ಇಜೇರಿಯಲ್ಲಿ ಆಗ್ರೋಗಳ ಹಾವಳಿ!ಕಣ್ಮುಚ್ಚಿ ಕುಳಿತ ಕೃಷಿ ಅಧಿಕಾರಿಗಳು!

ವಿಶೇಷ ವರದಿ:ತಾಯಪ್ಪ.ಎಸ್.ನಾಯಕ

ಯಡ್ರಾಮಿ: ಸೆ.14:ತಾಲೂಕಿನ ಇಜೇರಿ ಗ್ರಾಮದಲ್ಲಿ ಹಲವು ಖಾಸಗಿ ಆಗ್ರೋಗಳು ರೈತರಿಗೆ ಬಾರಿ ಮೋಸ ಮಾಡುತಿದ್ದರೆ ಎಂದು ಸುದ್ದಿ ಅರಡಿದೆ.
ಮಳೆಯಿಂದ ರೈತರಿಗೆ ಈ ಬಾರಿ ಬಹಳ ಸಂಕಷ್ಟವಾಗಿದೆ ಅದು ಸಹಿಕೋಲಕ್ಕೂ ಅವರ ಹತ್ತಿರ ಧೈರ್ಯ ಇಲಾದಾಗೆ ಆಗಿದೆ. ಇಂತಹ ಪರಿಸ್ಥಿತಿ ಸಮಯದಲ್ಲಿ ಖಾಸಗಿ ಆಗ್ರೋ ದವರು ಮನಿಸಿಗೆ ಬಂದ ಹಾಗೆ ಕ್ರಿಮಿ ಕೀಟನಾಶಕ ತೊಗರಿ ಹೆಣ್ಣೇ, ಹತ್ತಿ ಹೆಣ್ಣೇ ಮತ್ತು ರಾಸಾಯನಿಕ ಗೊಬ್ಬರಗಳ ಬೆಲೆ ಸಿಕ್ಕಾಪಟ್ಟೆ ಹಚ್ಚಿ ಮಾರುತಿದ್ದಾರೆ ಇದರ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಯಾವುದೇ ರೀತಿಯಾಗಿ ಕ್ರಮ ತೆಗೆದುಕೊಳ್ಳಿತಿಲ್ಲಾ ಎಂದು ರೈತರು ಕಣ್ಣೀರು ಹಾಕುತ್ತಿದರೆ, ನಮ್ಮ ರೈತರ ಶಾಪ ಸುಮನೆ ಬಿಡುವುದಿಲ್ಲ ಎಂದು ರೈತರು ಅಳಲು ಹೇಳಿಕೊಂಡಿದ್ದಾರೆ.

ಖಾಸಗಿ ಆಗ್ರೋದವರು ರೈತರಿಗೆ 2 ಎಕ್ಟರ್ ಜಮೀನಿಗೆ ಸುಮಾರು 8000 ರೂಪಾಯಿ ಬೆಲೆಯ ಒಳೆಯ ಹೆಣ್ಣೇ ಇದೆ ಇದನ್ನು ತೆಗೆದುಕೊಂಡು ಹೋಗಿ ಒಡೆಯರಿ ಒಳ್ಳೆ ಬೆಳೆ ಬರುತ್ತೆ ಅಂತ ಹೆಣ್ಣೇ ಬಾಟಲ್ ಮೇಲೆ ಇರುವ ಸ್ಟಿಕನ್ರ್ನು ತೆಗೆದು ಕೊಟ್ಟು ರೈತರ ಕಣ್ಣಿಗೆ ಮಣ್ಣು ಎರೆಚುವ ಕೆಲಸ ಮಾಡಿದ್ದಾರೆ.
ಅತೀ ಹೆಚ್ಚು ರೈತರಿಗೆ ಖಾಸಗಿ ಕಿಶನ್ ಟ್ರೇಡರ್ಸ್ ಅಂಗಡಿ ಮಾಲೀಕ ಲಾಲಾಪಟೇಲ ಎಂಬವನು ಬಹಳಷ್ಟು ರೈತರಿಗೆ ಮೋಸ ಮಾಡಿದ್ದಾನೆ ಎಂದು ರೈತರು ಆರೋಪ ಮಾಡಿದ್ದಾರೆ.ಅವರ ಅತ್ತಿರ ತೆಗೆದುಕೊಂಡ ಬಿಲ್ ನ್ನು ತೋರಿಸಿದ್ದಾರೆ ಹಾಗೆ ಹೆಣ್ಣೇ ಬಾಟಲ್ ಮೇಲಿರುವ ಸ್ಟಿಕರ್ ನ್ನು ತೆಗುದು ಕೊಡುತ್ತಿದ್ದಾರೆ ಅದು ಯಾಕ ಅಂತ ನಮಗೆ ಗೊತ್ತಾಗುತ್ತಿಲ್ಲ ಎಂದು ರೈತರು ಸಾಕ್ಷಿ ಸಮೇತ ಅವರ ಅಳಲನ್ನು ಹೇಳಿಕೊಂಡಿದ್ದಾರೆ.

