾಲೆ ಮತ್ತು ಸರಸ್ವತಿ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಆಚರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದಂತಹ ಶಿಕ್ಷಣ ಸಂಯೋಜಕರಾದ ಶ್ರೀ ಸಂಜಪ್ಪಾ ಮಾಣೂರೆ ಅವರು ನಮ್ಮ ಭಾರತ ಸ್ವತಂತ್ರ ಆದ ನಂತರ 562 ದೇಶಿಯ ಸಂಸ್ಥಾನಗಳಿದ್ದವು. ಅದರಲ್ಲಿ ಮೂರು ಸಂಸ್ಥಾನಗಳು ಸ್ವತಂತ್ರ್ಯವಾಗಿದ್ದವು. ಅಭಿವೃದ್ಧಿಯ ಮುಂಚಣಿಯಲ್ಲಿ ಮೈಸೂರು ಅಗ್ರ ಸ್ಥಾನದಲ್ಲಿತ್ತು ಆದರೆ ದೊಡ್ಡದಾದ ಸಂಸ್ಥಾನ ಹೈದ್ರಾಬಾದ ನಿಜಾಮನ ಸಂಸ್ಥಾನವಿತ್ತು. ಹೈದ್ರಾಬಾದನ ನಿಜಾಮನಾದ ಅಲಿಖಾನ್ ಪಾಕಿಸ್ತಾನ ಸಹಾಯದೊಂದಿಗೆ ಭಾರತವನ್ನು ಸೇರಲು ನಿರಾಕರಿಸಿದ. ಭಾರತದ ಗ್ರಹಮಂತ್ರಿಗಳಾದ ಉಕ್ಕಿನ ಮನುಷ್ಯನೆಂದು ಕರೆಯಲ್ಪಡುವ ಸರದಾರ ವಲ್ಲಭಭಾಯಿ ಪಟೇಲರು ಪೊಲೀಸ ಕಾರ್ಯಚರಣೆ “ಆಪರೇಷನ್ ಪೋಲೋ” ಮೂಲಕ 17ನೇ ಸೆಪ್ಟೆಂಬರ್ 1948ರಂದು ಹೈದ್ರಾಬಾದ ಸಂಸ್ಥಾನವನ್ನು ಭಾರತದಲ್ಲಿ ವಿಲೀನಗೊಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಪೀರಪ್ಪಾ ಔರಾದೆ ಅವರು ಈ ಸಂದರ್ಭದಲ್ಲಿ ಗೋರ್ಟಾದಲ್ಲಿ ನಡೆದಿರುವಂತಹ ಮಾರಣಹೋಮದ ಘಟನೆಯನ್ನು ವಿಸ್ತಾರವಾಗಿ ತಿಳಿಸಿದರು ಇದನ್ನು ಭಾರತದ ಎರಡನೇ ಜಲಿಯಾನ್ ವಾಲಾಬಾಗ ಹತ್ಯಾಕಾಂಡ ಎಂದು ಹೇಳಬಹುದು.
ವೇದಿಕೆ ಮೇಲೆ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಚೆನ್ನಬಸವಂತ ರೆಡ್ಡಿ, ಎಲ್ಲ ಪ್ರಕಲ್ಪಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಸ್ವಾಗತ ಪರಿಚಯ ಮಹಾಂತೇಶ ಮಾಡಿದರೆ, ಲಕ್ಷ್ಮೀ ಜವಾಹರ ದೇಶಭಕ್ತಿ ಗೀತೆ ಹಾಡಿದಳು. ದೃಷ್ಟಿ ಶಿವಕುಮಾರ ವಂದನಾರ್ಪಣೆ ಮಾಡಿದರೆ ಗಣೇಶ ದತ್ತಾತ್ರಿ ಕಾರ್ಯಕ್ರಮ ನಿರೂಪಣೆಯನ್ನು ಮಾಡಿದರು.
ಕರ್ನಾಟಕ ಬೊರ್ಡ್‍ನಿಂದ ನಡೆಸಿರುವಂತಹ ಹೈಯರ್ ಗ್ರೇಡ್ ಚಿತ್ರಕಲಾ ಪರೀಕ್ಷೆಯಲ್ಲಿ ಅಗ್ರ ಶ್ರೇಣಿಯಲ್ಲಿ ಉತ್ತೀರ್ಣರಾದ 37 ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.