ಇತಿಹಾಸದ ಬಗ್ಗೆ ಈಗಿನ ಪೀಳಿಗೆಗೆ ತಿಳಿಸಲು ಗ್ರಂಥಗಳ ಅಗತ್ಯವಿದೆ

ಕೆ.ಆರ್.ಪೇಟೆ.ನ.11:- ಸಮುದಾಯದ ಬಂಧುಗಳು ಮೊದಲು ಸಂಘಟಿತರಾಗಬೇಕು ಹಾಗೂ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಿದರೆ ಮಾತ್ರ ಶೈಕ್ಷಣಿಕವಾಗಿ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಮುಂದುವರಿಯಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಪ್ರದೇಶ ಕುರುಬರ ಸಂಘದ ರಾಜ್ಯಾಧ್ಯಕ್ಷ ಬಿ.ಸುಬ್ರಹ್ಮಣ್ಯ ಅವರು ಅಭಿಪ್ರಾಯಪಟ್ಟರು.
ಅವರು ಪಟ್ಟಣದ ಸಾಹುಕಾರ್ ಚಿಕ್ಕಣ್ಣಗೌಡ ಸಮುದಾಯ ಭವನದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದ ಕೆ.ಆರ್.ಪೇಟೆ ತಾಲ್ಲೂಕು ಶಾಖೆಯ ನೂತನ ಪದಾಧಿಕಾರಿಗಳ ಪದಗ್ರಹಣ, ಸಾಧಕರಿಗೆ ಕಾಯಕಯೋಗಿ ಪ್ರಶಸ್ತಿ, ಸಮುದಾಯದ ಹಿರಿಯರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಜ್ಯದಲ್ಲಿ ಮೂರನೇ ಅತಿ ದೊಡ್ಡ ಹಿಂದುಳಿದ ಸಮಾಜವಾಗಿರುವ ನಮ್ಮ ಕುರುಬ ಸಮಾಜದ ಇತಿಹಾಸದ ಬಗ್ಗೆ ಈಗಿನ ಪೀಳಿಗೆಗೆ ತಿಳಿಸಲು ಗ್ರಂಥಗಳ ಅಗತ್ಯವಿದೆ ಎಂದು ಪ್ರತಿಪಾದಿಸಿದ ಅವರು ಸಮಾಜದ ಅನೇಕ ಜನರಿಗೆ ಇತಿಹಾಸವೇ ತಿಳಿದಿಲ್ಲ.
ಸಮಾಜದ ಕುರುಬ ಸಮಾಜದ ಸಾಧನೆಯನ್ನು ಮಕ್ಕಳಿಗೂ ಮುಟ್ಟಿಸಬೇಕು. ದಾಸ ಶ್ರೇಷ್ಠ ಭಕ್ತ ಕನಕದಾಸ, ಸಂಗೊಳ್ಳಿ ರಾಯಣ್ಣ ಮೊದಲಾದ ಸಮಾಜದ ಪ್ರಮುಖರು ಕುರುಬರನ್ನು ಮಾತ್ರವಲ್ಲದೆ ಇತರ ಸಮುದಾಯವನ್ನು ಎಚ್ಚರಿಸಿದ್ದಾರೆ ಹಾಗೂ ಮಾರ್ಗದರ್ಶನ ನೀಡಿದ್ದಾರೆ ಎಂಬುದನ್ನು ಇತಿಹಾಸದಲ್ಲಿ ನಾವು ತಿಳಿದಿದ್ದೇವೆ.ಅಂತಹ ಎಲ್ಲಾ ಮಹನೀಯರು ಇತಿಹಾಸ ತಿಳಿಸಲು ಗ್ರಂಥಗಳು ಬಹಳ ಪ್ರಯೋಜನಕಾರಿಯಾಗಿದೆ. ಎಲ್ಲಾ ತಳ ಸಮುದಾಯಗಳು ತಮ್ಮ ಕುಲದ ಚರಿತ್ರೆಯನ್ನು ಕಟ್ಟಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಆರ್ ಟಿ ಓ ಅಧಿಕಾರಿ ಮಲ್ಲಿಕಾರ್ಜುನ್ ಮಾತನಾಡಿ ಯಾವುದೇ ಸಮುದಾಯದ ಸಂಘಗಳಲ್ಲಿ ಪದಾಧಿಕಾರಿಗಳು ಹಾಗೂ ಸದಸ್ಯರು ಹಾಗೂ ಸಮಾಜದ ಜನರು ಒಡಕನ್ನು ತರದೇ ಅಭಿಪ್ರಾಯ ಹಾಗೂ ಭಿನ್ನಾಭಿಪ್ರಾಯಗಳನ್ನು ನಾಲ್ಕು ಗೋಡೆಗಳ ಮಧ್ಯೆ ಆರೋಗ್ಯಕರ ಚರ್ಚೆ ನಡೆಸಿ ಬಗೆಹರಿಸುವ ಮೂಲಕ ಸಂಘವನ್ನು ಸಂಘಟಿಸಿ ಸಮುದಾಯದ ಏಳಿಗೆಗಾಗಿ ಶ್ರಮಿಸಿ ಸಮಾಜವನ್ನು ಉತ್ತಮ ಸ್ಥಾನಕ್ಕೆ ಕೊಂಡೊಯ್ಯಲು ಎಲ್ಲರ ಸಹಕಾರ ಅತ್ಯಗತ್ಯವಾಗಿದೆ ಎಂದು ಸಲಹೆ ನೀಡಿದರು. ಯಾವುದೇ ಸಮುದಾಯ ತಮ್ಮ ಸಮಾಜವನ್ನು ಪ್ರೀತಿಸಬೇಕು ಇತರೆ ಸಮುದಾಯವನ್ನು ಗೌರವಿಸಿದರೆ ಮಾತ್ರ ಸಮಾಜದಲ್ಲಿ ನಮ್ಮ ಸಮಾಜಕ್ಕೆ ಘನತೆ ಗೌರವಗಳು ತಾವಾಗಿಯೇ ಸಿಗುತ್ತವೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕೆ.