ಇಡಿ ತನಿಖೆ ಭೀತಿ ಪಕ್ಷ ತೊರೆಯಲು ಕಾರಣ

ಮುಂಬೈ,ಆ.೨೧- ಪಕ್ಷದ ಕೆಲ ನಾಯಕರು ತಮ್ಮ ವಿರುದ್ಧದ ಜಾರಿ ನಿರ್ದೇಶನಾಲಯದ ತನಿಖೆ ತಪ್ಪಿಸಿಕೊಳ್ಳಲು ಕೆಲವು ನಾಯಕರು ಎನ್‌ಸಿಪಿ ತೊರೆಯಲು ಮುಂದಾಗಿದ್ದಾರೆ ಎಂದು ಪಕ್ಷದ ವರಿಷ್ಠ ಶರದ್ ಪವಾರ್ ಹೇಳಿದ್ದಾರೆ. ಅಜಿತ್ ಪವಾರ್ ಸೇರಿದಂತೆ ಎನ್‌ಸಿಪಿಯ ಕೆಲ ಶಾಸಕರು ಬಿಜೆಪಿ,ಶಿವಸೇನೆ ಜೊತೆ ಸೇರಿ ಜುಲೈ ೨ ರಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ಸರ್ಕಾರದ ಭಾಗವಾಗಿದ್ದರು. ಈ ಹಿನ್ನೆಲೆಯಲ್ಲಿ ಶರದ್ ಪವಾರ್ ನೀಡಿರುವ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಎನ್‌ಸಿಪಿ ಆಯೋಜಿಸಿದ್ದ ಸಾಮಾಜಿಕ ಮಾಧ್ಯಮ ಸಭೆಯಲ್ಲಿ ಎನ್‌ಸಿಪಿ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಅವರು. ಬಂಡಾಯ ಶಾಸಕರು ಶಿವಸೇನೆ-ಬಿಜೆಪಿ ಸರ್ಕಾರಕ್ಕೆ ಸೇರಿದ ಸೋದರ ಸಂಬಂಧಿ ಅಜಿತ್ ಪವಾರ್ ಅವರನ್ನು ನೇರವಾಗಿ ಉಲ್ಲೇಖಿಸದೆ, ಅಭಿವೃದ್ಧಿಯ ಕಾರಣಕ್ಕಾಗಿ ಸರ್ಕಾರದ ಭಾಗವಾಗಲು ಬಯಸುತ್ತೇವೆ ಎಂಬ ಅವರ ಹೇಳಿಕೆ ನಿಜವಲ್ಲ ಎಂದು ಪವಾರ್ ಹೇಳಿದ್ದಾರೆ, ಕೇಂದ್ರ ಸರ್ಕಾರ ಎನ್ ಸಿಪಿಯ ಕೆಲವು ನಾಯಕರ ವಿರುದ್ಧ ಜಾರಿ ನಿರ್ದೇಶನಾಲಯದ ತನಿಖೆ ಪ್ರಾರಂಭಿಸಿದೆ. ಅದರಿಂದ ತಪ್ಪಿಸಿಕೊಳ್ಳಲು ಅಜಿತ್ ಪವಾರ್ ಬಣದಿಂದ ಬಿಜೆಪಿ ಸೇರಲು ಹೇಳಲಾಗಿದೆ ಎಂದು ಹೇಳಿದ್ದಾರೆ. ಬಿಜೆಪಿಯ ಬೆದರಿಕೆಯ ನಡುವೆ ಕೆಲವು ಸದಸ್ಯರು ಜಾರಿ ನಿರ್ದೇಶನಾಲಯದ ವಿಚಾರಣೆ ಎದುರಿಸಲು ಸಿದ್ಧರಾಗಿದ್ದರು. ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ೧೪ ತಿಂಗಳ ಕಾಲ ಜೈಲಿನಲ್ಲಿದ್ದರು. ದೇಶಮುಖ್ ಅವರ ನಿಷ್ಠೆ ಬದಲಾಯಿಸುವಂತೆ ಒತ್ತಡ ಹೇರಿದ್ದರೂ ಪಕ್ಷದ ಪರವಾಗಿದ್ದಾರೆ ಎಂದು ಶ್ಲಾಘಿಸಿದ್ದಾರೆ. ಸರ್ಕಾರಕ್ಕೆ ಕಿವಿಮಾತು: ಮಹಾರಾಷ್ಟ್ರದ ಸಾಮಾನ್ಯ ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ರಾಜ್ಯ ಸರ್ಕಾರ ಗಮನ ಹರಿಸಬೇಕು. “ರಾಜ್ಯ ನಿರುದ್ಯೋಗದಂತಹ ಸಮಸ್ಯೆಗಳನ್ನು ಎದುರಿಸುತ್ತಿದೆ, ರೈತರು ಸಹ ಬಳಲುತ್ತಿದ್ದಾರೆ. ಇದನ್ನು ಅರಿಯಬೇಕು ಎಂದು ಶರದ್ ಪವಾರ್ ಕಿವಿ ಮಾತು ಹೇಳಿದ್ದಾರೆ. ಅಜಿತ್ ಪವಾರ್ ಮತ್ತು ಎನ್‌ಸಿಪಿಯ ಎಂಟು ಶಾಸಕರು ಕಳೆದ ತಿಂಗಳು ಏಕನಾಥ್ ಶಿಂಧೆ ನೇತೃತ್ವದ ರಾಜ್ಯ ಸರ್ಕಾರಕ್ಕೆ ಸೇರ್ಪಡೆಗೊಂಡು ಸಚಿವರಾಗಿದ್ದಾರೆ. ಅಜಿತ್ ಪವಾರ್ ಅವರನ್ನು ಉಪಮುಖ್ಯಮಂತ್ರಿಯಾಗಿದ್ದು ಇತರ ೮ ಎನ್‌ಸಿಪಿ ಶಾಸಕರು ಕ್ಯಾಬಿನೆಟ್ ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.