ಇಟ್ಟ ಗುರಿಯಿಂದ ವಿಮುಖರಾಗದೆ ಸಾಧನೆ ಮಾಡಿ


ದಾವಣಗೆರೆ,ನ.28: ಕಷ್ಟಗಳಿಗೆ ಹೆದರಿ, ಇಟ್ಟ ಗುರಿಯಿಂದ ವಿಮುಖರಾಗದೇ ಉತ್ತಮ ಸಾಧನೆಗೆ ಮುಂದಾಗಬೇಕು ಎಂದು ಬೆಂಗಳೂರಿನ ಅಪರಾಧ ತನಿಖಾ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್ ಕರೆ ನೀಡದರು.ನಗರದ ತ್ರಿಶೂಲ್ ಕಲಾಭವನದಲ್ಲಿಂದು ಧಾರವಾಡದ ಯೆಸ್ ಯುಪಿಎಸ್‌ಸಿ ತರಬೇತಿ ಸಂಸ್ಥೆಯಿAದ ಏರ್ಪಡಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಯುಪಿಎಸ್‌ಸಿ, ಕೆಪಿಎಸ್‌ಸಿ ಹುದ್ದೆಗಳು ನೀವು ಗಳಿಸಿದ ಅಂಕಗಳಿAದ ಮಾತ್ರ ಸಿಗುವುದಿಲ್ಲ. ಅಂಕಗಳ ಜೊತೆಗೆ ನಿಮ್ಮ ಸಾಮರ್ಥ್ಯವು ಬೇಕಾಗಿದೆ. ಹೀಗಾಗಿ ಕಲಿಕೆಯ ಜೊತೆಗೆ ನಾಯಕತ್ವದ ಗುಣವನ್ನು ಬೆಳೆಸಿಕೊಳ್ಳಬೇಕು ಎಂದರು.
ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಗುಣ ಮೊದಲಿರಬೇಕು. ಜೊತೆಗೆ ನಿಮ್ಮ ಭವಿಷ್ಯವನ್ನು ರೂಪಿಸುವಂತಹ ಸ್ನೇಹಿತರ ಸಹವಾಸ ಮಾಡಬೇಕು. ರಾಜ್ಯ, ರಾಷ್ಟçದ ಬಗ್ಗೆ ಕಾಳಜಿ ಹೊಂದಬೇಕು. ಸಾಮಾಜಿಕ ಕಳಕಳಿ ಬೆಳೆಸಿಕೊಳ್ಳಬೇಕು ಎಂದರು.ಸಮಾಜದ ಸಮಸ್ಯೆಗಳನ್ನು ಬಗೆಹರಿಸುವ ಆಶಯದೊಂದಿಗೆ ಅಧಿಕಾರಿಯಾಗಿ, ಸಮಾಜದಲ್ಲಿರುವ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಹುಡುಕಬೇಕು. ನಿಮ್ಮಿಂದ ಸಮಸ್ಯೆ ಬಗೆಹರಿಸಲು ಸಾಧ್ಯವಾಗದಿದ್ದರೂ ಪರವಾಗಿಲ್ಲ. ಆದರೆ, ನಿಮ್ಮಿಂದ ತಪ್ಪಾಗದಂತೆ ನೋಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಮಾತನಾಡಿ, ಯುಪಿಎಸ್‌ಸಿ ಹುದ್ದೆ ಅಡ್ಜೆಸ್ಟ್ಮೆಂಟಿAಗ್ ಮೇಲೆ ದೊರೆಯುತ್ತದೆ ಎಂಬ ತಪ್ಪುಭಾವನೆಯಿಂದ ಮೊದಲು ಹೊರಬರಬೇಕು. ಇಲ್ಲಿ ಯಾವುದೇ ಅಕ್ರಮ ಇಲ್ಲದೆ ಪರಿಶುದ್ಧವಾಗಿ ಅಧಿಕಾರಿಗಳನ್ನು ಆಯ್ಕೆ ಮಾಡುತ್ತಾರೆ. ಇನ್ನೂ ಹಲವರಲ್ಲಿ ಉನ್ನತ ಹುದ್ದೆ ದೊರೆಯುವುದು ಅವರ ಲಕ್ಕು, ಚಾನ್ಸ್ ಎಂಬ ಭಾವನೆ ಹೊಂದಿರುವುದು ಸರಿಯಲ್ಲ. ಶೇ.95 ರಷ್ಟು ಪರಿಶ್ರಮ ಇರಬೇಕು ಎಂದು ಹೇಳಿದರು.
ಯಾವುದೇ ಕಾರಣಕ್ಕೂ ಕಾಲ ಹರಣ ಮಾಡದೆ ಚೆನ್ನಾಗಿ ಓದಬೇಕು. ಪ್ರಯತ್ನ ಇದ್ದರೆ ಎಲ್ಲವೂ ಸಾಧ್ಯವಾಗಲಿದ್ದು, ನಿರಂತರ ಪ್ರಯತ್ನ ನಡೆಸಬೇಕು ಎಂದರು.
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ, ವಿದ್ಯಾರ್ಥಿಗಳು ದೊಡ್ಡ ಕನಸು ಕಾಣುವುದರ ಜೊತೆಗೆ ಸ್ಪಷ್ಟ ಗುರಿ ಹೊಂದಿರಬೇಕು. ಆ ಗುರಿ ಸಾಧನೆಯ ಹಾದಿಯಲ್ಲಿ ಹಲವು ಅಡೆತಡೆ ಬಂದರೂ ಅದನ್ನು ಲೆಕ್ಕಿಸದೆ ಗುರಿ ಮುಟ್ಟಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಆದಾಯ ತೆರಿಗೆ ಇಲಾಖೆ ಅಧಿಕಾರಿ ಅಶೋಕ್ ಮಿರ್ಜಿ, ಡಿವೈಎಸ್‌ಪಿ ನರಸಿಂಹ ವಿ. ತಾಮ್ರಧ್ವಜ್ ಮತ್ತಿತರರು ಉಪಸ್ಥಿತರಿದ್ದರು.