
ರಾಯಚೂರು,ಮಾ.೧೬- ರಾಜ್ಯದಲ್ಲಿ ಆರ್ಥಿಕವಾಗಿ ಹಿಂದುಳಿದ ದುರ್ಬಲವರ್ಗದವರಿಗೆ ಶೇ.೧೦ ರಷ್ಟು ಮೀಸಲಾತಿ ಇಡಬ್ಲ್ಯೂಎಸ್ ಪ್ರಮಾಣಪತ್ರ ನೀಡುವಂತೆ ಬ್ರಾಹ್ಮೀನ್ ಆರ್ಗನೈಜೇಷನ್ ಆಫ್ ಇಂಡಿಯಾ ಜಿಲ್ಲಾ ಸಮತಿ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಪ್ರಧಾನಿ ನರೇಂದ್ರ ಮೋದಿಯವರು ಆರ್ಥಿಕವಾಗಿ ದುರ್ಬಲವರ್ಗದವರಿಗೆ ಶೇ.೧೦ ರಷ್ಟು ಮೀಸಲಾತಿ ಜಾರಿಗೆಗೊಳಿಸಿ ೪ ವರ್ಷಗಳು ಕಳೆದರೂ ರಾಜ್ಯ ಸರ್ಕಾರ ಇಡಬ್ಲ್ಯೂ ಎಸ್ ಜಾರಿಗೆ ತರಲು ರಾಜ್ಯ ಸರಕಾರ ವಿಳಂಬ ಮಾಡುತ್ತಿರುವರು ಸರಿಯಲ್ಲ ಎಂದು ಬಿಜೆಪಿ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ರಾಜ್ಯದ ವಿಪ್ರ ಸಮಾಜದಲ್ಲಿ
ಅಸಮಾಧಾನಕ್ಕೆ ಎಡೆಮಾಡಿಕೊಟ್ಟಿದೇ. ಇದರಿಂದ ರಾಜ್ಯ ಸರಕಾರವನ್ನು ವಿಪ್ರ ಸಮುದಾಯ ಈ ವಿಷಯ ಕುರಿತು ವಿರೋಧ ವ್ಯಕ್ತಪಡಿಸುತ್ತದೆ. ಬರುವಂತಹ ವಿಧಾನಸಭೆ ಚುನಾವಣಿಯಲ್ಲಿ ಮೀಸಲಾತಿ ನೀಡದ ರಾಜ್ಯ ಸರಕಾರದ ಮೇಲೆ ಇದರ ಪರಿಣಾಮ ಚೀರುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಬಿಜೆಪಿ ಧಿಕ್ಕಾರ ಕೂಗಿದರು.
ಚುನಾವಣೆಯ ನೀತಿ ಸಂಹಿತೆ ಜಾರಿ ಒಳಗಡೆ ಇಡಬ್ಲ್ಯೂಎಸ್ ಜಾರಿಗೆಯಾಗಿದ್ದರೆ, ಬರುವ ವಿಧಾನಸಭೆ ಚುನಾವಣಿಯಲ್ಲಿ ವಿಪ್ರ ಸಮುದಾಯದದಿಂದ ಸರ್ಕಾರಕ್ಕೆ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು. ಯಥಾವತ್ತಾಗಿ ರಾಜ್ಯ ಸರಕಾರ ಯಾವುದೇ
ತಿದ್ದುಪಡಿ ಇಲ್ಲದೇ ಜಾರಿಗೊಳಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರವೀಂದ್ರ ಕುಲಕರ್ಣಿ, ಗೋಪಾಲ ತಟ್ಟಿ, ಹನುಮೇಶ ಮಾನ್ವಿಕರ್ ಸೇರಿದಂತೆ ಉಪಸ್ಥಿತರಿದ್ದರು.