ಇಡಪನೂರು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

ರಾಯಚೂರು.ನ.೧೮- ೨೦೨೦ ೨೩ನೇ ಸಾಲಿನ ರಾಯಚೂರು ಜಿಲ್ಲಾ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟವು ಬುಧವಾರದಂದು ಲಿಂಗಸೂಗೂರಿನಲ್ಲಿ ಏರ್ಪಡಿಸಲಾಗಿತ್ತು.
ಈ ಕ್ರೀಡಾಕೂಟದಲ್ಲಿ ರಾಯಚೂರು ತಾಲೂಕಿನ ಇಡಪನೂರು ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ೮೦೦ ಮೀ ಓಟದಲ್ಲಿ ಕು.ಸುರೇಶ,ನರಸಿಂಹ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ.೪೦೦ ಮೀ ಓಟದಲ್ಲಿ ಕು.ನರಸಿಂಹ,ಭೀಮಯ್ಯ ತೃತೀಯ ಸ್ಥಾನ ಪಡೆದು ಶಾಲೆಯ ಕೀರ್ತಿಯನ್ನು ಜಿಲ್ಲಾ ಮಟ್ಟದಿಂದ ರಾಜ್ಯಮಟ್ಟಕ್ಕೆ ವಿಸ್ತರಿಸಿದ ವಿದ್ಯಾರ್ಥಿಗಳಿಗೆ ಶಾಲೆಯ ಮುಖ್ಯಗುರುಗಳಾದ ಅಂಜನೇಯ.ಕೆ ದೈಹಿಕ ಶಿಕ್ಷಣ ಶಿಕ್ಷಕರು ನರಸಪ್ಪ.ಎನ್,ವಿಜಯಲಕ್ಷ್ಮಿ ಗಾಂವಕರ,ಪ್ರಮೀಳ ಕುಮಾರಿ,ರತ್ನಮ,ಅನ್ವರ ಉಲ ಹಕ, ಚಂದ್ರಶೇಖರ,ಸುರೇಶ,ಸುಮಯ್ಯ ಮಕ್ಕಳ ಸಾಧನೆಗೆ ಅಭಿನಂದಿಸಿರುತ್ತಾರೆ.