ಇಡೀ ಬೃಹ್ಮಾಂಡದ ಒಡೆಯ ಒಬ್ಬನೇ:ಶಾಸಕ ನಾಡಗೌಡ

ತಾಳಿಕೋಟೆ:ಅ.18: ಮಹ್ಮದ ಪೈಗಂಬರ ಅವರು ಶಾಂತಿದೂತರು ಅವರು ಧರ್ಮವನ್ನು ಜನರ ಕಲ್ಯಾಣ ಕೋಸ್ಕರ ಸಾರಿದ್ದಾರೆ ಅವರು ದೇವ ದೂತರಾಗಿ ಧರ್ಮ ಒಂದೇ ಅದುವೇ ಮಾನವ ಧರ್ಮವಾಗಿದ್ದು ಒಬ್ಬರನ್ನೋಬ್ಬರು ಪ್ರೀತಿಸುವದೇ ಧರ್ಮವಾಗಿದೆ ಎಂದು ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರು ನುಡಿದರು.
ಮಂಗಳವಾರರಂದು ಜಮಾಅತೆ ಇಸ್ಲಾಮಿ ಹಿಂದ್ ತಾಳಿಕೋಟೆ ಘಟಕದ ವತಿಯಿಂದ ಪ್ರವಾದಿ ಮಹ್ಮದ ಅವರ ಜೀವನ ಕುರಿತು ಸರ್ವಧರ್ಮದ ಬಂದುಗಳಿಗಾಗಿ ಶ್ರೀ ಮಹಾರಾಣಾ ಪ್ರತಾಪಸಿಂಹ್ ಸರ್ಕಲ್‍ನಲ್ಲಿ ಏರ್ಪಡಿಸಲಾದ ಬೃಹತ್ ಸಾರ್ವಜನಿಕ ಸಮಾರಂಭವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಮೇಲು ಕೀಳು ಅನಾಚಾರದಂತಹ ಸಂದೇಶ ಮೂಡನಂಬಿಕೆ ಇಂತಹ ವಿಷಯಗಳ ಬಗ್ಗೆ ಧರ್ಮದ ಲೇಪನವನ್ನು ಮಾಡಿಕೊಡತಕ್ಕದಲ್ಲಾ ಮಹ್ಮದ ಪೈಗಂಬರರು ನಿಜ ಅರ್ಥವನ್ನು ಗುರುತಿಸುವಂತಹ ಕಾರ್ಯ ಮಾಡಿದರೆಂದರು. ಮಹ್ಮದ ಪೈಗಂಬರವರಂತೆ ಬಸವಣ್ಣನವರೂ ಕೂಡಾ ಅದೇ ಕಾರ್ಯ ಮಾಡಿದ್ದಾರೆ ಭೂಮಿ ಬೃಹ್ಮಾಂಡದ ಒಡೆಯ ಒಬ್ಬನೇ ಎಂದು ತಿಳಿಸಿದ್ದಾರೆಂದರು. ಭಾರತ ದೇಶದಲ್ಲಿ ಧರ್ಮದ ಬಗ್ಗೆ ತಿಳುವಳಿಕೆಗಾಗಿ ಗಾಂಧಿಜಿ ಅವರು ಪುರಾಣ ಪುಣ್ಯಕಥೆಗಳನ್ನು ನೆರವೇರಿಸುವದರೊಂದಿಗೆ ಏಚ್ಚರಿಸುತ್ತಿದ್ದರ ಕುರಿತು ಹೇಳಿದ ಶಾಸಕ ನಾಡಗೌಡ ಅವರು ಯಾವನು ಒಳ್ಳೆಯದನ್ನು ಅನುಕರಣೆ ಮಾಡುತ್ತಾನೋ ಅವನು ಬೇರೆಯವರಿಗೂ ಒಳ್ಳೆಯದನ್ನೇ ಮಾಡುತ್ತಾನೆಂದರು. ಇಂತಹ ಸಂದೇಶವನ್ನು