ಆರ್.ಪೇಟೆ ತಾಲ್ಲೂಕಿನವರಾಗಿ ರಾಜ್ಯದ ವಿವಿಧ ಇಲಾಖೆಗಳಲ್ಲಿ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿರುವ ಆರ್.ಟಿ. ಓ ಅಧಿಕಾರಿ ಮಲ್ಲಿಕಾರ್ಜುನ್, ತುಮಕೂರಿನ ಭೂ ಸ್ವಾಧೀನ ಅಧಿಕಾರಿ ಜಿ .ಆರ್ .ನಟರಾಜು, ಆಡುಗೋಡಿಯ ಪೆÇಲೀಸ್ ಇನ್ಸ್ ಪೆಕ್ಟರ್ ಜಿ. ಡಿ ಮಂಜುನಾಥ್, ತುಮಕೂರಿನ, ಉಪ ನೊಂದಣಾಧಿಕಾರಿ ಕೆ.ಎಸ್. ಮಹೇಶ್, ಕೆ.ಆರ್.ಪೇಟೆಯ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ.ಕೆ.ಎಸ್ ಶಿವಕುಮಾರ್, ಮಡಿಕೇರಿ ಉಪ ವಲಯ ಅರಣ್ಯಾಧಿಕಾರಿ ಕನ್ನಡ ಕುಸುಮ, ವಿರಾಜಪೇಟೆಯ ಪಾಲಿಬೆಟ್ಟ ಸಮಯಧಾಯ ಆರೋಗ್ಯ ಕೇಂದ್ರದ, ಆಡಳಿತ ವೈದ್ಯಾಧಿಕಾರಿ ಡಾ.ಪಿ.ಎಸ್. ಲೋಹಿತ್, ಮೈಸೂರಿನ ಉತ್ತರ ವಲಯ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಕೆ. ಎಲ್ .ಲಿಂಗರಾಜು, ರವರಿಗೆ ಕಾಯಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. 2021-2022ನೇ ಸಾಲಿನ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ 90 % ಕ್ಕೂ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಜಿಲ್ಲಾ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಶಶಿಧರ್ ಪ್ರಾಸ್ತವಿಕ ನುಡಿಗಳನ್ನಾಡಿದರು. ಜಿಲ್ಲಾಧ್ಯಕ್ಷ ಎಂ.ಎಲ್.ಸುರೇಶ್, ಮಂಡ್ಯ ಮುಡಾ ಅಧ್ಯಕ್ಷ ಕೆ. ಶ್ರೀನಿವಾಸ್, ಜಿ.ಪಂ. ಮಾಜಿ ಸದಸ್ಯರಾದ ಎಲ್.ದೇವರಾಜು, ಬಿ.ನಾಗೇಂದ್ರಕುಮಾರ್, ಕರ್ನಾಟಕ ಪ್ರದೇಶ ಕುರುಬ ಸಂಘದ ರಾಜ್ಯ ಉಪಾಧ್ಯಕ್ಷ ಪುಟ್ಟಬಸವಯ್ಯ, ರಾಜ್ಯ ಸಂಘಟನಾ ಕಾರ್ಯದರ್ಶಿ ಸಾವಿತ್ರಮ್ಮ, ಸಹ ಕಾರ್ಯದರ್ಶಿ ಎಂ.ಡಿ.ಉಮೇಶ್, ತಾಲೂಕು ಸಂಘದ ಅಧ್ಯಕ್ಷ ಕೆ. ಪುರುಷೋತ್ತಮ್,
ಪುರಸಭೆ ಸದಸ್ಯೆ ಸುಗುಣ ರಮೇಶ್, ಮುಖಂಡರಾದ ಪಿ.ಜೆ.ಕುಮಾರ್, ಎಲ್.ಎಸ್.ಧರ್ಮಪ್ಪ, ಸಂಘದ ಪ್ರಧಾನ ಕಾರ್ಯದರ್ಶಿ ಡಾ.ಕೆ.ಎಸ್.ಚಂದ್ರು, ಕಾರ್ಯಾಧ್ಯಕ್ಷ ನಾಗರಾಜೇಗೌಡ, ಉಪಾಧ್ಯಕ್ಷರಾದ ಚಂದ್ರೇಗೌಡ, ನಿಂಗೇಗೌಡ, ಖಜಾಂಚಿ ರುಕ್ಮಂಗದ, ಪದಾಧಿಕಾರಿಗಳಾದ ಶಕುಂತಲಾ ರವಿಕುಮಾರ್, ಆಶಾ ದೇವರಾಜು, ಶಾಮಣ್ಣ.ಜಿ. ಸಿ, ದೇವರಾಜು.ಡಿ, ಕುಮಾರ್, ಗೋವಿಂದೇಗೌಡ, ನಾಗೇಶ್, ಸಣ್ಣನಿಂಗೆಗೌಡ, , ಈರೇಗೌಡ, ನಂಜೇಗೌಡ, ವಿನೋದ್ ಕುಮಾರ್, ನಿಂಗಪ್ಪ, ರಾಜು, ಸುನಿಲ್, ಯೋಗೇಗೌಡ ಉಪಸ್ಥಿತರಿದ್ದರು.