ಇಎಸ್‍ಐ ಆಸ್ಪತ್ರೆ ಮೇಲ್ದರ್ಜೆಗೇರಿಸಲು ಮನವಿ

ಕಲಬುರಗಿ,ಜು 9: ನಗರದಲ್ಲಿರುವ ಇಎಸ್‍ಐ ಆಸ್ಪತ್ರೆಯನ್ನು ಮೇಲ್ದರ್ಜೆಗೆರಿಸಿ ಏಮ್ಸ್ ಆಸ್ಪತ್ರೆಯಾಗಿ ಘೋಷಿಸಲು ಮತ್ತು ಕಲಬುರಗಿ ನಗರದಲ್ಲಿ ಅನಧಿಕೃತ ಕುಡಿಯುವ ನೀರಿನ ಘಟಕಗಳಿಗೆ ಕಡಿವಾಣಹಾಕಿ ಜನತೆಗೆ ಶುದ್ಧವಾದ ಕುಡಿಯುವ ನೀರು ಪೂರೈಕೆಗಾಗಿ ಕರವೇ,ಕಾವಲುಪಡೆ ರಾಜ್ಯ ವಕ್ತಾರ ಅಮಿತ( ಮಂಜುನಾಥ ನಾಲವಾರಕರ್)ಅವರು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ದಿನನಿತ್ಯ ಜನಸಾಮಾನ್ಯರು ಕುಡಿಯುತ್ತಿರುವ ನೀರು ಪರೀಕ್ಷಿಸದೇ ಜನರಿಗೆ ಪೂರೈಕೆ ಮಾಡುತ್ತಿರುವ ಘಟಕಗಳ ವಿರುದ್ಧ ಈಗಾಗಲೇ ಕ್ರಮ ಕ್ಕೆಗೊಳ್ಳಲು ಜಿಲ್ಲಾ ಅಂಕಿತ ಅಧಿಕಾರಿ ಆಹಾರ ಸುರಕ್ಷತಾ ಗುಣಮಟ್ಟದ ಪ್ರಾಧಿಕಾರದ ಅಧಿಕಾರಿಗಳು ಅನಧಿಕೃತವಾದ ಕುಡಿಯುವ ನೀರು ಘಟಕಕ್ಕೆ ಭೇಟಿ ನೀಡಿ ನಿಷೇಧಿಸಿದ್ದು, ವಿದ್ಯುತ್ ಅಧಿಕಾರಿಗಳಿಗೆ ಫೆ.27 ರಂದು ವಿದ್ಯುತ್ ಕಡಿತ ಮಾಡಲು ಆದೇಶ ನೀಡಿದರೂ ಕೂಡ ಆ ಅನಧಿಕೃತವಾದ ಕುಡಿಯುವ ನೀರು ಘಟಕದ ವಿದ್ಯುತ್ ಸಂಪರ್ಕವು ಕಡಿತಗೊಂಡಿಲ್ಲ. ಆದ್ದರಿಂದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮವನ್ನು ಕೈಗೊಳ್ಳುವಂತೆ ಮನವಿ ಮಾಡಿದರು.ಈ ಸಂದರ್ಭದಲ್ಲಿ ಅರವಿಂದ,ನಾಟೀಕಾರ ಸಚೀನ,ಅಮರದೀಪ ಕೊಳ್ಳೂರು ಸೇರಿದಂತೆ ಇನ್ನಿತರಿದ್ದರು.