ಸಾವಿರಾರು ವರ್ಷಗಳ ಹಿಂದೆಯೇ ಮಹ್ಮದ ಪೈಗಂಬರರು ನೀಡಿದ್ದಾರೆ ಭೌಧ ಧರ್ಮವಾಗಿರಬಹುದು, ಲಿಂಗಾಯತ ಧರ್ಮವಾಗಿರಬಹುದು, ಜೈನ ಧರ್ಮವಾಗಿರಬಹುದು, ಇವರೆಲ್ಲರಿಗೂ ಇಂದಿನಂತೆ ಯಾವ ಹೆಚ್ಚಿನ ಸೌಲಭ್ಯಗಳಿದಿದ್ದಿಲ್ಲಾ ಆದರೆ ಜಗತ್ತಿನ ಮೂಲೆ ಮೂಲೆಗಳಲ್ಲಿ ಅವರ ಸಂದೇಶಗಳು ಸಿಗುತ್ತಲಿವೆ ಕಾರಣ ಅವರ ಮೇಲೆ ಜನತೆ ನಂಬಿಕೆ ಇಟ್ಟಿದ್ದಾರೆಂದರು. ಸಮಾನತೆ ಎಂಬುದು ಜೀವನದಲ್ಲಿ ಅಳವಡಿಸಿಕೊಳ್ಳುವಂತಹ ಕಾರ್ಯ ಅವರು ಮಾಡಿ ತೋರಿಸಿದ್ದಾರೆ ಮಾನವರಾದ ನಮ್ಮಲ್ಲಿ ಸಮಾನತೆ ಎಂಬುದು ಬಹು ಮುಖ್ಯವಾಗಿದೆ ಪ್ರಾರ್ಥನೆ ಮಾಡುವ ಸಮಯದಲ್ಲಿ ಎಲ್ಲರೂ ಒಂದೇ ಭಾವನೆ ತಂದವರು ಮಹ್ಮದ ಪೈಗಂಬರ ಅವರು ಆಗಿದ್ದಾರೆಂದು ಹೇಳಿದ ಶಾಸಕ ನಾಡಗೌಡ ಅವರು ಇತ್ತಿಚಿಗೆ ನಡೆದ ರಶ್ಯಾ-ಉಕ್ರೇನ್ ಯುದ್ದ ಕುರಿತು ಆ ಯುದ್ದದಲ್ಲಿ ಲಕ್ಷಾಂತರ ಜನರು ಜೀವವನ್ನು ತೆತ್ತಿದ್ದಾರೆ ಇವೇಲ್ಲವನ್ನು ನೋಡಿದಾಗ ಕಣ್ಣಲ್ಲಿ ನೀರು ಬರುತ್ತದೆ ಎಂದರು. ಜಪಾನಕ್ಕಿಂತ ಮುಂದೆ ಇರತಕ್ಕಂತಹ ಇಸ್ರೇಲ್ ದೇಶ ಇವತ್ತು ನರಕದ ಸ್ಥಿತಿಯಲ್ಲಿ ಕಾಣುತ್ತಿದೆ ಕಾರಣ ಭಗವಂತ ನೀಡಿದ ಸಂದೇಶ ಭೂಮಿಯ ಮೇಲೆ ಸ್ವರ್ಗ, ನರಕ, ಇಲ್ಲೇ ಇವೆ ಎಂಬಂತಾಗಿದೆ ನೆಮ್ಮದಿಯ ಜೀವನಕ್ಕಾಗಿ ಸ್ವರ್ಗ ಅತ್ಯಾಚಾರ, ಅನಾಚಾರವೇ ನರಕವೆಂಬುದನ್ನು ಮಹಾತ್ಮರು ಸಾರಿದ್ದಾರೆಂದು ಸಿಕಂದರ ರಾಜನ ಕಥೆಯೊಂದನ್ನು ಹೇಳಿ ಬರುವಾಗ ಬರೆಗೈಯಲ್ಲಿ ಹೋಗುವಾಗಲೂ ಬರೆಗೈಯಲ್ಲೇ ಹೋಗುವಂತಹ ಸ್ಥಿತಿ ಎಲ್ಲರಿಗೂ ಇದೆ ಇದು ತಪ್ಪಲು ಸಾಧ್ಯವಿಲ್ಲಾ ಇದನ್ನು ಅರ್ಥೈಸಿಕೊಂಡು ನಡೆಯಬೇಕೆಂದರು.
