ಇಡೀ ಜಗತ್ತಿಗೆ ತೋರಿಸುವ ಶಕ್ತಿ ಭಾರತದಲ್ಲಿದೆ:ಹಂಚಲಿ

ತಾಳಿಕೋಟೆ:ಫೆ.22: ಭಾರತವು ಇಡೀ ಜಗತ್ತನ್ನು ಗೆಲ್ಲಲು ಯಾವುದೇ ಶಸ್ತ್ರಾಸ್ತ್ರಗಳಿಂದ ಹೊರಟಿಲ್ಲಾ ಅದು ಹೊರಟಿರುವದು ಆದ್ಯಾತ್ಮೀಕ ಭಲದಿಂದಲೇ ಮಾತ್ರ ಹೊರಟಿದೆ ಎಂದು ಸಾಹಿತ್ಯ ಚಿಂತಕರಾದ ಶಿಕ್ಷಕ ಅಶೋಕ ಹಂಚಲಿ ಅವರು ನುಡಿದರು.

ಮಂಗಳವಾರರಂದು ಶ್ರೀ ಸದ್ಗುರು ಸಾಂಭಪ್ರಭು ಶರಣಮುತ್ಯಾರವರ ಜಾತ್ರಾ ಮಹೋತ್ಸವ ಹಾಗೂ ಅಲ್ಲಮಪ್ರಭು ದೇವರ ಶೂನ್ಯ ಸಂಪಾದನೆಯ ಆದ್ಯಾತ್ಮೀಕ ಪ್ರವಚನ ಪ್ರಾರಂಭೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದ ಅವರು ಈ ಹಿಂದಿನ ಕಾಲದಲ್ಲಿ ದೇವಸ್ಥಾನಗಳನ್ನು ಹಾಗೂ ಭಾವಿಗಳನ್ನು ನಿರ್ಮಾಣ ಮಾಡಿದಲ್ಲದೇ ಗಿಡಗಳನ್ನು ಅಲ್ಲಲ್ಲಿ ನೆಟ್ಟು ನೆರಳಿನ ಕಾರ್ಯವನ್ನೂ ಕೂಡಾ ಮಾಡಲಾಗುತ್ತಾ ಸಾಗಿಬಂದಿತ್ತು ಬಾಯಾರಿಕೆಗಾಗಿ ಅರವಟಿಕೆಗಳನ್ನು ಸಹ ಇಡಲಾಗಿತ್ತು ಅಂತಹ ಕಾರ್ಯಕ್ಕೆ ಶರಣು ಅನ್ನುವಂತೆ ಈ ತಾಳಿಕೋಟೆ ಪಟ್ಟಣದಲ್ಲಿ ಈ ನೆಲವನ್ನು ಆದ್ಯಾತ್ಮೀಕ ವಿಚಾರಗಳೊಂದಿಗೆ ಪವಿತ್ರ ಮಾಡಿ ಹೊರಟಿರುವವರಲ್ಲಿ ಅನುಭಾವದ ಅಲ್ಲಮಪ್ರಭು ದೇವರ ವಿಚಾರ ಕುರಿತು ಆದ್ಯಾತ್ಮೀಕ ಅನುಭಾವವನ್ನು ಅಧ್ಯಯನ ಶೀಲ ಮಾಡಿದ ಖ್ಯಾತ ಪ್ರವಚನಕಾರ ಪಡೇಕನೂರ ಶ್ರೀ ಮಲ್ಲಿಕಾರ್ಜುನ ಮಹಾ ಸ್ವಾಮಿಗಳು ಇಂದಿನಿಂದ ಉಣಬಡಿಸಲು ಸಜ್ಜಾಗಿರುವದು ಸಂತಸ ತಂದಿದೆ ಎಂದರು. ಆದ್ಯಾತ್ಮೀಕ ಚಿಂತನೆ ಎಂಬುದು ಇದೇ ಖಾಸ್ಗತೇಶ್ವರ ಭೂಮಿಯಲ್ಲಿ ನಿಂತಾಗ ಶ್ರೀ ಶರಣಮುತ್ಯಾರ ಜಾತ್ರಾ ಮಹೋತ್ಸವದಲ್ಲಿ ಅನುಭಾವ ಉಣಿಸುವ ಶ್ರೀಮಂತ ಮನಸ್ಸುಗಳಿಗೆ ಕೃತಜ್ಞತೆ ಸಲ್ಲಿಸಿದರೆ ತಪ್ಪಾಗಲಾರದೆಂದರು. ಶಾಂತಿ ಅನ್ನುವದು ಕಿರಾಣಿ ಅಂಗಡಿ ಮುಗ್ಗಟ್ಟುಗಳಲ್ಲಿ ಸಿಗುವಂತಹದ್ದಲ್ಲಾ ಅದು ಪೂಜ್ಯರ ಸನ್ನಿದಿಗೆ ಹೋದಾಗ ಸಿಗುತ್ತದೆ ಎಂದು ಅಲ್ಲಮಪ್ರಭುಗಳು ಚಿನ್ನದಂತಹ ಜ್ಞಾನವನ್ನು ಬಸವಣ್ಣನವರಿಗೆ ಹಾಗೂ ಅಕ್ಕಮಹಾದೇವಿಯವರಿಗೆ ಮೂಡಿಸಿದ್ದಾರೆಂದು ಸಿದ್ದೇಶ್ವರ ಶ್ರೀಗಳ ಅದ್ಬುತ್ ಪ್ರವಚನಗಳ ಕುರಿತು ವಿವರಿಸಿದರು.

