ಇಗ್ಲೆಂಡ್ ವಿರುದ್ದ ಟಿ-20 ಸರಣಿ ಭಾರತ ತಂಡ ಪ್ರಕಟ:‌ಮನಿಷ್ ಪಾಂಡೆಗೆ ಕೊಕ್,ಬೂಮ್ರಾ, ಜಡೇಜಾಗೆ ವಿಶ್ರಾಂತಿ

ನವದೆಹಲಿ, ಫೆ. 20-ಪ್ರವಾಸಿ ಇಂಗ್ಲೆಂಡ್ ವಿರುದ್ದ ನಡೆಯಲಿರುವ ಟಿ-20 ಕ್ರಿಕೆಟ್ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ.

ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಒಟ್ಟು 5 ಪಂದ್ಯಗಳು ನಡೆಯಲಿವೆ. ಅಹಮದಾಬಾದ್‌ನ ಮೊಟೇರಾ ಕ್ರೀಡಾಂಗಣದಲ್ಲೇ ಎಲ್ಲ ಪಂದ್ಯಗಳು ಮಾರ್ಚ್‌ 12ರಿದ 20ರವರೆಗೆ ನಡೆಯಲಿವೆ.

ಸೂರ್ಯ ಕುಮಾರ್ ಯಾದವ್‌, ರಾಹುಲ್ ತೆವಾಟಿಯಾ ಹಾಗೂ ಇಶಾನ್ ಕಿಶನ್‌ಗೆ ಟೀಮ್‌ ಇಂಡಿಯಾದಿಂದ ಮೊದಲ ಬಾರಿ ಕರೆ ಬಂದಿದೆ.

ಅವಕಾಶ ವಂಚಿತ ಮನೀಶ್

ಮನೀಶ್ ಪಾಂಡೆ ಹಾಗೂ ಸಂಜು ಸ್ಯಾಮ್ಸನ್ ಅವರನ್ನು ತಂಡದಿಂದ ಕೈಬಿಡಲಾಗಿದೆ. ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ ರಿಷಭ್ ಪಂತ್‌ ಅವರಿಗೆ ತಂಡದಲ್ಲಿ ಅವಕಾಶ ಲಭಿಸಿದೆ.

ಸೂರ್ಯಕುಮಾರ್ ಯಾದವ್‌ ಕಳೆದ ಬಾರಿಯ ಐಪಿಎಲ್‌ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಪರ ಅದ್ಭುತ ಪ್ರದರ್ಶನ ನೀಡಿದ್ದರು. ತಂಡವು ಐದನೇ ಬಾರಿ ಐಪಿಎಲ್‌ ಟ್ರೋಫಿ ಎತ್ತಿಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಜಸ್ಪ್ರೀತ್ ಬೂಮ್ರಾ ಹಾಗೂ ಅಲ್ ರೌಂಡರ್ ರವೀಂದ್ರ ಜಡೇಜಾ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಗಾಯಾಳುವಾಗಿ ಸುಧೀರ್ಘ ಅವಧಿಯಿಂಸ ದೂರ ಉಳಿದಿದ್ದ ಭುವನೇಶ್ ಕುಮಾರ್ ಮತ್ತೆ ತಂಡಕ್ಕೆ ವಾಪಸ್ದಾಗಿದ್ದಾರೆ.

ತಂಡ ಹೀಗಿದೆ

ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪ ನಾಯಕ), ಕೆ.ಎಲ್.ರಾಹುಲ್, ಶಿಖರ್ ಧವನ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಷಭ್ ಒಂತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಯಜುವೇಂದ್ರ ಚಾಹಲ್, ವರುಣ್ ಚಕ್ರವರ್ತಿ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರಾಹುಲ್ ತೆವಾಟಿಯಾ, ಟಿ.ನಟರಾಜನ್, ಭುವನೇಶ್ವರ್ ಕುಮಾರ್, ದೀಪಕ್ ಚಾಹರ್, ನವದೀಪ್, ಶಾರ್ದೂಲ್ ಠಾಕೂರ್