ಇನ್ನೋರ್ವ ಖ್ಯಾತ ಪ್ರವಚನಕಾರರಾದ ಇಲಕಲ್ಲದ ಪ್ರೋ.ಲಾಲಹುಸೇನ್ ಕಂದಗಲ್ಲ ಅವರು ಮಾತನಾಡಿ ಮಹ್ಮದ ಪೈಗಂಬರ ಅವರ ಕುರಿತು ಅನೇಕ ಸಾಹಿತಿಗಳು ಪುಸ್ತಕವನ್ನು ಬರೆದಿದ್ದಾರೆ ಅವರ ಇತಿಹಾಸವನ್ನು ಅರಿಯಲು ಅವರ ನಡೆ ನುಡಿಗಳನ್ನು ಕರಗತ ಮಾಡಿಕೊಂಡು ನಡೆಯಲು ಮನುಷ್ಯನಾದವನಿಗೆ ಅಧಿಕಾರವಿದೆ ಎಂದು ನಮ್ಮ ಮಹ್ಮದ ಪೈಗಂಬರ ಅವರು ಹೇಳಿದ್ದಾರೆಂದರು. ನಿಸ್ಪಕ್ಷಪಾತವಾಗಿ ಅಂತರಂಗದಿಂದ ಹೇಳುತ್ತೇನೆಂದ ಪ್ರೋ.ಕಂದಗಲ್ಲ ಅವರು ಬಸವಣ್ಣನವರು, ವಿವೇಕಾನಂದ ಅವರು, ರಾಮಕೃಷ್ಣ ಪರಮ ಹಂಸರು ಅವರು ಮಾಡಿದಂತಹ ಕಾರ್ಯಗಳ ಬರೆದ ಪುಸ್ತಕವನ್ನು ಓದಿ ಅವರ ಕಾರ್ಯವನ್ನು ಚೆನ್ನಾಗಿ ಅರಿಯಬೇಕೆಂದರು. ಬಳಿಸಿಕೊಂಡರೆ ವಸ್ತುಗಳನ್ನು ಬಳಿಸಿಕೊಳ್ಳಬೇಕು ಮನುಷ್ಯನನ್ನು ಪ್ರೀತಿಸಬೇಕು ಇಂದಿನ ದಿನಮಾನದಲ್ಲಿ ತದ್ವಿರುದ್ದವಾಗಿ ನಡೆದಿದೆ ಎಂದರು. ಸಶಕ್ತರು ಅಶಕ್ತರನ್ನು ಬಳಿಸಿಕೊಳ್ಳುತ್ತಾರೆ ಇವತ್ತಿಗೂ ಆಶ್ಚರ್ಯಕರ ಸಂಗತಿ ನಡೆದೇ ಇದೆ ಮಹಿಳೆಯರಿಗೆ ಮಕ್ಕಳಿಗೆ ಥಳಿಸುವ ಪ್ರಕರ್ಣಗಳು ಜರುಗುವದನ್ನು ನೋಡುತ್ತಿದ್ದೇವೆ ಇದೇಲ್ಲವನ್ನು ಅರ್ಥೈಸಿಕೊಂಡು ನಡೆಯಬೇಕೆಂದು ಹೇಳಿದ ಕಂದಗಲ್ಲ ಅವರು ಬೀಲಾಲ್ ಅನ್ನುವಂತ ವ್ಯಕ್ತಿಯು ಮಹ್ಮದ ಪೈಗಂಬರ ಅವರೊಂದಿಗೆ ಇದ್ದಂತಹ ಒಡನಾಟ ಮಾನವರಲ್ಲಿ ಯಾವುದೇ ಬೇದಭಾವವೆನ್ನುವದು ಇಲ್ಲಾ ಇರಬಾರದೆಂಬುದನ್ನು ಬೀಲಾಲ್ ಎನ್ನುವಂತವರಿಗೆ ತೋರಿಸಿಕೊಟ್ಟಿದ್ದಲ್ಲದೇ ಆತನಿಗೂ ಕೂಡಾ ಉನ್ನತ ಸ್ಥಾನಮಾನಕ್ಕೇರಲು ಅವಕಾಶ ನೀಡಿದ್ದರೆಂಬುದರ ಕುರಿತು ಬಹು ಮಾರ್ಮಿಕವಾಗಿ ವಿವರಿಸಿದರು.