ಇನ್ನೋರ್ವ ಪಡೇಕನೂರ ದಾಸೋಹಮಠದ ಶ್ರೀ ಮ.ನಿ.ಪ್ರ.ಮಲ್ಲಿಕಾರ್ಜುನ ಮಹಾಸ್ವಾಮಿಗಳು ಪುರಾಣ ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರವಚನ ಮೊದಲನೇಯದಿನದ ವಿಷಯವನ್ನು ಪ್ರಸ್ಥಾಪಿಸುತ್ತಾ ಮಾತನಾಡಿದ ಶ್ರೀಗಳು ಬಯಲಿನಲ್ಲಿ ಬಯಲು ಅಂತ ಅಲ್ಲಮಪ್ರಭುದೇವರು ಬರೆಯುತ್ತಾರೆ ಕಾರಣ ಆ ತತ್ವವನ್ನು ನಾವು ಅಳವಡಿಸಿಕೊಂಡಿದ್ದೇವೆಂದರು. ಸುಮಾರು 900 ವರ್ಷಗಳ ಆಚೆ ಅಲ್ಲಮಪ್ರಭುದೇವರು ಜನ್ಮ ತಾಳಿ ಎಲ್ಲರಿಗೂ ಜ್ಞಾನ ದಾಸೋಹವನ್ನು ಉಣಬಡಿಸಿದ್ದಾರೆ ಅವರ ಕಾಯಕ ಅವರ ಆಯ್ಕೆ ಹೇಗಿತ್ತೆಂಬುದು ಈ ಪ್ರವಚನದಲ್ಲಿ ಮುಂದೆ ಸಾಗಿ ಬರಲಿದೆ ಎಂದರು. ಅನೇಕ ಮಹಾ ಶಿವ ಶರಣರು ಆಗಿ ಹೋಗಿದ್ದರೂ ಅವರ ಹೆಸರುಗಳು ಇನ್ನೂ ಪ್ರಚಲಿತದಲ್ಲಿವೆ ಆದರೆ ಅವರು ಇನ್ನೂ ಇದ್ದಂತೆ ಕಾಣುವ ಮಹಾತ್ಮರಿಗೆ ಮರಣವೇ ಇಲ್ಲಾವೆಂದರು. ಮೋಹ ಮಮಕಾರಕ್ಕೆ ವ್ಯರ್ಥ ಜೀವನ ಹಾಳುಗೆಡುವದು ಬೇಡಾ ಜೀವನವನ್ನು ಅರ್ಥ ಮಾಡಿಕೊಂಡು ಬಧುಕುವದೇ ಸಾರ್ಥಕ ಬಧುಕು ಎನ್ನುತ್ತಾರೆಂದರು. ಆತ್ಮ ಎನ್ನುವದಕ್ಕೆ ಅಮೃತ ಪುತ್ರನೆಂದು ಕರೆಯುತ್ತಾರೆ ದೇಹ ಜಗತ್ತು ಎಂಬುದು ಮರೆಯಾಗುತ್ತದೆ ಆದರೆ ಆತ್ಮ ಎಂಬುದು ಮರೆಯಾಗುವದಿಲ್ಲವೆಂದರು. ಅಮೃತ ಪುತ್ರವೆಂದು ಶರಣರಿಗೆ ಕರೆಯುತ್ತಾರೆ ಆ ಕಾರಣದಿಂದಲೇ ಅವರ ಜಾತ್ರೆ ಉತ್ಸವಗಳನ್ನು ಆಚರಿಸುತ್ತಾರೆಂದರು. ಮಹ್ಮದ ಪೈಗಂಬರ ಅವರ ಕುರಿತು ಹಾಗೂ ಅಲ್ಲಪ್ರಭುಗಳ ಕುರಿತು ವಿವರಿಸಿದ ಅವರು ದೇವರು ಹೊರಗಿಲ್ಲಾ ನಿನ್ನಲ್ಲಿಯೇ ಇದ್ದಾನೆ ಅದನ್ನು ಹುಡುಕುವ ಪ್ರಯತ್ನ ಮಾಡಬೇಕೆಂದು ಅವರು ಹೇಳಿದ್ದಾರೆ ಕಾರಣ ಮನಸ್ಸಿನ ಹೊಲಸನ್ನು ತೊಳೆಯಲು ಅಂತರಂಗವೆಂಬುದು ಶುದ್ದವಾಗಿರಬೇಕೆಂದು ಹೇಳಿದ ಶ್ರೀಗಳು ಕೆಲವು ಜನಪದ ಒಗಟುಗಳನ್ನು ಹೇಳಿದರು.

