ಇಟಲಿ ಮೂಲದ ಪ್ರತಿಷ್ಠಿತ ಪ್ರಶಸ್ತಿಗೆ ಭಾರತೀಯ ಯುವ ವಿಜ್ಞಾನಿ ಆಯ್ಕೆ

ಬೆಂಗಳೂರು, ಡಿ.29- ಇಟಲಿ ಮೂಲದ ವರ್ಲ್ಡ್ ಅಕಾಡೆಮಿ ಆಫ್ ಸಾಯನ್ಸಸ್ ನೀಡುತ್ತಿರುವ ಪ್ರಥಮ ಪ್ರತಿಷ್ಠಿತ ಯಂಗ್ ಸೈಂಟಿಸ್ಟ್ ಅವಾರ್ಡ್ ಫಾರ್ ಫ್ರಂಟಿಯರ್ ಸಾಯನ್ಸ್ ಪ್ರಶಸ್ತಿಗೆ ಪ್ರೊಫೆಸರ್ ಪರಮೇಶ್ವರನ್ ಅಜಿತ್ ಭಾಜನರಾಗಿದ್ದಾರೆ.

ಟಾಟಾ ಇನ್‍ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ಇಲ್ಲಿನ ಇಂಟರ್ನ್ಯಾಷನಲ್ ಸೆಂಟರ್ ಫಾರ್ ಥಿಯರಿಟಿಕಲ್ ಸಾಯನ್ಸಸ್ ವಿಜ್ಞಾನಿಯಾಗಿರುವ ಪ್ರೊಫೆಸರ್ ಪರಮೇಶ್ವರನ್ ಅಜಿತ್
ಭೌತಿಕ ವಿಜ್ಞಾನಗಳ ವಿಭಾಗದಲ್ಲಿ ಆಯ್ಕೆಯಾಗಿದ್ದಾರೆ.

ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಯುವ ವಿಜ್ಞಾನಿಗಳ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.