ಇತಿಹಾಸದ ಅರಿವಿಲ್ಲದ ಸತೀಶ್ ಜಾರಕಿಹೊಳಿ; ಸಚಿವ ಬಿ.ಸಿ ಪಾಟೀಲ್ ಆರೋಪ

ಚಿತ್ರದುರ್ಗ,ನ.9: ಇತಿಹಾಸ ಓದಿಲ್ಲದೆ ಸತೀಶ್ ಜಾರಕಿಹೊಳಿ ಹಿಂದೂ ಪದದ ಅರ್ಥ ಅಶ್ಲೀಲ ಎಂಬ ಹೇಳಿಕೆ ನೀಡಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಲೇವಡಿ ಮಾಡಿದ್ದಾರೆ.ನಗರದ ಪ್ರವಾಸಿ ಮಂದಿರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಂಧೂ ನದಿಯಿಂದ ಹಿಂದೂ ಎಂಬ ಪದ ಬಂದಿದೆ. ಅದಕ್ಕಾಗಿಯೇ ಇತಿಹಾಸವನ್ನು ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.ಸತೀಶ್ ಜಾರಕೀಹೊಳಿ ಅವರು ತಮ್ಮ ಸರ್ಟಿಫಿಕೇಟ್ ಗಳಲ್ಲಿ ಹಿಂದೂ ಅಂತ ಹಾಕಿಕೊಂಡಿದ್ದೇಕೆ ? ಈ ಬಗ್ಗೆ ಉತ್ತರಿಸಬೇಕು. ಸತೀಶ್ ಹೇಳಿಕೆಯನ್ನು ಜನರು ಸಹಿಸುವುದಿಲ್ಲ. ಅವರಿಗೆ ತಕ್ಕ ಉತ್ತರವನ್ನು ಜನರು ನೀಡುತ್ತಾರೆ. ಹಿಂದೂಗಳ ಬಗ್ಗೆ ಅಸಭ್ಯವಾಗಿ, ಹಗುರವಾಗಿ, ಅಶ್ಲೀಲವಾಗಿ ಮಾತಾಡಬಾರದು ಎಚ್ಚರಿಸಿದರು.ವಾಲ್ಮೀಕಿ ರಾಮಾಯಣ ಬರೆದಿದ್ದಾರೆ, ರಾಮ ಯಾರು, ಇವರು ಯಾರು ನಮ್ಮ ದೇಶದವರಲ್ಲವೇ, ಪರ್ಶಿಯನ್ನರಾ? ಕೆಳಮಟ್ಟದಲ್ಲಿ ಮಾತಾಡಬಾರದು, ನಾಲಿಗೆ ಮೇಲೆ ಹಿಡಿತ ಇರಬೇಕು ಎಂದರು.ಬಿಜೆಪಿ ಅಧಿಕಾರಕ್ಕೆ ಬಂದರೆ ಬಡವರ ಬದುಕು ಕಷ್ಟ ಎಂದ ಸಿದ್ಧರಾಮಯ್ಯ ಹೇಳಿಕೆ ಕುರಿತು ಮಾತನಾಡಿದ ಬಿ.ಸಿ.ಪಾಟೀಲ್, ಟಾಂಗ್ಈಗ ಸಿದ್ಧರಾಮಯ್ಯ ಬಡವರಿಗೆ ಊಟ ಹಾಕುತ್ತಿದ್ದಾರೆಯೇ ? ಕೊವಿಡ್ ವೇಳೆ ಪ್ರಧಾನಿ ಮೋದಿಯಿಂದ ಉಚಿತ ಅಕ್ಕಿ ವಿತರಣೆ ಮಾಡಲಾಗಿದೆ.ಕೊವಿಡ್ ವೇಳೆ ಕಾಂಗ್ರೆಸ್ ಅಧಿಕಾರದಲ್ಲಿದ್ದಿದ್ದರೆ ದೇಶ ಮಾರಾಟ ಮಾಡುತ್ತಿದ್ದರು ಎಂದು ಟಾಂಗ್ ನೀಡಿದರು.ಬಡವರು ಸಿದ್ಧರಾಮಯ್ಯ ಮನೆಗೆ ಹೋಗಿ ಊಟ ಕೇಳಿದ್ದಾರೆಯೇ? ಕೊವಿಡ್ ಮತ್ತು ಪ್ರವಾಹ ಸ್ಥಿತಿ ಸಮರ್ಥವಾಗಿ ನಿಭಾಯಿಸಿದ್ದೇವೆ ಇದನ್ನು ಪರಿಶೀಲನೆ ಮಾಡಬಹುದು ಎಂದು ಹೇಳಿದರು‌.ಬಿಜೆಪಿ ಜನ ಸಂಕಲ್ಪ ಯಾತ್ರೆಯಲ್ಲಿ ಜನರಿಲ್ಲ ಎಂದ ಹೇಳಿರುವ ಸಿದ್ಧರಾಮಯ್ಯ ಅವರು, ವೇಷ ಮರೆಸಿಕೊಂಡು ಸಂಕಲ್ಪ ಯಾತ್ರೆಗೆ ಬರಲಿಆಗ ಜನ ಸೇರಿದ್ದು ಅವರಿಗೆ ಗೊತ್ತಾಗುತ್ತದೆ. ಸುಳ್ಳು ಹೇಳಿ ಕಾಂಗ್ರೆಸ್ ಸರ್ಕಾರ ಬಂದೇಬಿಟ್ಟಿತೆಂದು ಬಿಂಬಿಸುತ್ತಿದ್ದಾರೆ.ಸಂಕಲ್ಪ ಯಾತ್ರೆಯಲ್ಲಿ ಜನಸಂದಣಿ ಸೇರುವುದು ಸಹಿಲಾಗದೆ ಟೀಕೆ ಮಾಡುತ್ತಿದ್ದಾರೆ ಎಂದರು.ಸಿದ್ದರಾಮಯ್ಯ ಅವರ ಭಟ್ಟಂಗಿಗಳು ಜನರಿಲ್ಲ ಎಂದು ತಪ್ಪು ಮಾಹಿತಿ ನೀಡುತ್ತಾ, ಕಾರ್ಯಕ್ರಮ ಆರಂಭಕ್ಕೂ ಮೊದಲು ಖಾಲಿ ಕುರ್ಚಿಯ ಫೋಟೋ ಹಾಕುತ್ತಾರೆ. ಸಿದ್ಧರಾಮಯ್ಯ ಮುಸುಕು ಹಾಕಿಕೊಂಡು ಬಂದು ಕೂಡಲಿ ಎಂದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ತರಬಾರದೆಂದು ಜನರೇ ಈಗಾಗಲೇ ಸಂಕಲ್ಪ ಮಾಡಿದ್ದಾರೆ ಎಂದರು.

ReplyReply to allForward