ಇನ್ನೋರ್ವ ಕೈಲಾಸಪೇಠೆಯ ಶ್ರೀ ಬಸವಪ್ರಭು ದೇವರು ಮಾತನಾಡಿ 12 ನೇ ಶತಮಾನದ ನಡೆನುಡಿಗಳನ್ನು ಆಲಿಸಿಕೊಂಡು ನಡೆಯಬೇಕು ಅವರು ಹೇಳಿದ ವಚನಗಳನ್ನು ದೇಹಕ್ಕೆ ಮುಟ್ಟಿಸುವಂತೆ ಕಾಯಕ ಮಾಡಬೇಕು ದಾಸೋಹ ಎಂಬುದರ ಕುರಿತು ಶರಣರು ಹೇಳಿದಂತೆ ದುಡಿತಕ್ಕಾಗಿ ಕಾಯಕವೇ ಕೈಲಾಸವೆಂದು ಶರಣರು ಹೇಳಿದ್ದಾರೆ ಸಣ್ಣತನದ ಭಾವವೆಂಬುದು ದೇವರಿಗೆ ಬೇಕಾಗುತ್ತದೆ ಅದರೊಳಗೆ ಅನುಭವೆಂಬುದು ಬೇಕು ಎಂದು ಶೂನ್ಯ ಸಿಂಹಾಸನ ಎನ್ನುವದಕ್ಕೆ ಭಕ್ತಿ ಅನುಭವ ಜ್ಞಾನವೇ ಸಿಂಹಾಸನವಾಗಿದೆ ಎಂದು ಅಲ್ಲಮಪ್ರಭು ದೇವರ ಪ್ರವಚನವನ್ನು ಏರ್ಪಡಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಮೊದಲಿಗೆ ವಿಜಯಪುರ ಸಿದ್ದೇಶ್ವರ ಸ್ವಾಮಿಗಳವರ ಭಾವಚಿತ್ರಕ್ಕೆ ಪುಷ್ಪಹಾರ ಹಾಕಿ ಗೌರವಿಸಲಾಯಿತಲ್ಲದೇ 2ನಿಮಿಷ ಮೌನ ಆಚರಿಸಿ ಶ್ರದ್ದಾಂಜಲಿ ಸಲ್ಲಿಸಲಾಯಿತು.

ಈ ಸಮಯದಲ್ಲಿ ಶ್ರೀ ಶರಣಮುತ್ಯಾರವರ ಮಠದ ಶ್ರೀ ಬಸಣ್ಣ ಶರಣರ, ಶರಣಪ್ಪ ಶರಣರ ಅವರು ನೇತೃತ್ವ ವಹಿಸಿದ್ದರು.

ವೇದಿಕೆಯ ಮೇಲೆ ಶ್ರೀ ಖಾಸ್ಗತೇಶ್ವರ ಮಠದ ವಿಶ್ವನಾಥ ವಿರಕ್ತಮಠ ಹಾಗೂ ಸಿದ್ದಣ್ಣ ಶರಣರ, ಭೀಮಣ್ಣ ಇಂಗಳಗಿ, ಶರಣಪ್ಪ ದೊರೆ, ಮಲ್ಲಣ್ಣ ಇಂಗಳಗಿ, ಮಲ್ಲಣ್ಣ ಶರಣರ, ಬಸವರಾಜ ಛಾಂದಕೋಟೆ, ಗುರುಲಿಂಗಪ್ಪ ದೊಡಮನಿ, ಸುಭಾಸಗೌಡ ಹಳೆಮನಿ, ಮೊದಲಾದವರು ಉಪಸ್ಥಿತರಿದ್ದರು.

ಗವಾಯಿಗಳಾದ ಹಣಮಂತಕುಮಾರ ಬಳಗಾನೂರ, ಹಾಗೂ ಭೀಮಣ್ಣ ಗೊಂದೆನೂರ ಪ್ರಾರ್ಥಿಸಿದರು.

ಶರಣಗೌಡ ಪೊಲೀಸ್‍ಪಾಟೀಲ ಸ್ವಾಗತಿಸಿದರು. ವಿಜಯಕುಮಾರ ಹಿರೇಮಠ ನಿರೂಪಿಸಿದರು. ಸಂಗಮೇಶ ಶರಣರ ವಂದಿಸಿದರು.