ಇನ್ನೋರ್ವ ದಿವ್ಯ ಸಾನಿದ್ಯ ವಹಿಸಿದ ಚಬನೂರಿನ ಜ್ಯೋತಿಷ್ಯ ರತ್ನ ಶ್ರೀ ರಾಮಲಿಂಗಯ್ಯ ಮಹಾಸ್ವಾಮಿಗಳು ಮಾತನಾಡಿ ಮಹ್ಮದ ಪೈಗಂಬರ ಅವರು ಜನ್ಮತಾಳಿದ ನಂತರ ತಂದೆ ತಾಯಿಯನ್ನು ಕಳೆದುಕೊಂಡರು, ತಾತ ಸಾಕಿದ ಆದರೂ ತಾತನೂ ತೀರಿದ ದೊಡ್ಡಪ್ಪ ಸಾಕಿದ ನಂತರ ಮಹ್ಮದ ಪೈಗಂಬರ ಅವರಿಗೆ ಪರಮಾತ್ಮನಿಗೆ ವಾಣಿಯಾಗುತ್ತದೆ 13ವರ್ಷ ನಮಾಜ ಮಾಡಿ ಕುರಾನ್ ತಿಳುವಳಿಕೆ ನೀಡಿದ ಪೈಗಂಬರ ಅವರು ಕೇವಲ ಭೂಲೋಕದಲ್ಲಿ ಅಷ್ಟೇ ಅಲ್ಲಾ ಸ್ವರ್ಗಕ್ಕೆ ಹೋಗಿ ಅಲೇದಾಡಿ ಬಂದಂತಹ ಮಹಾತ್ಮನೆಂದು ಬಣ್ಣಿಸಿದ ರಾಮಲಿಂಗಶ್ರೀಗಳು ತಿಳಿದು ಬಾಳುವಂತಹ ಕಾರ್ಯವಾಗಬೇಕು ನಾವು ಕೊಡುಗೆ ಕೊಡುವದು ಹಣ ಅಂತಸ್ಥು ಆಸ್ತಿ ಅಲ್ಲಾ ಕೊಡುಗೆ ಅನ್ನುವದು ಆಚಾರ ಧರ್ಮವಾಗಿದೆ ಇಂತಹ ಕೊಡುಗೆ ನೀಡುವ ಕಾರ್ಯವಾಗಬೇಕೆಂದರು.
ಯೋಗೇಶ ಮಾಷ್ಟರ್ ಅವರು ರಚಿಸಿದ ನನ್ನ ಅರಿವಿನ ಪ್ರವಾದಿ ಎಂಬ ಪುಸ್ತಕ ಬಿಡುಗಡೆಗೊಳಿಸಿದ ಕೊಡೇಕಲ್ಲ ದುರದುಂಡೇಶ್ವರ ಮಠದ ಶ್ರೀ ಶಿವಕುಮಾರ ಮಹಾ ಸ್ವಾಮಿಗಳು ಹಾಗೂ ನಾವದಗಿ ಹಿರೇಮಠದ ಶ್ರೀ ರಾಜೇಂದ್ರ ಒಡೆಯರ ಸ್ವಾಮಿಗಳು ಮಾತನಾಡಿ ಸಮಾಜದಲ್ಲಿ ಏಕತೆ ಸಮಾನತೆ ಸಾರುವದು ಮಹತ್ವದ ಸಂದೇಶವಾಗಿದೆ ಯಾವುದೇ ಧರ್ಮ ಪಂಥ ಇರಬಹುದು ಧರ್ಮದ ಹಾದಿಯಲ್ಲಿ ನಡೆಯಿರಿ ಬಸವಣ್ಣನವರು ಮಹ್ಮದ ಪೈಗಂಬರರು ಇವರೆಲ್ಲರೂ ಸಾರಿದ್ದು ಒಂದೇ ಆಗಿದೆ ವಯಕ್ತಿಕ ವಿಚಾರಕ್ಕಾಗಿ ಧರ್ಮವನ್ನು ಹದಗೆಡಿಸಿಕೊಳ್ಳುವದು ಬೇಡಾ ತಾಳಿಕೋಟೆಯಲ್ಲಿ ಶ್ರೀ ಖಾಸ್ಗತರು ಶರಣರು ಮಹಾತ್ಮರು ಮಾಡಿದಂತಹ ಕೆಲಸ ಅಜರಾಮರವಾಗಿ ಉಳಿಯುವಂತಿದೆ ಅದರಂತೆ ರಂಭಾಪುರಿ ಜಗದ್ಗುರುಗಳು ಸಹ ಮಾನವ ಧರ್ಮಕ್ಕೆ ಜಯವಾಗಲಿ ಎಂದು ಸಾರಿದ್ದಾರೆ ಮಾನವನಲ್ಲಿ ಮಾನವೀಯತೆ ಎಂಬುದು ಇರಬೇಕೆಂಬುದನ್ನು ಮಹ್ಮದ ಪೈಗಂಬರ ಅವರು ಸಾರಿದ್ದಾರೆಂದರು.
