ಇತಿಹಾಸಕಾರರನ್ನು ಸ್ಮರಿಸಲು ಪ್ರತಿಭಾ ಕಾರಂಜಿಯ ಅಗತ್ಯ: ರಾಮಣ್ಣ ಚೌಡ್ಕಿ


ಸಂಜೆವಾಣಿ ವಾರ್ತೆ
ಕೊಪ್ಪಳ, ಸೆ.16: ಪ್ರಸ್ತುತ ದಿನಮಾನಗಳಲ್ಲಿ ಪ್ರಾಚೀನ ಕಾಲದಲ್ಲಿ ಅನೇಕ ಮಹಾನ್ ನಾಯಕರನ್ನು ಸ್ಮರಿಸಲು ಪ್ರತಿಭಾ ಕಾರಂಜಿಯಂತ ಕಾರ್ಯಕ್ರಮಗಳ ಅಗತ್ಯವಿದೆ ಎಂದು ಮಾಜಿ ಜಿಲ್ಲಾ ಪಂಚಾಯತಿಯ ಸದಸ್ಯರಾದ ರಾಮಣ್ಣ ಚಾಡ್ಕಿ ಹೇಳಿದರು.
ಅವರು ತಾಲೂಕಿನ ಲೇಬಗೇರಿ ಗ್ರಾಮದ ಸ.ಹಿ.ಪ್ರಾ.ಶಾಲಾ ಆವರಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತೆಯ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಇರಕಲ್ಲಗಡ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯನ್ನು ಉದ್ಘಾಟಿಸಿ ಮಾತನಾಡಿ,ಪ್ರತಿಭಾ ಕಾರಂಜಿಯು ಮಕ್ಕಳಲ್ಲಿ ಇರುವ ಸುಪ್ತ ಪ್ರತಿಭೆಯನ್ನು ಗುರುತಿಸುವುದರ ಜೊತೆಯಲ್ಲಿ ಅದನ್ನು ಹೊರತರಲು ಉತ್ತಮ ವೇದಿಕೆಯಾಗಿದೆ.ವಿಶೇಷವಾಗಿ ಇಂದಿನ ಕಾಲದ ಅನೇಕ ಮಾಹನೀಯರನ್ನು ಹಾಗೂ ಇತಿಹಾಸಕಾರರನ್ನು ಛೇದ್ಮವೇಷ ಎಂಬ ಸ್ಪರ್ಧೇಯ ಮೂಲಕ ಪ್ರದರ್ಶನ ಮಾಡುವುದರಿಂದ ಅಂತಹ ಮಹಾನ್ ನಾಯಕರನ್ನು ಸ್ಮರಿಸಲು ಪ್ರತಿಭಾ ಕಾರಂಜಿಯಂತ ಅನೇಕ ಕಾರ್ಯಕ್ರಮಗಳ  ಅಗತ್ಯವಿದೆ.ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಬೇಕು.ಸತತ ಪರಿಶ್ರಮದಿಂದ ಮಾತ್ರ ಯಶಸ್ವಿ ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
 ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಮಾತನಾಡುತ್ತಾ,ಪ್ರತಿಭಾ ಕಾರಂಜಿ ಎಂಬುದು ಕಲಾ ಪ್ರತಿಭೆಗಳ ಚಿಣ್ಣರ ಹಬ್ಬ,ಕೇವಲ ಶಿಕ್ಷಕರಿಗೆ,ಪೋಷಕರಿಗೆ ಮಾತ್ರವಲ್ಲದೆ ಸಾರ್ವಜನಿಕರು ಖುಷಿ ಪಡುವ ಹಬ್ಬ.ಗ್ರಾಮೀಣ ಸೊಗಡಿನ ಸಾಂಸ್ಕೃತಿಕ ವೈಭವವನ್ನು ಇನ್ನಷ್ಟು ಗಟ್ಟಿಗೊಳಿಸುವ ಪ್ರಯತ್ನ ಮಾಡುತ್ತದೆ.ಮನೋರಂಜನಾತ್ಮಕ ಕಾರ್ಯಕ್ರಮದಿಂದ ಶೈಕ್ಷಣಿಕ ಗುಣಮಟ್ಟದ ಫಲಿತಾಂಶಕ್ಕೂ ಸಹಕಾರಿಯಾಗಲಿದೆ.ತಿರ್ಪುಗಾರರು ಉತ್ತಮ ಪ್ರತಿಭೆಗಳನ್ನು ಆಯ್ಕೆ ಮಾಡುವ ಮೂಲಕ ಜಿಲ್ಲೆಯ ಕಿರ್ತಿ ರಾಜ್ಯ ಮಟ್ಟದಲ್ಲಿ ಹೆಸರು ಮಾಡುವಂತಾಗಲಿ ಎಂದು ಹೇಳಿದರು.
ಕಾರ್ಯಕ್ರಮದ ಕುರಿತು ಶಾಲೆಯ ಮುಖ್ಯೋಪಾಧ್ಯಾಯರಾದ ಸಂಗಪ್ಪ ಕೊಪ್ಪದ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಶಾಲಾ  ಎಸ್.ಡಿ.ಎಂ.ಸಿ.ಯ ಅಧ್ಯಕ್ಷರಾದ ನರಸಿಂಹ ಆಚಾರ್ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರಾದ ದೇವಮ್ಮ ಕುರಿ,ಉಪಾಧ್ಯಕ್ಷರಾದ ಪಾರಮ್ಮ ವಡ್ಡ್ರರ,ಸದಸ್ಯರಾದ ಮಲ್ಲಪ್ಪ ತೂಭಾಕಿ,ನಾಗಪ್ಪ ದೊಡ್ಡಮನಿ,ಬಸವರಾಜ ಯತ್ನಟ್ಟಿ,ಫಕೀರಗೌಡ ಗೌಡರ,ಭರಮವ್ವ ತಳವಾರ,ಶಂಕ್ರವ್ವ ಗುಳೇದ,ಶಿಕ್ಷಣ ಸಂಯೋಕರಾದ ಲಸ್ಗರನಾಯ್ಕ,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ತಾಲೂಕ ಅಧ್ಯಕ್ಷರಾದ ಪ್ರಾಣೇಶ ಪೂಜಾರ, ನಿರ್ದೇಶಕ ಸುರೇಶ ತೋಟದ,ಪತ್ತಿನ ಸಂಘದ ನಿರ್ದೇಶಕರಾದ ಮಲ್ಲಪ್ಪ ಗುಡದನ್ನವರ,ದ್ಯಾಮಣ್ಣ ಮುರಡಿ ಶಿಕ್ಷಕರಾದ ಬೀಮಪ್ಪ ಆರೇರ,ಮಂಜುನಾಥ ಕೊಪ್ಪಳ ಮುಂತಾದವರು ಹಾಜರಿದ್ದರು.

One attachment • Scanned by Gmail