ಇಆರ್‍ಎಸ್‍ಎಸ್ ವಾಹನಗಳ ಚಾಲನೆಗೆ ಹಸಿರು ನಿಶಾನೆ

ಕಾರವಾರ,ಮೇ2 : ಕೇಂದ್ರ ಸರಕಾರ `ಒಂದು ಭಾರತ ಒಂದು ತುರ್ತು ಕರೆಸಂಖ್ಯೆ’ ಪರಿಕಲ್ಪನೆಯಡಿ ದೇಶದಾದ್ಯಂತ ಇಖSS (ಇmeಡಿgeಟಿಛಿಥಿ ಖesಠಿoಟಿse Suಠಿಠಿoಡಿಣ Sಥಿsಣem) 112 ಎಂಬ ಯೋಜನೆ ಜಾರಿಗೊಳಿಸಿದ್ದು, ಜಿಲ್ಲೆಯ ಜನರು ಎಲ್ಲ ರೀತಿಯ ತುರ್ತು ಸೇವೆಗಳಿಗಾಗಿ ಇನ್ನುಮುಂದೆ 100 ಸಂಖ್ಯೆಯ ಬದಲಾಗಿ 112 ಸಂಖ್ಯೆಗೆ ಸಂಪರ್ಕಿಸಿ ಅಗತ್ಯ ತುರ್ತು ಸೇವೆಗಳನ್ನು ಪಡೆಯಬಹುದು ಎಂದು ಉತ್ತರಕನ್ನಡ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಹೇಳಿದರು.
ಅವರು ಕಾರವಾರದ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಕವಾಯತು ಮೈದಾನದಲ್ಲಿ ಇಖSS ವಾಹನಗಳ ಚಾಲನೆಗೆ ಹಸಿರು ನಿಶಾನೆ ತೋರಿಸುವ ಮೂಲಕ ಸಾರ್ವಜನಿಕ ಸೇವೆಗೆ ನಿಯೋಜನೆಗೊಳಿಸಿ ಮಾತನಾಡಿದರು. ಇದೊಂದು ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾಗಿದ್ದು, ಪ್ರಸ್ತುತ ಚಾಲ್ತಿಯಲ್ಲಿರುವ ವಿವಿಧ ತುರ್ತು ಸೇವೆಯ ಸಂಖ್ಯೆಗಳನ್ನು ಈ ಯೋಜನೆಯಡಿ ಸಾರ್ವಜನಿಕರಿಗೆ ಎಲ್ಲ ರೀತಿಯ ತುರ್ತು ಸೇವೆಗಳನ್ನು ಅತೀ ಶೀಘ್ರದಲ್ಲಿ ಒದಗಿಸುವ ಗುರಿಯೊಂದಿಗೆ ದೇಶದಾದ್ಯಂತ ಏಕರೂಪದಲ್ಲಿ ಏಕೀಕೃತಗೊಳಿಸಲಾಗಿದೆ ಎಂದರು.
ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದ್ದು, ರಾಜ್ಯ ಸರಕಾರದ ಆದೇಶದಂತೆ ಇಖSS ಯೋಜನೆಯನ್ನು ರಾಜ್ಯ ಪೆÇಲೀಸ್ ಇಲಾಖೆಯು ಹಂತ ಹಂತವಾಗಿ ವಾಹನಗಳನ್ನು ಜಿಲ್ಲಾವಾರು ನಿಯೋಜಿಸುವ ಮೂಲಕ ರಾಜ್ಯದಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿದೆ. ಈಗ ಪೆÇಲೀಸ್ ಪ್ರಧಾನ ಕಚೇರಿಂದ ಉತ್ತರ ಕನ್ನಡ ಜಿಲ್ಲೆಗೆ ಒಟ್ಟು 16 ವಾಹನಗಳನ್ನು ಹಂಚಿಕೆ ಮಾಡಲಾಗಿದೆ ಎಂದರು.
