ಇಡಿ ಕೋರ್ಟಿಗೆ ಡಿಕೆಶಿ ಹಾಜರು

ನವದೆಹಲಿ,ನ.೨೩- ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ದೆಹಲಿಯ ಇಡಿ ವಿಶೇಷ ನ್ಯಾಯಾಲಯಕ್ಕೆ ಇಂದು ಹಾಜರಾದರು.
ಇಡಿ ವಿಚಾರಣೆಗೆ ನಿನ್ನೆ ಬೆಂಗಳೂರಿನಿಂದ ದೆಹಲಿಗೆ ತೆರಳಿದ್ದ ಡಿ.ಕೆ ಶಿವಕುಮಾರ್ ಇಂದು ದೆಹಲಿಯ ರೋಜ್
ಅವಿನ್ಯೂನಲ್ಲಿರುವ ಇಡಿ ಕೋರ್ಟ್‌ಗೆ ಹಾಜರಾದರು.೨೦೧೯ರಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಡಿಕೆಶಿ ಹಾಗೂ ಅವರ ಆಪ್ತ ನಿವಾಸದ ಮೇಲೆ ಐಟಿ ದಾಳಿ ನಡೆದಿತ್ತು. ಈ ದಾಳಿ ಸಂದರ್ಭದಲಿ ೮ ಕೋಟಿ ರೂ. ನಗದು ಪತ್ತೆಯಾಗಿ ಪ್ರಕರಣ ಇಡಿಗೆ ವರ್ಗಾವಣೆಗೊಂಡಿತ್ತು. ನಂತರ ಇಡಿ ಅಧಿಕಾರಿಗಳು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.ಕೆ ಶಿವಕುಮಾರ್ ಅವರನ್ನು ಬಂಧಿಸಿ ವಿಚಾರಣೆ ನಡೆಸಿದ್ದು. ಜಾಮೀನಿನ ಮೇಲೆ ಡಿ.ಕೆ ಶಿವಕುಮಾರ್ ಜೈಲಿನಿಂದ ಹೊರ ಬಂದಿದ್ದರು,ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಿದ್ದು, ದೆಹಲಿಯ ಇಡಿಯ ವಿಶೇಷ ನ್ಯಾಯಾಲಯದಲ್ಲಿ ಈಗ ವಿಚಾರಣೆ ನಡೆದಿದ್ದು, ವಿಚಾರಣೆಗೆ ಡಿ.ಕೆ ಶಿವಕುಮಾರ್ ಹಾಜರಾಗಿದ್ದಾರೆ.