ಇತಿಹಾಸದಿಂದಲೇ ದೇಶದ ಉಳಿವು ಸಾಧ್ಯ

ದಾವಣಗೆರೆ. ಜು.೨೫; ಇತಿಹಾಸದಿಂದಲೇ ನಮ್ಮ ದೇಶ ಉಳಿದಿದೆ ಎಂದು ಶಾಸಕ ಎಸ್.ಎ ರವೀಂದ್ರನಾಥ್ ಹೇಳಿದರು.ನಗರದ ಕುವೆಂಪು ಕನ್ನಡಭವನದಲ್ಲಿ ಗೌಡ್ರ ವಂಶಸ್ಥರು ಬಸವನಕೋಟೆ ಮತ್ತುಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಂಯುಕ್ತಾಶ್ರಯದಲ್ಲಿ ಲೇಖಕ ಬಿ.ಎಸ್ ಸಿದ್ದೇಶ್ ಅವರ ಶ್ರೀ ಬೊಮ್ಮಲಿಂಗೇಶ್ವರ ಭಕ್ತರ ಹಿನ್ನೆಲೆ ಕುರಿತ ಸಂಶೋಧನಾ ಲನಡೆದಿದ್ದವು. ಬಿಡುಗಡೆ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ನಮ್ಮ ಇತಿಹಾಸದಲ್ಲೇ ದೇಶ ಉಳಿದಿದೆ.ನಮ್ಮ ಸಂಸ್ಕೃತಿ, ಸಂಸ್ಕಾರ ಇತಿಹಾಸದಲ್ಲಿ ಇದೆ ಅದಕ್ಕಾಗಿ ಇತಿಹಾಸ ತಿಳಿಯುವುದು ಮುಖ್ಯ ಎಂದರು. ನಮ್ಮ ಸಾಹಿತ್ಯವನ್ನು ಉಳಿಸಿ ಬೆಳೆಸಬೇಕು.
ದೇವರು, ಭಕ್ತಿ ಭಾವನೆಗಳ ಬಗ್ಗೆ ನಮ್ಮ ಮುಂದಿನ ಪೀಳಿಗೆಗೆ ಅರಿವು ಮೂಡಿಸುವ ಅವಶ್ಯಕತೆ ಇದೆ ಎಂದು ಕರೆ ನೀಡಿದರು.
ಲೇಖಕ ಬಿ.ಎಸ್ ಸಿದ್ದೇಶ್ ಶ್ರೀ ಬೊಮ್ಮಲಿಂಗೇಶ್ವರ ಭಕ್ತರ ಹಿನ್ನೆಲೆ  ಕೃತಿ ಕುರಿತು ಮಾತನಾಡಿ ಹವ್ಯಾಸಕ್ಕಾಗಿ ಅಥವಾ ಕವಿಯಾಗಲು ಪುಸ್ತಕ ಬರೆದಿಲ್ಲ.ಮುಂದಿನ ಪೀಳಿಗೆಗೆ, ಮುಂದಿನ ಯುವಕರಿಗೆ, ಎಲ್ಲಾ ಸಮಾಜ ಬಾಂಧವರಿಗೆ ಆದರ್ಶವಾಗಿ ದೇಶ ಕಟ್ಟುವ ಭಕ್ತಿ ಮಾರ್ಗ ತಿಳಿಸುವ ಹಾಗೂ ನಾವು ಯಾರು ಎಂಬುದನ್ನು ತಿಳಿಸುವ ಉದ್ದೇಶದಿಂದ ಪುಸ್ತಕ ಬರೆದಿದ್ದೇನೆ ಎಂದರು.ಇಲ್ಲಿ ವಿಗ್ರಹವಿಲ್ಲ ಕುದುರೆಯ ಆರಾಧನೆ ಇದೆ.
ಬೊಮ್ಮಲಿಂಗೇಶ್ವರ ಎಂದರೆ ಬ್ರಹ್ಮ ವಿಷ್ಣು ಮಹೇಶ್ವರ ಎಂದು.ಬಸವಣ್ಣ ವಿಗ್ರಹ ಆರಾಧನೆಯನ್ನು ವಿರೋಧಿಸಿದ್ದರು ಅವರ ಸಂಕೇತ ಕುದುರೆಯಾಗಿತ್ತು. ಕುದುರೆಯ ಸಂಕೇತ ವೇಗ,ಲಕ್ಷ್ಮೀ,ಚೇತನ ಎಂಬ ಅರ್ಥ ನಮ್ಮದೇಶದಲ್ಲಿ ಇರುವಂತೆ ವಿದೇಶಗಳಲ್ಲಿಯೂ ಕುದುರೆಗೆ  ಅನೇಕ ಅರ್ಥ ಹಾಗೂ ಸಂಕೇತಗಳಿವೆ ತಿ.ರಾಜರ ಕಾಲದಲ್ಲಿ ಕುದುರೆಯ ಮೂಲಕ ವ್ಯಾಪಾರ ಚಟುವಟಿಕೆ ನಡೆದಿದ್ದವು ಎಂದು ಮಾಹಿತಿ ನೀಡಿದರು.
ಕಸಾಪ ಅಧ್ಯಕ್ಷರಾದ ಬಿ.ವಾಮದೇವಪ್ಪ ಅಧ್ಯಕ್ಷತೆ ವಹಿಸಿದ್ದರು.ವೇದಿಕೆಯಲ್ಲಿ ನಿವೃತ್ತ ಪ್ರಾಧ್ಯಾಪಕ ಪ್ರೊ.ಸಿ.ಹೆಚ್ ಮುರಿಗೇಂದ್ರಪ್ಪ,ತರಳಬಾಳು ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಡಾ.ಹೆಚ್.ವಿ ವಾಮದೇವಪ್ಪ,
ಎ.ಆರ್ ಉಜ್ಜಿನಪ್ಪ,ಮಂಜುನಾಥ್ ಕುರ್ಕಿ ಉಪಸ್ಥಿತರಿದ್ದರು. ಪುಸ್ತಕ ಕುರಿತು ಕನ್ನಡ ಪ್ರಾಧ್ಯಾಪಕ ಬಸವರಾಜ್ ಹನುಮಲಿ ಮಾತನಾಡಿದರು.ಅನ್ನಪೂರ್ಣ ಮಧು ಕಾರ್ಯಕ್ರಮ ನಿರೂಪಿಸಿದರು.