ಈ ವಾಹನಗಳನ್ನು ಈ ಹಿಂದೆ 100 ಸಂಖ್ಯೆಗೆ ಬರುತ್ತಿದ್ದ ಕರೆಗಳು ಮತ್ತು ಅಪರಾಧ ಘಟಿಸಿದ ಸ್ಥಳಗಳ ಆಧಾರದ ಮೇಲೆ ಜಿಲ್ಲೆಯಾದ್ಯಂತ ನಿಯೋಜಿಸಲಾಗಿದೆ. ಕೇಂದ್ರ ಸರ್ಕಾರ ಏಕೀಕೃತ ತುರ್ತು ಸಂಖ್ಯೆ-112 ಅನ್ನು ನಿಗದಿಪಡಿಸಿದ್ದು, Pubಟiಛಿ Sಚಿಜಿeಣಥಿ ಂಟಿsತಿeಡಿiಟಿg Poiಟಿಣ(PಂSP) ರಾಜ್ಯಾದ್ಯಂತ ಸಾರ್ವಜನಿಕರಿಂದ ಬರುವ ಫೋನ್ ಕರೆ, ಎಸ್‍ಎಂಎಸ್, ಇ-ಮೇಲ್, ಪ್ಯಾನಿಕ್ ಸಿಗ್ನಲ್ ಮೂಲಕ ಅಗತ್ಯ ಮಾಹಿತಿ ಕಲೆಹಾಕಿ ಗರಿಷ್ಠ ನಿಖರತೆಯಿಂದ ಶೀಘ್ರವಾಗಿ ಕಾರ್ಯಾ ನಿರ್ವಹಿಸಲಾಗುವುದು ಎಂದರು.
ಜಿಲ್ಲೆಯ ಜಿಲ್ಲಾ ಪೆÇಲೀಸ್ ನಿಯಂತ್ರಣ ಕೊಠಡಿ ಮೂಲಕ ತುರ್ತು ಸೇವೆ ಅಗತ್ಯವಿರುವ ವ್ಯಕ್ತಿಯ ಅತೀ ಹತ್ತಿರ ಲಭ್ಯವಿರುವ ತುರ್ತು ಸೇವಾ ವಾಹನಕ್ಕೆ ಸೂಚನೆಗಳನ್ನು ನೀಡಲಾಗುತ್ತದೆ. 112ಗೆ ಬರುವ ಧ್ವನಿ ಕರೆ, ಮೆಸೇಜ್ ಸಂದೇಶಗಳು, 112-Iಟಿಜiಚಿ ಂಠಿಠಿ ಗೆ ಬರುವ ವಿನಂತಿಗಳು, eಡಿss112ಞಣಞ@ಞsಠಿ.gov.iಟಿ ಗೆ ಬರುವ ಇಮೇಲ್‍ಗಳು, hಣಣಠಿs://ಞಚಿ.ಟಿeeಜ.iಟಿ ಮೂಲಕ ಬರುವ ವಿನಂತಿಗಳಿಗೆ ಅತೀ ಶೀಘ್ರವಾಗಿ ಸ್ಪಂದಿಸುವ ಅತ್ಯಾಧುನಿಕ ತಂತ್ರಜ್ಞಾನದ ವ್ಯವಸ್ಥೆಗಳನ್ನು ಅಳವಡಿಕೆ ಮಾಡಲಾಗಿದೆ. 24*7 ಸೇವೆ ಲಭ್ಯವಿದ್ದು, ಕಾಲರ್‍ಗಳಿಂದ ಫೀಡ್‍ಬ್ಯಾಕ್ ಪಡೆದು ಸೇವೆಯನ್ನು ಪೂರ್ಣಗೊಳಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೆÇಲೀಸ್ ಅಧೀಕ್ಷಕ ಎಸ್. ಬದರಿನಾಥ, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಡಿವೈಎಸ್‍ಪಿ ಆರ್. ದಿಲೀಪ್, ಕಾರವಾರ ಡಿವೈಎಸ್‍ಪಿ ಅರವಿಂದ ಕಲಗುಜ್ಜಿ , ಕಾರವಾರ ಸಿಪಿಐ ಸಂತೋಷ ಶೆಟ್ಟಿ ಸೇರಿದಂತೆ ಇತರೆ ಪೆÇಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.