ಇಂಧನ ಬೆಲೆ ಏರಿಕೆ ಖಂಡಿಸಿ ತಟ್ಟೆ ಬಡಿದು ಪ್ರತಿಭಟನೆ

ಮೈಸೂರು: ಜೂ.08: ಮೈಸೂರು ಜಿಲ್ಲೆಯಲ್ಲಿ ಪೆಟ್ರೋಲ್ ಲೀಟರಿಗೆ 100ಡಿs ಡೀಸೆಲ್‍ಗೆ 90ಡಿs ದಾಟಿದ ಹಿನ್ನೆಲೆಯಲ್ಲಿ ಜೈಭೀಮ್ ಜನಸ್ಪಂದನ ವೇದಿಕೆಯಅಧ್ಯಕ್ಷರಾದ ಚೇತನ್ ಕಾಂತರಾಜು ಮೈಸೂರಿನ ಗಾಂಧಿನಗರದಲ್ಲಿ ತಮ್ಮ ಮನೆಯಿಂದಲೇ ತಟ್ಟೆ ಬಡಿದು ಪ್ರತಿಭಟನೆ ನಡೆಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿಪರೀತ ಸುಂಕ ಏರಿಕೆಯಿಂದ ಪೆಟ್ರೋಲಿಯಂ ಪದಾರ್ಥಗಳ ಬೆಲೆ ಗಗನಕ್ಕೆ ಏರುತ್ತಿದೆ ಇದರ ಪರಿಣಾಮವಾಗಿ ನಿತ್ಯ ಬಳಸುವ ವಸ್ತುಗಳ ಬೆಲೆ ತೀವ್ರ ಏರಿಕೆ ಕಂಡಿದ್ದು ಸಾಮಾನ್ಯ ಜನರ ಸಂಕಷ್ಟ ತೀವ್ರವಾಗಿದೆ.
ಕರೋನಾದಿಂದ ರೈತರು, ಕಾರ್ಮಿಕರು, ಕೂಲಿಕಾರರು ಹೀಗೆ ಎಲ್ಲಾ ವಿಭಾಗದ ಜನರು ಸಂಕಷ್ಟದಲ್ಲಿದ್ದಾಗ ಬೆಲೆ ಏರಿಕೆ ಇನ್ನಷ್ಟು ಸಂಕಷ್ಟವನ್ನು ತಂದೊಡ್ಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನತೆಯ ಬದುಕನ್ನು ಉಳಿಸಲು ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು ಸುಂಕ ಕಡಿಮೆ ಮಾಡಬೇಕೆಂದು ಜೈಭೀಮ್ ಜನಸ್ಪಂದನಾ ವೇದಿಕೆಯ ಅಧ್ಯಕ್ಷ ಚೇತನ್ ಕಾಂತರಾಜು ಒತ್ತಾಯಿಸಿದ್ದಾರೆ.
ಅಲ್ಲದೆ ಎರಡು ಸರ್ಕಾರಗಳು ಬೆಲೆ ನಿಯಂತ್ರಿಸುವ ಬಗ್ಗೆ ಗಮನ ಹರಿಸದೇ ಇರುವುದು ಆಶ್ಚರ್ಯ ಉಂಟುಮಾಡುತ್ತದೆ. ಜಿಲ್ಲೆಯಲ್ಲಿ ಬಡತನ ರೇಖೆಗಿಂತ ಕೆಳಗೆ ವಾಸಿಸುವವರಿಗೆ ಆಹಾರ ಧ್ಯಾನ ರೇಷನ್ ನೀಡಬೇಕು ಎಲ್ಲಾ ಕುಟುಂಬಗಳಿಗೆ ಹತ್ತು ಸಾವಿರ ರೂಪಾಯಿ ಪರಿಹಾರ ನೀಡಬೇಕು ಆಗುವುದಿಲ್ಲ ಸಮುದಾಯಕ್ಕೆ ವಿಶೇಷ ನೀಡಬೇಕೆಂದು ಒತ್ತಾಯಿಸುತ್ತೇನೆ.