ಇಡ್ಲಿ, ವಡೆ ತಿಂದು ರಾಖಿ ರಗಳೆ

ಮುಂಬೈ,ಏ.೧೮-ಹಾದಿ ರಂಪ ಬೀದಿ ರಂಪ ಮಾಡುವುದರಲ್ಲಿ ಬಾಲಿವುಡ್ ನಟಿ ರಾಖಿ ಸಾವಂತ್ ಯಾವತ್ತಿಗೂ ಮುಂದು. ಸಣ್ಣ ಸಣ್ಣ ವಿಚಾರಗಳನ್ನೂ ಬೀದಿಗೆ ತಂದು ಮಾತನಾಡುತ್ತಾರೆ,ಕಣ್ಣೀರು ಹಾಕುತ್ತಾರೆ, ಜಗಳ ಮಾಡುತ್ತಾರೆ. ಕ್ಯಾಮೆರಾಗಳ ಎದುರಿಗೆ ಬಂದರೆ ಸಾಕು ಏನಾದರೂ ಒಂದು ರಂಪ ಇದ್ದೇ ಇರುತ್ತದೆ. ಕೇವಲ ಬೀದಿಯಲ್ಲಿ ಮಾತ್ರವಲ್ಲ, ಏರ್ ಪೋರ್ಟ್ ನಲ್ಲೂ ರಾಖಿ ಜಗಳ ಮಾಡಿಕೊಂಡಿದ್ದಾರೆ.ಸದ್ಯ ರಂಜಾನ್ ಉಪವಾಸದಲ್ಲಿರುವ ರಾಖಿ, ಸಂಜೆ ಉಪವಾಸವನ್ನು ಪೂರ್ಣಗೊಳಿಸಲು ಏರ್ ಪೋರ್ಟ್ ನಲ್ಲಿ ಒಂದು ಇಡ್ಲಿ ಹಾಗೂ ಒಂದು ವಡೆಯನ್ನು ಖರೀದಿಸಿದ್ದಾರೆ. ಅದಕ್ಕೆ ಆ ಹೋಟೆಲ್ ನವರು ೬೦೦ ರೂಪಾಯಿಗಳ ಬಿಲ್ ನೀಡಿದ್ದಾರೆ. ಒಂದು ವಡೆ, ಒಂದು ಇಡ್ಲಿಗೆ ಇಷ್ಟೊಂದು ಬೆಲೆನಾ ಎಂದು ಸಣ್ಣ ಮಟ್ಟದಲ್ಲಿ ಗಲಾಟೆ ಮಾಡಿದ್ದಾರೆ. ಗಲಾಟೆ ನಂತರ ತಿಂಡಿ ಸವಿದು ಬಿಲ್ ಕೂಡ ಕೊಟ್ಟಿದ್ದಾರೆ. ಆ ಬಿಲ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.ಮೈಸೂರು ಹುಡುಗ ಆದಿಲ್ ನನ್ನು ಮದುವೆಯಾದ ನಂತರ ರಾಖಿ ಮುಸ್ಲಿಂ ಧರ್ಮಕ್ಕೆ ಮತಾಂತರ ಆಗಿದ್ದಾರಂತೆ. ಈ ರಣಕ್ಕಾಗಿಯೇ ಅವರು ರಂಜಾನ್ ಉಪವಾಸ ಮಾಡುತ್ತಿದ್ದಾರೆ. ಪತಿ ಆದಿಲ್ ಆದಷ್ಟು ಬೇಗ ಜೈಲಿನಿಂದ ಬರಲಿ ಎಂದೂ ಅವರು ಪ್ರಾರ್ಥಿಸುತ್ತಿದ್ದಾರೆ. ಈ ಉಪವಾಸ ಮಾಡುತ್ತಿರುವುದು ಆದಿಲ್‌ಗೆ ಬೇಗ ಜಾಮೀನು ಸಿಗಲಿ ಎನ್ನುವ ಕಾರಣಕ್ಕೆ ಎಂದು ಅವರು ಹೇಳಿದ್ದಾರೆ.