ಇಟ್ಸಿ ಬಿಟ್ಸಿ ಸಂಸ್ಥೆಯನ್ನು ಉತ್ತೇಜಿಸಿ

ಮೈಸೂರು, ನ.4: ಕಲೆ, ಕರಕುಶಲ ಕಲೆ, ಹವ್ಯಾಸಿ ಹಾಗೂ ಇನ್ನಿತರೆ ವಿಷಯಗಳಿಗೆ ಖ್ಯಾತಿ ಪಡೆದಿರುವ ಇಟ್ಸಿ ಬಿಟ್ಸಿ ಸಂಸ್ಥೆ ವತಿಯಿಂದ ಅರಮನೆ ನಗರಿ ಮೈಸೂರಿನಲ್ಲಿ ನ.7ರಂದು ಮಾರಾಟ ಮಳಿಗೆಯನ್ನು ತೆರೆಯಲಾಗುವುದು ಎಂದು ಸಂಸ್ಥೆಯ ಸಂಸ್ಥಾಪಕ ಹರೀಶ್ ಕಲೋಸ್ ಪೇಟ್ ತಿಳಿಸಿದರು.
ಅವರು ಇಂದು ಬೆಳಿಗ್ಗೆ ಸುದ್ದಿಗೋಷ್ಠಿಯಲ್ಲಿ ಮತನಾಡುತ್ತಾ ತಮ್ಮ ಸಂಸ್ಥೆಯು ಮಕ್ಕಳ ಆಟಿಕೆಗಳು, ದೀಪಾವಳಿಗೆ ಯೋಗ್ಯ ಸಂಗ್ರಹ ವಸ್ತುಗಳು, ಕೈಯಲ್ಲಿ ತಯಾರಿಸಿದ ಕೃತಕ ಹೂಗಳು, ಹುಟ್ಟುಹಬ್ಬದ ಆಚರಣೆಗೆ ಸಂಬಂಧಿಸಿದಂತಹ ವಸ್ತುಗಳು ಸೇರಿದಂತೆ ವಿವಿಧ ಉತ್ಪನ್ನ ವಸ್ತುಗಳನ್ನು ಸಿದ್ಧಪಡಿಸಲಾಗುತ್ತಿದೆ. ಇವುಗಳಿಗೆ ದೇಶ, ವಿದೇಶಗಳಲ್ಲಿ ಅಪಾರವಾದ ಬೇಡಿಕೆ ಇದೆ ಎಂದರು.
ನಮ್ಮ ಸಂಸ್ಥೆಯು 2007 ರಲ್ಲಿ ಆರಂಭಗೊಂಡ ದಿನಗಲಲ್ಲಿ ಹೆಚ್ಚಿನ ಪ್ರಗತಿ ಕಂಡು ಬಂದಿರುವುದಿಲ್ಲ. 2011 ರಲ್ಲಿ ಆಸ್ಟ್ರೇಲಿಯಾದಲ್ಲಿ ಏರ್ಪಡಿಸಿದ್ದ ವಸ್ತುಪ್ರದರ್ಶನದಲ್ಲಿ ಅಲ್ಲಿನ ಗ್ರಾಹಕರು ನಮ್ಮ ವಸ್ತುಗಳನ್ನು ಅಧಿಕ ಪ್ರಮಾಣದಲ್ಲಿ ಖರೀದಿಸುವುದರ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿತು. ಪ್ರಸ್ತುತ ದೇಶದ ಹಲವು ರಾಜ್ಯಗಳಲ್ಲಿ ನಮ್ಮ ಸಂಸ್ಥೆಯು ವಹಿವಾಟು ನಡೆಸುತ್ತಿದ್ದು, ಮೈಸೂರಿನ ಗೋಕುಲಂ ಬಡಾವಣೆಯಲ್ಲಿ ಹೊಸ ಮಳಿಗೆಯನ್ನು ತೆರೆದು ವಹಿವಾಟು ಆರಂಭಿಸಲಾಗುವುದು. ಅಂದು ನಮ್ಮಲ್ಲಿ ಖರೀದಿಸುವ ವಸ್ತುಗಳಿಗೆ ಶೇ.80 ರಷ್ಟು ರಿಯಾಯಿತಿ ಇರುತ್ತದೆ ಎಂದು ತಿಳಿಸಿದ ಹರೀಶ್ ಕಲೋಸ್ ನಗರದ ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳುವುದರ ಮೂಲಕ ನಮಗೆ ಉತ್ತೇಜನ ನೀಡುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ರಶ್ಮಿ ಕಲೋಸ್ ಪೇಟ್, ಸಂಸ್ಥೆಯ ಆಡಳಿತಾಧಿಕಾರಿ ನಾಗೇಶ್ ಉಪಸ್ಥಿತರಿದ್ದರು.