ಇಜೇರಿ ಅಂಬೇಡ್ಕರ್ ಧ್ವಜ ಕಟ್ಟೆಗೆ ಅಪಮಾನ ಆರೋಪಿಗೆ ಗಡಿಪಾರಿಗೆ ಆಗ್ರಹ

ಯಡ್ರಾಮಿ:ಫೆ.8:ತಾಲೂಕಿನ ಇಜೇರಿ ಗ್ರಾಮದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಧ್ವಜ ಕಟ್ಟೆಗೆ ಅಪಮಾನ ಮಾಡಿದ ಕಿಡಿಗೇಡಿಗಳನ್ನು ತಕ್ಷಣ ಗಡಿಪಾರಿಗೆ ಆದೇಶ ನೀಡಬೇಕು ಎಂದು ದಲಿತ ಸೇನೆಯ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಕಲಕೇರಿ ಆಗ್ರಹಿಸಿದ್ದಾರೆ.

ಇಜೇರಿ ಗ್ರಾಮದ ಅಂಬೇಡ್ಕರ್ ಅವರ ಧ್ವಜ ಕಟ್ಟಿಗೆ ಹನುಮಾನ್ ಮೂರ್ತಿ ಸ್ಥಾಪನೆ ರೀತಿಯಲ್ಲಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ವಿಚಾರಕ್ಕೆ ಸಂಭಂದಿಸಿದ.

ವಿಚಾರಕ್ಕೆ ಕೇಳಲು ಹೊದ ದಲಿತ ಯುವಕರ ಮೇಲೆ ಹಲ್ಲೆ ಮಾಡಿದ್ದು ಜೇವರ್ಗಿ ಪೆÇಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಯೋಜನೆ ಅಡಿಯಲ್ಲಿ 9 ಜನರ ವಿರುದ್ಧ ಪ್ರಕರಣ ದಾಖಲೆ ಯಾಗಿದ್ದು.

ಕೂಡಲೇ 9 ಜನ ಆರೋಪಿಗಳನ್ನು ಬಂಧನ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಶಾಂತಿ ಉಂಟು ಮಾಡುವ ವ್ಯಕ್ತಿಗಳನ್ನು ಗಡಿಪಾರು ಆದೇಶ ನೀಡಬೇಕು ಎಂದು ಆಗ್ರಹಿಸಿದರು.

ಕಲಬುರಗಿ ಜಿಲ್ಲೆಯ ಕೂಟನೂರು ಗ್ರಾಮದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೂರ್ತಿಗೆ ಅಪಮಾನ ವಿಷಯ ಮಾಸುವ ಮುನ್ನವೇ ಈ ರೀತಿಯ ಮಾಡಿದ್ದು.ಭಾರತ ಸಂವಿಧಾನಕ್ಕೆ ಮಾಡಿದ ಅಪಮಾನವಾಗಿದೆ.

ಪದೇ ಪದೇ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುತ್ತಳಿಗೆ ಅಪಮಾನ ಮಾಡುತಿರುವುದು.ಜಿಲ್ಲೆಯಲ್ಲಿ ಕಾಣದ ಕೈಗಳ ಕೆಲಸಾ ಮಾಡುತ್ತಿದ್ದು.ತಕ್ಷಣ ಆರೋಪಿಗಳ ಜೋತೆಗೆ ಹಿಂದೆ ಅಡಗಿರುವ ದುಷ್ಟಶಕ್ತಿ ವ್ಯಕ್ತಿಗಳನ್ನು ಕೂಡ ಆರೋಪಿಗಳ ಜೋತೆಗೆ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದ್ದಾರೆ.