ಇತಿಹಾಸ ಅಕಾಡೆಮಿಯಿಂದ
ನಿವೃತ್ತ ಉಪನ್ಯಾಸಕರಿಗೆ ಸನ್ಮಾನ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಸೆ.07: ಶಿಕ್ಷಕರ ದಿನಾಚರಣೆ ಅಂಗವಾಗಿ ಇಂದು  ವೀರಶೈವ ಕಾಲೇಜಿನ ನಿವೃತ್ತ ಪ್ರಾಚಾರ್ಯರು,  ಜಿಲ್ಲಾ ವಿಜ್ಞಾನ ಕೇಂದ್ರದ ನಿವೃತ್ತ ನಿರ್ದೇಶಕರು,  ವಿಜ್ಞಾನ ಲೇಖಕ ಪ್ರೊ. ಸಿ. ನಾಗಭೂಷಣ ಇವರನ್ನು ಅವರ ಸ್ವಗೃಹದಲ್ಲಿ ಅವರ ಧರ್ಮ ಪತ್ನಿ  ಮಲ್ಲಿಕಾ ಅವರೊಂದಿಗೆ  ಇತಿಹಾಸ ಅಕಾಡೆಮಿ ಜಿಲ್ಲಾಧ್ಯಕ್ಷ  ಟಿ. ಎಚ್. ಎಂ. ಬಸವರಾಜ್ ಅವರು ಮತ್ತು ಸದಸ್ಯರು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಪಾಂಡುರಂಗ ರಾವ್ ಎನ್, ಸುಬ್ರಮಣ್ಯ ಎನ್, ಜಿ ರುದ್ರಪ್ಪ, ಬಾಲ ರಂಗಾರೆಡ್ಡಿ ಅಮರೇಶಪ್ಪ, ಸಿ. ದೀಪಾ, ಸಿ.ಎ. ಯರ್ರಿಸ್ವಾಮಿ, ಜಂತಕಲ್ ವಿನಯ್ ಮತ್ತು ಇತಿಹಾಸ ಅಕಾಡೆಮಿಯ ಸದಸ್ಯರು ಉಪಸ್ಥಿತರಿದ್ದರು

Attachments area