ಕಲಬುರಗಿ ಜೂ 30:ನೂತನವಾಗಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ತಿಪ್ಪಣ್ಣಪ್ಪ ಕಮಕನೂರ ಅವರಿಗೆ ಬ್ರಾಹ್ಮಣ ಆರ್ಗನೈಜೇಷನ್ ಆಫ್ ಇಂಡಿಯಾ (ಬಿ.ಓ.ಐ) ಸಂಘಟನೆವತಿಯಿಂದ ಸನ್ಮಾನಿಸಲಾಯಿತು ಈ ಮೂಲಕ ವಿಪ್ರ ಸಮಾಜದ ಸಮಸ್ಯೆಗಳು ಹಾಗೂ ಅಭಿವೃದ್ಧಿ ಕುರಿತು ಮನವಿ ಕೂಡ ಮಾಡಲಾಯಿತು.
ಈ ಸಂದರ್ಭದಲ್ಲಿ ಮನವಿ ಸ್ವೀಕರಿಸಿದ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರು ನಾನು ಬುದ್ಧಿವಂತ ಸಮಾಜದ ಏಳಗೆಗಾಗಿ ಪ್ರಾಮಾಣಿಕವಾಗಿ ಪ್ರಯತ್ನ ಪಡಲು ಶತಸಿದ್ಧ ಹಾಗೂ ಮುಂಬರುವ ಕಲಾಪದಲ್ಲಿ ಬಾಹ್ಮಣ ಸಮಾಜದ ಬೆಳವಣಿಗೆ ಧ್ವನಿಯಾಗುವೆ, ಅತಿ ಮುಖ್ಯವಾದ ಇಡಬ್ಲ್ಯೂ ಎಸ್ ಬಗ್ಗೆ ಕಲಾಪದಲ್ಲಿ ಅತಿ ಶ್ರೀಘÀ್ರದಲ್ಲಿ ಜಾರಿಮಾಡಲು ಧ್ವನಿಗೂಡಿಸುವೆ ಮತ್ತು ಇ ನ್ನಿತರ ಬೇಡಿಕೆಗಳಾದ ನಗರಾಭಿವೃದ್ದಿ ಮತ್ತು ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕ, ವಿಪ್ರ ಭವನ ಹಾಗೂ ಬ್ರಾಹ್ಮಣ ಅಭಿವೃದ್ಧಿ ನಿಗಮದ ಅಧ್ಯಕ್ಷರ ಆಯ್ಕೆ ಬಗ್ಗೆ ಸಂಬಂಧ ಪಟ್ಟ ಸಚಿವರಿಗೆ, ಶಾಸಕರಿಗೆ ಹಾಗೂ ಅಧಿಕಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಲು ಮನವಿಕೂಡ ಮಾಡುವೆನೆÉಂದರು. ಮುಂಬರುವ ಲೋಕಸಭೆ ಚುಣಾವಣೆಯಲ್ಲಿ ಬ್ರಾಹ್ಮಣ ಸಮಾಜದ ಸಹಕಾರ ಬಹಳ ಮುಖ್ಯ, ನಿಮ್ಮ ಸಹಕಾರ ನಮ್ಮ ಜೊತೆಯಲ್ಲಿ ಇದ್ದರೆ ನಿಮ್ಮ ಜೊತೆ ಸದಾಕಾಲನಾವುಗಳು ಇರುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬ್ರಾಹ್ಮಣ ಆರ್ಗನೈಜೇಷನ್ ಆಫ್ ಇಂಡಿಯಾ ( ಬಿ.ಓ.ಐ) ರಾಜ್ಯಾಧ್ಯಕ್ಷ ರವೀಂದ್ರ ಕುಲಕರ್ಣಿ, ಜಿಲ್ಲಾಧ್ಯಕ್ಷ ವೆಂಕಟೇಶ ಕುಲಕರ್ಣಿ, ಗ್ರಾಮಿಣ ಅಧÀ್ಯಕ್ಷ ವೆಂಕಟೇಶ ಕುಲಕರ್ಣಿ, ಯುವ ಅಧ್ಯಕ್ಷ ಗುರುರಾಜ ಕುಲಕರ್ಣಿ, ಪ್ರಧಾನ ಕಾರ್ಯದರ್ಶಿ ಸುಧಾಕರ ಊಡಭಾಳಕರ, ನಾರಾಯಣ ಆಚಾರ್ಯ, ರಾಘವೇಂದ್ರ ಕುಲಕರ್ಣಿ ಗಾಣಗಾಪುರ ಉಪಸ್ಥಿತರಿದ್ದರು.