ಇಟಗಿ ಬಸವೇಶ್ವರ ಜಯಂತಿ


ಸಂಜೆವಾಣಿ ವಾರ್ತೆ
ಕುಕನೂರು, ಏ.24 ತಾಲೂಕಿನ ಇಟಗಿ  ಗ್ರಾಮದಲ್ಲಿ ರವಿವಾರ ಸಂಜೆ ರೈತನ ಬೆನ್ನೆಲುಬಾದ ಎತ್ತಿನ ಮೆರವಣಿಗೆಯನ್ನು ಮಾಡುವ ಮೂಲಕ ಶ್ರೀ ಜಗಜ್ಯೋತಿ ಬಸವಣ್ಣನ ಜಯಂತಿಯನ್ನು ರೈತರು ಖುಷಿಯಿಂದ ಆಚರಿಸಿ ಸಂತಸ ವ್ಯಕ್ತಪಡಿಸಿದರು.
ಶ್ರೀ ಬಸವೇಶ್ವರ ಮೂರ್ತಿಯನ್ನು ಅಲಂಕಾರಗೊಂಡ ಕೊಲ್ಲಾರಿ ಬಂಡಿಯಲ್ಲಿ ಇರಿಸಿ ಶ್ರೀ ಮಹೇಶ್ವರ ದೇವಸ್ಥಾನದಿಂದ ಪ್ರಾರಂಭವಾಗಿ, ಮಾರುತೇಶ್ವರ ದೇವಸ್ಥಾನ, ವೀರಭಧ್ರೇಶ್ವರ ದೇವಸ್ಥಾನ ಮೈಲಾರಲಿಂಗೇಶ್ವರ ದೇವಸ್ಥಾನ ಸೇರಿ ಪ್ಯಾಟಿ ಬಸವೇಶ್ವರ ದೇವಸ್ಥಾನದ ಹತ್ತಿರ ಎತ್ತಿನ ಮೆರವಣಿಗೆ ಸಮಾರೋಪಗೊಂಡಿತು.
  ಎತ್ತಿನ ಮೆರವಣಿಗೆಯಲ್ಲಿ ಮಹೇಶ್ವರ ಭಜನಾ ಮಂಡಳಿಯ ಸದಸ್ಯರು, ರೈತರು, ಯುವಕರು ಮತ್ತು ಸಾರ್ವಜನಿಕರು ಮೆರವಣಿಗೆಯಲ್ಲಿ ಹಾಜರಿದ್ದರು.