ಇತಿಹಾಸಕಾರರು ಭಾರತ ಇತಿಹಾಸದ ಬಗ್ಗೆ ನಿರ್ಲಕ್ಷ್ಯ

ಕೋಲಾರ,ಆ,೧೩-ಇತಿಹಾಸಕಾರರು ಭಾರತೀಯ ಪುರಾತನ ಚರಿತ್ರೆಯ ಬಗ್ಗೆ ನಿರ್ಲಕ್ಷ ವಹಿಸಲಾಗಿದ್ದು, ಇಂತಹ ಸಂದರ್ಭಗಳಲ್ಲಿ ಸತೀಶ್‌ರ ಕಾರ್ಯ ಪ್ರಶಂಸನೀಯವಾದದ್ದು ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಕೆ.ಶ್ರೀನಿವಾಸಗೌಡ ತಿಳಿಸಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಕಲಾ ವಿಭಾಗಗಳ ವೇದಿಕೆ ಹಾಗೂ ಐಕ್ಯೂಎಸಿ ಸಹಯೋಗದಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಅಂಚೆ ಚೀಟಿ ಪ್ರದರ್ಶನ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸತೀಶ್ ಇತಿಹಾಸದ ಇಚ್ಛಾಶಕ್ತಿಯಿಂದ ಸಾವಿರಾರು ಅಂಚೆಚೀಟಿ ಹಾಗೂ ನಾಣ್ಯಗಳನ್ನು ಸಂಗ್ರಹಿಸಿ ಪ್ರದರ್ಶಿಸಿದ್ದಾರೆ, ಇದರಿಂದ ಜ್ಞಾನ ವೃದ್ಧಿಯಾಗುತ್ತದೆ, ವಿದ್ಯಾರ್ಥಿಗಳು ವೀಕ್ಷಣೆ ಮಾಡಿ ಜ್ಞಾನ ಹೆಚ್ಚಿಸಿಕೊಳ್ಳಿ ಎಂದು ಮನವಿ ಮಾಡಿದರು.
ಅಂಚೆ ಚೀಟಿ ಸಂಗ್ರಹ ರೂವಾರಿ ಎಚ್.ಕೆ.ಸತೀಶ್ ಮಾತನಾಡಿ ಗಾಂಧೀಜಿ ಕುರಿತ ೩೦೦ ವಿಶೇಷ ಅಂಚೆ ಲಕೋಟೆ ಸಂಗ್ರಹ ಮಾಡಿದ್ದೇನೆ. ಸ್ವಾತಂತ್ರ್ಯ ಪೂರ್ವದಲ್ಲಿರುವ ೧೦೦ಕ್ಕೂ ಹೆಚ್ಚು ಕನ್ನಡ ಪುಸ್ತಕ ಸಂಗ್ರಹವಿದೆ ಜೊತೆಗೆ ೧೭೯೦ ನೇ ವರ್ಷದ ಮುಳಬಾಗಿಲಿನ ಪೋಟೋ ಸಂಗ್ರಹಿಸಿದ್ದೇನೆ ಸ್ವಾತಂತ್ರ್ಯ ಹೋರಾಟಗಾರರ ಆತ್ಮಗಳು ಆ ಅಂಚೆ ಚೀಟಿಗಳಲ್ಲಿ ಇವೆ ಎಂದರು.
ಸುಮಾರು ೩ ಸಾವಿರಕ್ಕೂ ಹೆಚ್ಚು ಅಂಚೆ ಚೀಟಿ ಹಾಗೂ ನಾಣ್ಯಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ೧೮೮೯ರಿಂದ ೧೯೬೪ವರೆಗೆ ಚಾಲ್ತಿಯಲ್ಲಿದ್ದ ನಾಣ್ಯಗಳು ಇದ್ದವು.
ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡವರ ಭಾವಚಿತ್ರ ಇರುವ ಅಂಚೆ ಚೀಟಿಗಳು ಖಾದಿ ಅಂಚೆ ಲಕೋಟೆ, ರೇಷ್ಮೆ ಅಂಚೆ ಲಕೋಟೆ, ಬಿದರಿನ ಲಕೋಟೆಗಳನ್ನು ಕಾಣಬಹುದಾಗಿದೆ. ನೆಲ ಈಜಲ ವೆಂಕಟಚಲಾಪತಿ ತಂಡದಿಂದ ಗಾಯನ ನಡೆಯಿತು. ಕಾಲೇಜಿನ ವಿವಿಧ ವಿಭಾಗಗಳ ಉಪನ್ಯಾಸಕರಾದ ಡಾ ಅರಿವು ಶಿವಪ್ಪ ಅರಿವು, ನಾಗನಾಳ ಮುನಿಯಪ್ಪ, ತ್ಯಾಗರಾಜ್, ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ.ಮುರಳೀಧರ್, ಇಂದ್ರಮ್ಮ, ಚೆನ್ನನರಸಿಂಹಯ್ಯ, ಡಾ.ಶಂಕರಪ್ಪ, ಡಾ.ಪ್ರಸನ್ನ ಕುಮಾರಿ, ಮಹೇಶ್ ಕಸಾಪ ಮಾಜಿ ಅಧ್ಯಕ್ಷ ಜೆ.ಜಿ ನಾಗರಾಜ್ ಇದ್ದರು.