ಇಡಿ ದಾಳಿ ದುರುದ್ಧೇಶಪೂರಿತಬೆಣಕಲ್ ಬಸವರಾಜಗೌಡ ಖಂಡನೆ

ಸಂಜೆವಾಣಿ ವಾರ್ತೆ)ಬಳ್ಳಾರಿ, ಫೆ.12: ನಗರ ಶಾಸಕ ನಾರಾ ಭರತ್ ರೆಡ್ಡಿ, ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿ  ಇವರಿಗೆ ಸಂಬಂಧಿಸಿದ ಕಚೇರಿ, ಮನೆ ಹಾಗೂ ಆಪ್ತರ ಮನೆಗಳ ಮೇಲೆ ಇಡಿ ದಾಳಿ ಮಾಡಿರುವುದು ದುರುದ್ಧೇಶದಿಂದ ಕೂಡಿದೆಂದು  ಮಾಜಿ ಉಪಮೇಯರ್, ಕಾಂಗ್ರೆಸ್ ಮುಖಂಡ ಬೆಣಕಲ್ ಬಸವರಾಜಗೌಡ ಹೇಳಿದ್ದಾರೆ.ಕಳೆದ ಎರೆಡು ದಿನಗಳ ಕಾಲ  ಶಾಸಕ ನಾರಾ ಭರತ್ ರೆಡ್ಡಿ ಹಾಗೂ ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿಯವರ ಕಚೇರಿ, ಮನೆ ಹಾಗೂ ಆಪ್ತರ ನಿವಾಸಗಳ ಮೇಲೆ ಇಡಿ ನಡೆಸಿದ ದಾಳಿಯ ಬಗ್ಗೆ ಪತ್ರಿಕಾ ಪ್ರಕಟಣೆ ಮೂಲಕ ಹೇಳಿಕೆ ನೀಡಿರುವ ಬಸವರಾಜ ಗೌಡ.ಕೇಂದ್ರದ ಬಿಜೆಪಿ ಸರ್ಕಾರ ಪ್ರಜಾಪ್ರಭುತ್ವದ ಆಶಯಗಳನ್ನು ಗಾಳಿಗೆ ತೂರಿ ಸರ್ವಾಧಿಕಾರಿ ಧೋರಣೆಯಿಂದ ವಿರೋಧ ಪಕ್ಷಗಳ ಮುಖಂಡರನ್ನು ರಾಜಕೀಯವಾಗಿ ಗುರಿಯಾಗಿರಿಸಿಕೊಂಡು  ಮುಗಿಸುವ ಕೆಲಸ ಮಾಡುತ್ತಿದೆ. ಚುನಾವಣೆಯ ಸಂದರ್ಭದಲ್ಲೇ ತನಿಖಾ ಸಂಸ್ಥೆಗಳು ಚುರುಕಾಗುವುದರ ಹಿಂದೆ. ಬಿಜೆಪಿಯ ನಾಯಕರ ಪಾತ್ರ ಇರುವುದು ಗುಟ್ಟಾಗಿ ಉಳಿದಿಲ್ಲ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.ಲೋಕಸಭಾ ಚುನಾವಣೆಯ ಈ ಸಂದರ್ಭದಲ್ಲಿ ಶಾಸಕ ನಾರಾ ಭರತ್ ರೆಡ್ಡಿ ಹಾಗೂ ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿಯವರ ಕಚೇರಿ, ನಿವಾಸಗಳ ಮೇಲೆ ಇಡಿ ದಾಳಿ ಆಗಿರುವುದು ಕೂಡ ನಮ್ಮ ನಾಯಕರನ್ನು ಬೆದರಿಸುವ  ತಂತ್ರವಾಗಿದೆ. ಆದರೆ ನಾವು, ನಮ್ಮ ನಾಯಕರುಗಳು ಇಂತಹ ಗೊಡ್ಡು ಬೆದರಿಕೆಗಳಿಗೆ ಹೆದರುವುದಿಲ್ಲವೆಂದು, ಸದಾ ನಾವು ನಮ್ಮ ನಾಯಕರ ಬೆಂಬಲವಾಗಿ ಹೋರಾಟಕ್ಕೂ ಸಿದ್ದ ಎಂದು ಬೆಣಕಲ್ ಬಸವರಾಜಗೌಡ ಅವರು ತಿಳಿಸಿದ್ದಾರೆ.