ಅಧಿಕಾರಿಗಳ ಭಯನೆ ನಮಗೆ ಇಲ್ಲಾ:ಕೆಲ ಆಗ್ರೋ ಮಾಲೀಕರ ಹೇಳಿಕೆ
ನಮಗೆ ಯಾರದು ಭಯನೆ ಇಲ್ಲಾ ನಾವು ಅಧಿಕಾರಿಗಳಿಗೆ ನಮ್ಮ ಕೈಲ್ಲಿ ಇಟ್ಟಿಕೊಂಡಿವೆ, ನಮ್ಮ ಬೆನ್ನು ಎಲುಬಾಗಿ ಅಧಿಕಾರಿಗಳೇ ನಿಂತು ಕೊಂಡಿದ್ದಾರೆ,ನಮ್ಮ ಆಗ್ರೋದಲ್ಲಿ ಇದೆ ಬೆಲೆ ಇರುತ್ತೆ ನೀವು ತೊಗೋತೀರಾ ತೊಗಬಹುವುದು ಇಲಂದ್ರೆ ಮುಂದೆ ಹೋಗಬಹುವುದು ಎಂದು ರಾಜಾರೋಷವಾಗಿ ಹೇಳುದ್ದೇವೆ ಎಂದು ಮಾಲೀಕರು ಹೇಳಿದ್ದಾರೆ.

ರಾಸಾಯನಿಕ ಗೊಬ್ಬರ,ತೊಗರಿ,ಹತ್ತಿ ಎಣ್ಣೆ ಬೆಲೆಯಲ್ಲಿ ಬಾರಿ ಮೋಸ

ಅತ್ತಿ ಸಸಿಗಳಿಗೆ ಗೊಬ್ಬರ ಸುಮಾರು 1350 ರಂತೆ ಸರಕಾರ ಬೆಲೆ ಇರುತ್ತೆ ಆದರೆ ಎಲ್ಲಾ ಆಗ್ರೋಗಳಲ್ಲಿ 1700 ರೂಪಾಯಿ ರಿಂದ 1900 ರೂಪಾಯಿ ವರೆಗೆ ಮಾರುತಿದ್ದಾರೆ ಹಾಗೆ ಆಗ್ರೋಗಳಿಗೆ ಯಾವ ಯಾವ ಎಣ್ಣೆಗಳು ಮಾರಬೇಕು ಎಂದು ಅವರ ಆಗ್ರೋಗಳಿಗೆ ಆದೇಶ ಇರುತ್ತೆ ಅದನ್ನು ಬಿಟ್ಟು ಆದೇಶ ಮರೆತು ಬೇರೆ ಎಣ್ಣೆಗಳು ಇಟಕೊಂಡು ರಾಜರೋಷವಾಗಿ ಮಾರಾಟ ಮಾಡುತಿದ್ದರು ಇಲ್ಲಿಯವರೆಗೂ ಯಾವ ಅಧಿಕಾರಿಗಳು ಕೂಡಾ ಇದರ ಬಗ್ಗೆ ಕ್ಯಾರೇ ಎನ್ನುತಿಲ್ಲಾ, ಹಾಗೆ ಅನುಮತಿ ಇಲದ ಆಗ್ರೋ ಇದ್ದಾವೆ ಅವರ ವಿರುದ್ಧ ಕೂಡ ಕ್ರಮ ಕೈಗೊಳ್ಳಬೇಕು ಇನ್ನು ಮುಂದೆಕೂಡಾ ಕೃಷಿ ಅಧಿಕಾರಿಗಳು ಗ್ರಾಮಕ್ಕೆ ತೆರಳಿ ಎಲ್ಲಾ ಆಗ್ರೋಗಳ ಪರಿಶೀಲನೆ ಮಾಡಬೇಕು ಮತ್ತು ಈ ರೀತಿ ಮಾರಾಟ ಮಾಡಿರುವ ಖಾಸಗಿ ಆಗ್ರೋಗಳನ್ನು ಸಿಜ್ ಮಾಡಬೇಕು ಮತ್ತು ದೂರಪಯೋಗ ಪಡಿಸಿಕೊಂಡಿರುವ ಮಾಲೀಕರ ವಿರುದ್ಧ ಕ್ರಿಮಿನಲ್ ಕೇಸ್ ಹಾಕಬೇಕು ಒಂದು ವೇಳೆ ಮಾಡದೇ ಇದ್ದಲ್ಲಿ ಇಡೀ ತಾಲೂಕಿನ ರೈತರು ಸೇರಿ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ರೈತ ಪರ,ಸಾಮಾಜಿಕ ಹೋರಾಟಗಾರ ಶ್ರವಣಕುಮಾರ ಡಿ ನಾಯಕ ರವರು ಎಚ್ಚರಿಕೆ ಮೂಲಕ ತಿಳಿಸಿದ್ದಾರೆ.