ಇಟಗ್ಯಾಳ ಮನೆ ಮನೆಗೆ ಮಂತ್ರಾಕ್ಷತೆ ವಿತರಣೆ

ಔರಾದ್ : ಜ.17:ಜ.22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ತಾಲೂಕಿನ ಇಟಗ್ಯಾಳ ಗ್ರಾಮದಲ್ಲಿ ಮನೆ ಮನೆ ತೆರಳಿ ಅಯೋಧ್ಯೆಯಿಂದ ಬಂದಿರುವ ಮಂತ್ರಾಕ್ಷತೆ ಮತ್ತು ಕರಪತ್ರ ನೀಡಲಾಯಿತು.

ದೇಗಲೂರ ಚಂದ್ರಶೇಖರ ಮಹಾರಾಜರು ಮಂತ್ರಾಕ್ಷತೆ ವಿತರಣೆಗೆ ಚಾಲನೆ ನೀಡಿದರು.

ಈ ವೇಳೆ ಗ್ರಾಪಂ ಮಾಜಿ ಅಧ್ಯಕ್ಷ ಶರಣಬಸಪ್ಪ ಪಾಟೀಲ್, ಗಣಪತರಡ್ಡಿ ತಾಳೆ, ಶಿವಾಜಿ ಪಾಟೀಲ್, ವಿಠ್ಠಲರಾವ ಪಾಟೀಲ್, ದತ್ತು ರಡ್ಡಿ, ಚಂದಾರಡ್ಡಿ ತಾಳೆ, ಮಾರುತಿ ದುಡಕನಾಳೆ, ಸುಧಾಕಾರ ಪಾಟೀಲ್, ಅಶೋಕ ರಡ್ಡಿ, ಮಹೇಶ ಪಾಟೀಲ್, ಮಹಾದೇವ ಪಾಟೀಲ್ ಸೇರಿದಂತೆ ಅನೇಕರಿದ್ದರು.