ಇತಿಹಾಸ ಅಕಾಡೆಮಿಗೆ ಸಂಗನಬಸವಸ್ವಾಮಿಗಳ ಕೊಡುಗೆ ಅಪಾರ

(ಸಂಜೆವಾಣಿ ವಾರ್ತೆ)
ಬಳ್ಳಾರಿ ನ 23 : ಕರ್ನಾಟಕ ಇತಿಹಾಸ ಅಕಾಡೆಮಿಗೆ ಲಿಂಗೈಕ್ಯ ಡಾ.ಸಂಗನ ಬಸವ ಸ್ವಾಮಿಗಳ ಕೊಡುಗೆ ಮಹತ್ವದ್ದಾಗಿದೆ. ಅವರು ಅಕಾಡೆಮಿಯ ಕಾರ್ಯಕ್ರಮಗಳಿಗಾಗಿ ಪ್ರತಿವರ್ಷ ಒಂದು ಲಕ್ಷ ರೂಗಳ ದೇಣಿಗೆ ನೀಡುತ್ತಿದ್ದರು ಎಂದು ಅಕಾಡೆಮಿಯ  ಕಾರ್ಯಕಾರಿ ಸಮಿತಿ ಸದಸ್ಯರೂ ಆಗಿರುವ ಕರ್ನಾಟಕ ಜಾನಪದ ಪರಿಷತ್ತಿನ ಬಳ್ಳಾರಿ ಜಿಲ್ಲಾ ಅಧ್ಯಕ್ಷ ಟಿ.ಹೆಚ್.ಎಂ. ಬಸವರಾಜ್ ಹೇಳಿದ್ದಾರೆ.
ಶ್ರೀಗಳ ನಿಧನ ತೀವ್ರ ಸಂತಾಪ ವ್ಯಕ್ತಪಡಿಸಿರುವ ಅವರು ಕನ್ನಡ ನಾಡಿನ ಇತಿಹಾಸ, ಹಿಂದು ಧಾರ್ಮಿಕತೆ, ವೀರಶೈವ ಲಿಂಗಾಯತ ಧರ್ಮ ರಕ್ಷಣೆ ಹಾಗೆ ಬಡ ಮಕ್ಕಳ‌ ವಿದ್ಯಾಭ್ಯಾಸಕ್ಕೆ ಕೊಟ್ಟ ಮಹತ್ವ ಸ್ಮರಣೀಯವಾದುದು ಎಂದಿದ್ದಾರೆ.