ಇಡ್ಲಿ ಜೊತೆಗೆ ರುಚಿಯಾದ ಚಟ್ನಿ ಪುಡಿ !

ಬೇಕಾಗುವ ಸಾಮಾಗ್ರಿಗಳು
ಅರ್ಧ ಕಪ್ ಕಡಲೆ ಬೇಳೆ
ಅರ್ಧ ಕಪ್‌ಉದ್ದಿನ ಬೇಳೆ
ಅರ್ಧ ಟೀ ಸ್ಪೂನ್ ಕಾಳು ಮೆಣಸು
ಒಂದು ಎಸಳು ಕರಿಬೇವು
೨ ಟೇಬಲ್ ಸ್ಪೂನ್ ಬಿಳಿ ಎಳ್ಳು
೩ ಟೇಬಲ್ ಸ್ಪೂನ್ ತೆಂಗಿನತುರಿ
೮ ಕೆಂಪು ಒಣ ಮೆಣಸಿನಕಾಯಿ
೧ ಟೇಬಲ್ ಸ್ಪೂನ್ ತುಪ್ಪ
ಮಾಡುವ ವಿಧಾನ
ಒಂದು ಪಾತ್ರೆಯನ್ನು ಸಣ್ಣ ಉರಿಯಲ್ಲಿ ಬಿಸಿ ಮಾಡಿ ಹಾಗೂ ಅರ್ಧ ಕಪ್ ಕಡಲೆ ಬೇಳೆಯನ್ನು ಹಾಕಿ. ಎಣ್ಣೆ ಅಥವ ತುಪ್ಪ ಹಾಕದೆ ಹುರಿಯಿರಿ. ಬೇಳೆಗಳನ್ನು ಸಣ್ಣ ಉರಿಯಲ್ಲಿ ಹುರಿಯಿರಿ.
ನಂತರ, ಅರ್ಧ ಕಪ್ ಉದ್ದಿನ ಬೇಳೆಯನ್ನು ಅದೇ ಪಾತ್ರೆಗೆ ಹಾಕಿಕೊಳ್ಳಿ. ಅರ್ಧ ಚಮಚ ಕಾಳುಮೆಣಸು, ಕರಿಬೇವು, ೨ ದೊಡ್ಡ ಚಮಚ ಬಿಳಿ ಎಳ್ಳು ಹಾಗೂ ೩ ದೊಡ್ಡ ಚಮಚ ತುರಿದ ತೆಂಗಿನಕಾಯಿಯನ್ನು ಹಾಕಿ. ಎಲ್ಲವನ್ನು ಸಣ್ಣ ಉರಿಯಲ್ಲಿ ಕಂದು ಬಣ್ಣಕ್ಕೆ ತಿರುಗುವವರೆಗೆ ಹುರಿದು ಬೇರೊಂದು ಪಾತ್ರೆಗೆ ತೆಗೆದಿಟ್ಟುಕೊಳ್ಳಿ. ನಂತರ ೭ ರಿಂದ ೮ ಕೆಂಪು ಒಣ ಮೆಣಸಿನಕಾಯಿಯನ್ನು ಹಾಕಿ ಹುರಿಯಿರಿ. ಎಲ್ಲ ಸಾಮಾಗ್ರಿಗಳನ್ನು ತಣಿಯಲು ಬಿಡಿ ಹಾಗೂ ಒಂದು ರುಬ್ಬುವ ಜಾರಿಗೆ ಹಾಕಿ. ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ. ರುಬ್ಬಿ ನುಣ್ಣಗೆ ಪುಡಿ ಮಾಡಿದರೆ ಇಡ್ಲಿಗೆ ಚಟ್ನಿ ಪುಡಿ ರೆಡಿ. ಇದನ್ನು ಇಡ್ಲಿಯೊಂದಿಗೆ ಸ್ವಲ್ಪ ತುಪ್ಪದ ಜೊತೆಗೆ ಕಲಸಿ ಬಡಿಸಿ. ಅಥವಾ ಒಂದು ದೊಡ್ದ ಚಮಚ ತುಪ್ಪವನ್ನು ಒಂದು ಪಾತ್ರೆಯಲ್ಲಿ ಬಿಸಿ ಮಾಡಿ ಹಾಗೂ ೩ ಚಮಚ ಚಟ್ನಿ ಪುಡಿ ಹಾಕಿ ಒಂದು ನಿಮಿಷ ಹುರಿಯಿರಿ. ಇಡ್ಲಿಯನ್ನು ಚಟ್ನಿ ಪುಡಿಯಿಂದ ಕೋಟ್ ಮಾಡಿ ಬಡಿಸಿ.