ಇಡಪನೂರು: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ರಾಯಚೂರು,ಮಾ.೦೯- ತಾಲೂಕಿನ ಇಡಪನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.
ಶಾಲೆಯ ಎಲ್ಲಾ ಗುರುಮಾತೆಯರನ್ನು, ಅಡುಗೆ ಸಿಬ್ಬಂದಿಯನ್ನು ಗೌರಪೂರ್ವಕವಾಗಿ ಸತ್ಕಾರಮಾಡಿ ಜ್ಯೋತಿಯನ್ನು ಬೆಳಗಿಸುವ ಮೂಲಕ ಕ್ಷೇತ್ರಶಿಕ್ಷಣಾಧಿಕಾರಿಗಳಾದ ಚಂದ್ರಶೇಖರ ಭಂಡಾರಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಹೆಣ್ಣು ಅಬಲೆಯಲ್ಲ ಸರ್ವತಾ ಸಬಲಳು. ಇಂದು ಎಲ್ಲಾ ಕ್ಷೇತ್ರದಲ್ಲಿಯೂ ಮೂಂಚೂಣಿಯಲ್ಲಿರುವ ಮಹಿಳೆಯನ್ನು ಗೌರವಿಸಬೇಕು ಹಾಗೂ ಲಿಂಗ ಸಮಾನತೆಯನ್ನು ಎತ್ತಿಹಿಡಿದು ಬಾಲ್ಯವಿವಾಹಕ್ಕೆ ಕಡಿವಾಣ ಹಾಕಲು ವಿದ್ಯಾರ್ಥಿನಿಯರು ಪಣತೊಡಬೇಕೆಂದು ಕರೆನೀಡಿದರು ಹಾಗೂ ರಾಜ್ಯಮಟ್ಟದ ವಾರ್ಷಿಕ ಪರೀಕ್ಷೆ ಎದುರಿಸುವ ೮ನೇ೧೦ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಶುಭಕೋರಿ ತಾಲೂಕಿನ ಎಲ್ಲಾ ಮಹಿಳೆಯರಿಗೆ ಮಹಿಳಾ ದಿನಾಚರಣೆ ಶುಭಾಶಯಗಳನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಗ್ರಾಮಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ರೇಖಾರವರು ಮಾತನಾಡಿ, ಮಹಿಳೆಯರು ಮುನ್ನುಗ್ಗುವ ಪ್ರವೃತ್ತಿಯನ್ನು ಬೆಳಸಿಕೊಳ್ಳಬೇಕು, ಅಡೆತಡೆಗಳನ್ನು ಎದುರಿಸಿ ವಿದ್ಯಾರ್ಥಿನೀಯರು ವಿದ್ಯಾಭ್ಯಾಸ ಮಾಡಬೇಕು. ಆತರದ ಮನಸ್ಥಿತಿಯನ್ನು ಎದುರಿಸಿದ ನಾನು ಇಂದು ಅಧಿಕಾರಿಯಾಗಿ ನಿಮ್ಮ ಮುಂದೆ ಇರುವೆ ಎಂದು ಸ್ಪೂರ್ತಿ ತುಂಬಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯಗುರುಗಳು ಅಂಜನೇಯ.ಕೆ ವಹಿಸಿದರು. ವಿಜಯಲಕ್ಷ್ಮಿ ಗಾಂವಕರ್, ರತ್ನಮ್ಮ, ನಾಗರತ್ನ, ಕು.ಸುಮಯ್ಯ, ಕೆಜಿಬಿವಿ ಶಾಲೆಯ ವಾರ್ಡ್‌ನ್ ಮಂಜುಳ ಅಡುಗೆ ಸಿಬ್ಬಂದಿಗಳಾದ ಅಂಜಿನಮ, ರೆಹೆನಾ, ಈರಮ್ಮ, ಸಂಪತಮ್ಮ, ರೇಣುಕಮ್ಮ ವೇದಿಕೆಯನ್ನು ಹಂಚಿಕೊಂಡರು.
ಕಾರ್ಯಕ್ರಮವನ್ನು ಚಂದ್ರಶೇಖರ್ ನಿರೂಪಿಸಿದರೆ ನರಸಪ್ಪ ಎನ್. ಸ್ವಾಗತಿಸಿದರು. ಸುರೇಶ ವಂದಿಸಿದರು.