ಇಗ್ನೊದಿಂದ ಪದವಿ ಕೋರ್ಸ್ ಗಳಿಗೆ ಅರ್ಜಿ ಆಹ್ವಾನ


ದಾವಣಗೆರೆ. ಜು.೧೫; ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯದಿಂದ ಜುಲೈ , 2022 ರ ಸಾಲಿಗೆ ವಿವಿಧ ಪ್ರಮಾಣಪತ್ರ , ಡಿಪ್ಲೊಮಾ , ಪಿ.ಜಿ.ಡಿಪ್ಲೊಮಾ , ಪದವಿ ಮತ್ತು ಸ್ನಾತಕೋತ್ತರ ಪದವಿ ಕಾರ್ಯಕ್ರಮಗಳಿಗೆ ಪ್ರವೇಶಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಬೆಂಗಳೂರು ಕೇಂದ್ರ ವ್ಯಾಪ್ತಿಯ ಸಹಾಯಕ ಪ್ರಾದೇಶಿಕ ನಿರ್ದೇಶಕರಾದ ಹೇಮಾಮಾಲಿನಿ ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು ಇಗ್ನೋದಿಂದ ಈ ಬಾರಿ ಎಂಬಿಎ ಗೆ ಪ್ರವೇಶ ಪರೀಕ್ಷೆ ಇಲ್ಲದ ನೇರ ಪ್ರವೇಶವನ್ನು ನೀಡಲಾಗುತ್ತದೆ.ಎಸ್ ಸಿ,ಎಸ್ ಟಿ, ಒಬಿಸಿ  ಮತ್ತು ದೈಹಿಕವಾಗಿ ವಿಕಲಾಂಗ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮತ್ತು ಶುಲ್ಕ ಮರುಪಾವತಿ ಸೌಲಭ್ಯ ಲಭ್ಯವಿದೆ . ಆಸಕ್ತ ವಿದ್ಯಾರ್ಥಿಗಳು https://ignouadmission.samarth.edu.in ಗೆ ಅಪ್‌ಲೋಡ್ ಮಾಡುವ ಮೂಲಕ ತಮ್ಮ ಅಧ್ಯಯನ ಕೇಂದ್ರದ ಆಯ್ಕೆಯೊಂದಿಗೆ ಜುಲೈ 31 , 2022 ಆನ್‌ಲೈನ್‌ನಲ್ಲಿ ಸಲ್ಲಿಸಬಹುದು . ಹೆಚ್ಚಿನ ವಿವರಗಳಿಗಾಗಿ , rcbangalore@ignou.ac.in ಗೆ ಮೇಲ್ ಮಾಡಿ‌ ಅಥವಾ ವಾಟ್ಸಪ್ ಸಂಖ್ಯೆ 9449337272 ಗೆ SMS ಮಾಡಿ ಅಥವಾ 080-29607272 ಗೆ ಕರೆ ಮಾಡಬಹುದಾಗಿದೆ . ಆಸಕ್ತ ವಿದ್ಯಾರ್ಥಿಗಳು ದಾವಣಗೆರೆ ಇಗ್ನೊ ಕಲಿಕಾ ಕೇಂದ್ರಕ್ಕೆ ಭೇಟಿ ನೀಡಬಹುದು.ಇಗ್ನೋ ೨೧ ಸ್ಕೂಲ್ ಆಫ್ ಸ್ಟಡೀಸ್ ಮತ್ತು ೬೭ ಪ್ರಾದೇಶಿಕ ಕೇಂದ್ರಗಳು ಸುಮಾರು ೨೦೦೦ ಅಧ್ಯಯನ ಕೇಂದ್ರ ಮತ್ತು ೨೦ ಸಾಗರೊತ್ತರ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಬಿಐಇಟಿ ನಿರ್ದೇಶಕ ಪ್ರೊ.ವೈ ವೃಷಬೇಂದ್ರಪ್ಪ, ಇಗ್ನೋ ಸಂಯೋಜಕ ಡಾ.ಅಶೋಕ್ ಇದ್ದರು.