“ಇಡೀ ದೇಶ ರಾಮ ಮಯ” ರಾಮ ಉತ್ತಮ ಆಡಳಿತ ಪ್ರತೀಕ: ಪಿಎಂ

ಪಾಲಸಮುದ್ರ, ಜ.16- ಉತ್ತರ ಪ್ರದೇಶದ ಆಯೋದ್ಯೆಯಲ್ಲಿ ಈ ತಿಂಗಳ 22 ರಂದು ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆ ನಡೆಯಲಿದ್ದು ಇಡೀ ದೇಶ ರಾಮಮಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದಿಲ್ಲಿ ಹೇಳಿದ್ದಾರೆ.

ಶ್ರೀರಾಮ ಉತ್ರಮ ಆಡಳಿತ ಪ್ರತೀಕ. ಅದನ್ನು ನಮ್ಮ ನೇತೃತ್ವದ ಸರ್ಕಾರ ಚಾಚೂ ತಪ್ಪದೆ ಪಾಲಿಸುತ್ತಿದೆ ಎಂದು ಪ್ರಧಾನಿ ಹೇಳಿದ್ದು ತಮ್ಮ ಭಾಷಣದುದ್ದಕ್ಕೂ ಶ್ರೀರಾಮನನ್ನು ನೆನೆಪು ಮಾಡಿಕೊಂಡಿದ್ದಾರೆ.

ಆಂದ್ರ ಪ್ರದೇಶದ ಪಾಲಸಮುದ್ರದಲ್ಲಿ ರಾಷ್ಟ್ರೀಯ ಸೀಮಾ ಸುಂಕ, ನೇರ ತೆರಿಗೆ ಮತ್ತು ಮಾದಕ ವಸ್ತು ನಿಗ್ರಹ ದಳದ ಹೊಸ ಕ್ಯಾಂಪಸ್ ಅನ್ನು ಉದ್ಘಾಟಿಸಿ ಮಾತನಾಡಿದ ಅವರು ಶ್ರೀರಾಮನ ಸ್ಪೂರ್ತಿ, ಮಾರ್ಗದರ್ಶನ ಮತ್ತು ಪ್ರೇರಣೆಯಿಂದ ಉತ್ರಮ ಆಡಳಿತ ನಡೆಸಲು ಸಹಕಾಯಾಗಿದೆ ಎಂದು ಹೇಳಿದ್ದಾರೆ.

ಈ ತಿಂಗಳ 22 ರಂದು ಆಯೋದ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ನಡೆಯಲಿದ್ದು ಅದಕ್ಕಾಗಿ ಎಲ್ಲಾ ಸಿದ್ದತೆ‌ ನಡೆಯುತ್ತಿವೆ.ಶ್ರೀರಾಮನ ತತ್ವ ಆದರ್ಶ ಮತ್ತು ಮೌಲ್ಯಗಳು ಹಿಂದು, ಎಂದೆಂದುಗೂ ಪ್ರಸ್ತುತ ಎಂದರು.

ಬಹುವರ್ಷಗಳಿಂದ ನೆನೆಗುದಿಗೆ ಬಿದಿದ್ದ ಶ್ರೀರಾಮಮಂದಿರದ ಪ್ರಾಣ ಪ್ರತಿಷ್ಠಾಪನೆ ನಡೆಯಲಿದ್ದು ಈ ಐತಿಹಾಸಿಕ ಕ್ಷಣಕ್ಕಾಗಿ ಇಡೀ ದೇಶ ಎದುರು ನೋಡುತ್ತಿದೆ. ಹೀಗಾಗಿ ಇಡೀ ದೇಶ ಸಂಪೂರ್ಣ ರಾಮ ಮಯವಾಗಿದೆ ಎಂದು ಅವರು ತಿಳಿಸಿದ್ದಾರೆ.

ರಾಮಯಾಣದಲ್ಲಿ ತೆಲುಗುನ ರಂಗನಾಥ ಸೇರಿದಂತೆ ಅನೇಕ ಉತ್ರಮ ನಿದರ್ಶನ ನೋಡುತ್ತೇವೆ. ಜೊತೆಗೆ ಲೇಪಾಕ್ಷಿ ಪ್ರದೇಶದಲ್ಲಿರುವ ವೀರಭದ್ರ ದೇವಾಲಯವೂ ಕೂಡ ಪ್ರಮುಖಪಾತ್ರ ವಹಿಸಿದೆ ಎಂದು ಅವರು ತಿಳಿಸಿದ್ದಾರೆ.

ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ 11 ದಿನಗಳ ವೃತದಲ್ಲಿ ತಾವು ಇದ್ದೇನೆ. ಪ್ರಾಣ ಪ್ರತಿಶತ ನಡೆಯುವ ಸಮಾರಂಭಕ್ಕಾಗಿ ಇಡೇ ದೇಶದ ಜನರಂತೆ ತಾವೂ ಕೂಡ ಎದುರು ನೋಡುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.