ಅನುಪಸ್ಥಿತಿಯಲ್ಲಿದ್ದ ಶ್ರೀ ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಶ್ರೀ ಸಿದ್ದಲಿಂಗ ದೇವರು ದೂರದ ಪ್ರಯಾಣದಲ್ಲಿದ್ದರೂ ಈ ಕಾರ್ಯಕ್ರಮ ಕುರಿತು ಸಂದೇಶವನ್ನು ರವಾನಿಸಿ ಮಹತ್ವದ ಕಾರ್ಯಕ್ರಮ ಇದಾಗಿದೆ ಕಾರಣಾಂತರದಿಂದ ಪಾಲ್ಗೊಳ್ಳಲು ಆಗಿಲ್ಲಾ ಸಓಪಿ ಸಂತರ ನಡೆ ನುಡಿ ಹಾಗೂ ಉಪಸ್ಥಿತ ಶ್ರೀಗಳು ನೀಡಿದಂತಹ ಆಶಿರ್ವಚನವನ್ನು ಎಲ್ಲರೂ ಆಲಿಸಿ ಪಾಲಿಸಿಕೊಳ್ಳಬೇಕೆಂಬ ಶ್ರೀಗಳು ಕಳುಹಿಸಿದ ಸಂದೇಶವನ್ನು ಅಬ್ದುಲ್‍ಗನಿ ಮಕಾಂದಾರ ಅವರು ವಾಚಿಸಿದರು.
ಜಮಾಅತೆ ಇಸ್ಲಾಮಿ ಹಿಂದ್ ಬೆಳಗಾವಿ ವಲಯ ಸಂಚಾಲಕ ಮಹಿಬೂಬ ಆಲಂ ಬಡಗಣ, ಹಿರಿಯ ಪತ್ರಕರ್ತರಾದ ಜಿ.ಟಿ.ಘೋರ್ಪಡೆ ಅವರು ಮಾತನಾಡಿದರು.
ವೇದಿಕೆಯ ಮೇಲೆ ಶ್ರೀ ಖಾಸ್ಗತೇಶ್ವರ ಮಠದ ಉಸ್ತುವಾರಿ ವೇ.ಮುರುಘೇಶ ವಿರಕ್ತಮಠ, ಧಾರ್ಮಿಕ ಮುಖಂಡ ಸೈಯದಶಕೀಲ್ ಅಹ್ಮದ ಖಾಜಿ, ವಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಎಸ್.ಪಾಟೀಲ(ಯಾಳಗಿ), ಕಸಾಪ ಅಧ್ಯಕ್ಷ ಆರ್.ಎಲ್.ಕೊಪ್ಪದ, ಪುರಸಭಾ ಮಾಜಿ ಸದಸ್ಯರಾದ ವಿಜಯಸಿಂಗ್ ಹಜೇರಿ, ಪ್ರಭುಗೌಡ ಮದರಕಲ್ಲ, ಜಮಿಯಾ ಮಸೀದಿ ಅಧ್ಯಕ್ಷ ಎ.ಕೆ.ನಮಾಜಕಟ್ಟಿ, ಕಾರ್ಯದರ್ಶಿ ಎ.ಡಿ.ಏಕೀನ್, ಇದ್ಗಾ ಕಮಿಟಿ ಅಧ್ಯಕ್ಷ ಎಂ.ಎಚ್.ಕೇಂಭಾವಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎಂ.ಕೆ.ಚೋರಗಸ್ತಿ, ಮಾಜಿ ಅಧ್ಯಕ್ಷ ಎಸ್.ಎನ್.ಪಾಟೀಲ, ಅಯೂಬ ಮನಿಯಾರ, ಮೊದಲಾದವರು ಉಪಸ್ಥಿತರಿದ್ದರು.
ಜಮಾಅತೆ ಇಸ್ಲಾಮಿ ಹಿಂದ್ ಸಂಘಟನೆಯ ನಗರ ಘಟಕದ ಅಧ್ಯಕ್ಷ ಮುಜಾಹೀದ್ ನಮಾಜಕಟ್ಟಿ ಪ್ರಾಸ್ಥಾವಿಕ ಮಾತನಾಡಿದರು.
ಅಬ್ದುಲಗನಿ ಮಕಾಂದಾರ ನಿರೂಪಿಸಿ ವಂದಿಸಿದರು.