ಇಕ್ಬಾಲ್ ಅನ್ಸಾರಿಯ ಎಂಎಲ್‍ಸಿ ಮಾಡಲು ಒತ್ತಾಯ


ಗಂಗಾವತಿ: ಕಲ್ಯಾಣ ಕರ್ನಾಟಕ ಭಾಗದ ಪ್ರಭಾವಿ ಮುಖಂಡರು ಹಾಗು ಕೂದಲೆಳೆಯ ಅಂತರದಿಂದ ಸೋಲುವ ಮೂಲಕ ತಮ್ಮ ಶಕ್ತಿ ಸಾಬೀತು ಪಡಿಸಿದ ಕಲ್ಯಾಣ ಕರ್ನಾಟಕ ಭಾಗದ ಪ್ರಭಾವಿ ರಾಜಕೀಯ ಮುತ್ಸದ್ದಿ ಇಕ್ಬಾಲ್ ಅನ್ಸಾರಿಯವರನ್ನು ಎಂಎಲ್‍ಸಿ ಮಾಡಬೇಕೆಂದು ಕೊಪ್ಪಳ ಡಿಸಿಸಿ ಉಪಾಧ್ಯಕ್ಷ ಅಜ್‍ಗರ್ ಅಲಿ ಕಾಂಗ್ರೆಸ್ ಮುಖಂಡಲ್ಲಿ ಒತ್ತಾಯಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ  ಗುರುವಾರ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದರು. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಅಲ್ಪಸಂಖ್ಯಾತರು ಶೆ.88 ರಷ್ಟು ಮತ ಚಲಾವಣೆಯಾಗಿವೆ, ಒಂಬತ್ತು ಶಾಸಕರು ಆಯ್ಕೆಯಾಗಿದ್ದು, ಇಬ್ಬರಿಗೆ ಮಂತ್ರಿ ಸ್ಥಾನ ನೀಡಲಾಗಿದೆ, ಕಾಂಗ್ರೆಸ್ ಈ ಭಾಗದಲ್ಲಿ ಇನ್ನೂ ಬಲಿಷ್ಠಗೊಳ್ಳಲು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಶಕ್ತಿ ಪಕ್ಷ ಶಕ್ತಿ ವರ್ಧಿಸಿಕೊಳ್ಳಲು ಅನ್ಸಾರಿಗೆ ಎಂಎಲ್‍ಸಿ ಮಾಡುವುದು ಸೂಕ್ತ ನಿರ್ಧಾರವಾಗಲಿದೆ, ಬಲಷ್ಠ ಜನಾರ್ದನರೆಡ್ಡಿ ವಿರುದ್ಧ ತಮ್ಮ ಸಾಮಥ್ರ್ಯ ಸಾಬೀತುಪಡಿಸಿರುವ ಅನ್ಸಾರಿಯವರು ಬಹುಜನರ ಮೆಚ್ಚುಗೆಯ ಜನನಾಯಕರಾಗಿದ್ದಾರೆ ಅವರ ಪೋಷಣೆ ಕಾಂಗ್ರೆಸ್‍ಗೆ ವರದಾನವವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ದೂರದೃಷಿಯ ನಾಯಕರಾಗಿರುವ ಅನ್ಸಾರಿಯವರು, ಕಾರ್ಮಿಕ ಸಚಿವರಾಗಿದ್ದಾಗ ರೂಪಿಸಿದ ಕಾಯ್ದೆ, ಅನ್ಯ ರಾಜ್ಯಗಳು ಅನುಸರಿಸುತ್ತಿವೆ, ಚುನಾವಣೆಯಲ್ಲಿ ಜನಾರ್ದನರೆಡ್ಡಿಯವರ ದುಡ್ಡಿಗೆ ಪಕ್ಷದ ಕಾರ್ಯಕರ್ತರು ಮರುಳಾಗಿ ಅನ್ಸಾರಿಗೆ ಅಲ್ಪ ಮತಗಳಿಂದ ಸೋಲುಂಟಾಗಿದೆ, 58 ಸಾವಿರ ಮತ ಪಡೆದಿರುವುದು ಅವರ ಶಕ್ತಿಗೆ ಕನ್ನಡಿ, ದೇಶದಾದ್ಯಂತ ಕಾಂಗ್ರೆಸ್ ಪ್ರಭಾವ ಹೆಚ್ಚಿಸುವ ಸಾಮಥ್ರ್ಯ ಅನ್ಸಾರಿ ಹೊಂದಿದ್ದಾರೆ, ಕಾಂಗ್ರೆಸ್ ವರೀಷ್ಠರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರೀಯಾಂಕಾ ಗಾಂಧಿ, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗು ಡಿಸಿಸಿ ಅಧ್ಯಕ್ಷರು ಅನ್ಸಾರಿಯವರನ್ನು ಎಂಎಲ್‍ಸಿ ಮಾಡುವ ಮುಖೇನ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಬೇಕಿದೆ ಎಂದು ಅಜಗರ್ ಅಲಿ ಮನವಿ ಮಾಡಿದರು.
ಕೆಪಿಸಿಸಿ ಮೈನಾರಿಟಿ ರಾಜ್ಯ ಕಾರ್ಯದರ್ಶಿ ಹನೀಫ್, ಎನ್‍ಎಸ್‍ಯು ಮಾಜಿ ಅಧ್ಯಕ್ಷ ಅಯೂಬ್ ಅಲಿ, ಗ್ರಾಮೀಣ ಘಟಕದ ಕಾಂಗ್ರೆಸ್ ಅಧ್ಯಕ್ಷ ವಿಶ್ವನಾಥ ಮಾಲಿಪಾಟೀಲ್ ಹಾಗು ಕಾಂಗ್ರೆಸ್ ಮುಖಂಡ ಸಲೀಮ್ ಭಗವಾನ್ ಇತರರಿದ್ದರು.