ಚಿತ್ರದುರ್ಗ.ಏ.೨೨ : ಕಾದಂಬರಿ ಮೂಲಕ ಚಿತ್ರದುರ್ಗದ ಇತಿಹಾಸವನ್ನು ನಾಡಿಗೆ ಪರಿಚಯಿಸಿದ ಇತಿಹಾಸ ಪುರುಷ ತ.ರಾ.ಸು. ಎಂದು ಹಿರಿಯ ಪತ್ರಕರ್ತ ಜಿ.ಎಸ್.ಉಜ್ಜಿನಪ್ಪ ಬಣ್ಣಿಸಿದರು.ತ.ರಾ.ಸು.ರವರ 103 ನೇ ಜನ್ಮದಿನದ ಅಂಗವಾಗಿ ಕೃಷ್ಣರಾಜೇಂದ್ರ ಕೇಂದ್ರ ಗ್ರಂಥಾಲಯದ ಆವರಣದಲ್ಲಿರುವ ತ.ರಾ.ಸು. ಪುತ್ಥಳಿಗೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.ಇಂದಿನ ಯುವ ಪೀಳಿಗೆ ಚಿತ್ರದುರ್ಗದ ಇತಿಹಾಸವನ್ನು ತಿಳಿಯಬೇಕಾದರೆ ತ.ರಾ.ಸು.ರವರ ಕಾದಂಬರಿಯನ್ನು ಓದಬೇಕು. ಇತಿಹಾಸವಿಲ್ಲದಿದ್ದರೆ ಜೀವನವೆ ಇಲ್ಲ. ಐತಿಹಾಸಿಕ ಚಿತ್ರದುರ್ಗದ ಕೋಟೆಯ ಇತಿಹಾಸವನ್ನು ಕಾದಂಬರಿ ಮೂಲಕ ನಾಡಿನಾದ್ಯಂತ ಪರಿಚಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.ಮುಖ್ಯ ಗ್ರಂಥಾಲಯಾಧಿಕಾರಿ ಕೊಳ್ಳಿ ಬಸವರಾಜ, ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಸದಸ್ಯ ಹಾಗೂ ನಗರಸಭೆ ಮಾಜಿ ಸದಸ್ಯ ಕೆ.ನಾಗರಾಜು, ಹಿಂದಿನ ಗ್ರಂಥಾಲಯಾಧಿಕಾರಿ ತಿಪ್ಪೇಸ್ವಾಮಿ ಹಾಗೂ ನೂರಾರು ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.