ಇಡ್ಲಿ ಸಾಂಬಾರ್

ಬೇಕಾಗುವ ವಿಧಾನ
*ಇಡ್ಲಿ ಸಾಂಬಾರ್ ಪುಡಿ – ೫ ಚಮಚ
*ತೊಗರಿ ಬೇಳೆ – ೧೦೦ ಗ್ರಾಂ
*ಅರಿಶಿಣ – ೧/೨ ಚಮಚ
*ತುಪ್ಪ – ೩ ಚಮಚ
*ಸಾಸಿವೆ – ೧ ಚಮಚ
*ಜೀರಿಗೆ – ೧ ಚಮಚ
*ಕರಿಬೇವು – ೧೦ ಎಲೆ
*ಒಣಮೆನಸಿನಕಾಯಿ – ೨
*ಸಾಂಬಾರ್ ಈರುಳ್ಳಿ – ೧೦೦ ಗ್ರಾಂ
*ಟೊಮೆಟೊ – ೧
*ಕೊತ್ತಂಬರಿ ಸೊಪ್ಪು – ೩ ಚಮಚ
*ಬೆಲ್ಲ – ೧ ಚಮಚ
*ಹುಣಸೇ ಹಣ್ಣಿನ ರಸ – ೩ ಚಮಚ
*ತೆಂಗಿನ ತುರಿ –
*ಉಪ್ಪು-
*ಎಣ್ಣೆ-

ಮಾಡುವ ವಿಧಾನ :

ಕುಕ್ಕರ್‌ಗೆ ೧/೨ ಲೀಟರ್ ನೀರು, ತೊಗರಿಬೇಳೆ , ಅರಿಶಿಣ ಹಾಕಿ ೩ ವಿಷಲ್ ಕೂಗಿಸಿಕೊಳ್ಳಿ. ಬಾಣಲಿಗೆ ತುಪ್ಪ ಹಾಕಿ ಕಾಯಿಸಿ. ಇದಕ್ಕೆ ಸಾಸಿವೆ, ಜೀರಿಗೆ, ಕರಿಬೇವು, ಒಣಮೆಣಸಿನಕಾಯಿ, ಸಾಂಬಾರ್ ಈರುಳ್ಳಿ ಹಾಕಿ ಹುರಿದು ಈರುಳ್ಳಿ ಬೆಂದ ಮೇಲೆ ದಪ್ಪಗೆ ಹೆಚ್ಚಿದ ಟೊಮೆಟೊ ಹಾಕಿ ಚೆನ್ನಾಗಿ ಹುರಿದುಕೊಂಡು, ಬೇಯಿಸಿಟ್ಟುಕೊಂಡ ತೊಗರಿಬೇಳೆ ಹಾಕಿ. ನಂತರ ೫ ಚಮಚ ಸಾಂಬಾರ್ ಪುಡಿ ತೆಂಗಿನ ತುರಿ ರುಬ್ಬಿ ಬೇಳೆಗೆ ಹಾಕಿ ಇದಕ್ಕೆ ಬೆಲ್ಲ, ಹುಣಸೇ ರಸ, ಸ್ವಲ್ಪ ಕೊತ್ತಂಬರಿಸೊಪ್ಪು ಹಾಕಿದರೆ ಇಡ್ಲಿ ಸಾಂಬಾರ್ ರೆಡಿ.